ಮಾಲೂರು ಶ್ರೀರಾಘವೇಂದ್ರ ಗೋ ಆಶ್ರಮದಲ್ಲಿ ಭಾಷಣ ಕಾರ್ಯಾಗಾರ ಯಶಸ್ವಿಯಾಗಿ ಸಂಪನ್ನ

ಗೋವು ಶಿಕ್ಷಣ

ಮಾಲೂರು: ಭಾರತೀಯ ಗೋಪರಿವಾರ-ಕರ್ನಾಟಕದ ಗೋಮಹತಿ ವಿಭಾಗದಿಂದ ಒಂದು ದಿನದ ಭಾಷಣ ಕಾರ್ಯಗಾರವು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಗಂಗಾಪುರದ ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ನಡೆಯಿತು.

 

ಗೋಪೂಜೆ ಹಾಗೂ ಗೋಗ್ರಾಸ ನೀಡುವುದರೊಂದಿಗೆ ಶಿಬಿರವು ಆರಂಭವಾಯಿತು. ಬಳಿಕ ನಡೆದ ಕಾರ್ಯಾಗಾರದಲ್ಲಿ ಭಾರತೀಯ ಗೋಪರಿವಾರ, ಕರ್ನಾಟಕದ ಗೋಮಹತಿ ವಿಭಾಗದ ರಾಜ್ಯಾಧ್ಯಕ್ಷ ಶ್ರೀ ನಿತ್ಯಾನಂದ ವಿವೇಕವಂಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅನಂತರ ಶ್ರೀ ನಿತ್ಯಾನಂದ ವಿವೇಕವಂಶಿ, ಡಾ.ರವಿ ಪಾಂಡವಪುರ ಹಾಗೂ ಚಂದನ್ ಕಲಾಹಂಸ ಗೋವಿನ ಮಹತ್ತ್ವ ಮತ್ತು ಭಾಷಣ ತರಬೇತಿಯನ್ನು ನಡೆಸಿಕೊಟ್ಟರು. ಬಳಿಕ
ಗೋಶಾಲೆಗೆ ಭೇಟಿ ನೀಡಿ ಗೋತಳಿಗಳ ಬಗ್ಗೆ, ಮಾ ಗೋ ಪ್ರಾಡೆಕ್ಟ್ ಪ್ರೈವೇಟ್ ಲಿಮಿಟೆಡ್ ಗೆ ಭೇಟಿ ನೀಡಿ ಗವ್ಯ ಉತ್ಪನ್ನಗಳ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

 

ಕಾರ್ಯಗಾರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಶಿಬಿರಾರ್ಥಿಉಊ ಬಹಳ ಆಸಕ್ತಿಯಲ್ಲಿ ಭಾಗವಹಿಸಿ, ಸಂಪನ್ಮೂಲ ವ್ಯಕ್ತಿಗಳಲ್ಲಿ ಪ್ರಶ್ನೆ ಕೇಳಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡರು.

 

ಶ್ರೀರಾಘವೇಂದ್ರ ಗೋಆಶ್ರಮದ ಸಿಬ್ಬಂದಿಗಳು ಶಿಬಿರಾರ್ಥಿಗಳಿಗೆ ಸುಗ್ರಾಸ ಭೋಜನವನ್ನು ಪ್ರೀತಿಯಿಂದ ಉಣಬಡಿಸಿದರು.

 

ಸಮಾರೋಪ ಕಾರ್ಯಕ್ರಮವು ಕು. ಆಭಾ ಡಿ. ಸಾಗರ್ ಮತ್ತು ಕು. ಅನ್ಯಾ ಡಿ. ಸಾಗರ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಅನಂತರ ಭಾರತೀಯ ಗೋಪರಿವಾರ ಕರ್ನಾಟಕದ ಸಮಾಜ ಮಾಧ್ಯಮ ವಿಭಾಗ ರಾಜ್ಯಾಧ್ಯಕ್ಷ ಶ್ರೀ ಗಿರೀಶ್ ಆಳ್ವ ಗೋರಕ್ಷಣೆಯಲ್ಲಿ ಸಮಾಜ ಮಾಧ್ಯಮದ ಪಾತ್ರದ ಬಗ್ಗೆ ಮತ್ತು ಜವಾಬ್ದಾರಿಯ ಬಗ್ಗೆ ಮಾತನಾಡಿದರು.

 

ನಡೆದ ಕಾರ್ಯಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಶ್ರೀರಾಘವೇಂದ್ರ ಗೋಆಶ್ರಮದ ವ್ಯವಸ್ಥಾಪಕರಾದ ಶ್ರೀ ರಾಮಚಂದ್ರ ಅಜ್ಜಕಾನ ಕಾರ್ಯಾಗಾರವನ್ನು ವ್ಯವಸ್ಥೆಗೊಳಿಸಿದ್ದರು.
ಶ್ರೀ ವಿನಯ್ ಆಯನೂರು ಕಾರ್ಯಕ್ರಮವನ್ನು ನಿರೂಪಿಸಿದರು. ಭಾರತೀಯ ಗೋಪರಿವಾರದ ಸಹಕಾರ್ಯದರ್ಶಿ ಶ್ರೀ ಶಿಶಿರ ಹೆಗಡೆ ಅಂಗಡಿ ವಂದಿಸಿದರು.

 

ಶ್ರೀ ರಾಘವೇಂದ್ರ ಗೋಆಶ್ರಮದ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಶ್ರೀ ಶ್ರೀಕಾಂತ ಹೆಗಡೆ ಯಲಹಂಕ, ರಾಜ್ಯ ಗೋಪರಿವಾರದ ಪ್ರಧಾನ ಸಂಘಟನಾ ಕಾರ್ಯದರ್ಶಿ ಶ್ರೀ ಮಹೇಶ ಚಟ್ನಳ್ಳಿ, ಮಾ ಗೋ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ನ ಶ್ರೀ ಅರವಿಂದ ಶರ್ಮ, ಶ್ರೀ ಕೃಷ್ಣ ಭಟ್ ವರ್ತೂರು, ವಿದ್ಯಾರ್ಥಿ ವಾಹಿನಿಯ ಶ್ರೀಮತಿ ಸಂಧ್ಯಾ ಕಾನುತ್ತೂರು, ಗೋಕಿಂಕರೆ ಶ್ರೀಮತಿ ವಿಜಯಲಕ್ಷ್ಮೀ ಅಂಗಡಿ, ಭಾರತೀಯ ಗೋಪರಿವಾರದ ಕಾರ್ಯದರ್ಶಿ ಶ್ರೀ ಮಧು ಗೋಮತಿ, ಶ್ರೀ ಮಂಜುನಾಥ್ ಭಟ್ ಹೊಸಕೋಟೆ, ಶ್ರೀ ಮಂಜುನಾಥ್ ಹೆಗಡೆ ಹಳದಿಪುರ, ಶ್ರೀ ಶ್ರೀನಿಧಿ ಎಮ್.ಟಿ. ಇನ್ನಿತರರು ಉಪಸ್ಥಿತರಿದ್ದರು.

 

Author Details


Srimukha

Leave a Reply

Your email address will not be published. Required fields are marked *