ಬೆಂಗಳೂರು: ಹವ್ಯಕ ಮಹಾಮಂಡಲದ ವಿದ್ಯಾರ್ಥಿವಾಹಿನೀ ವಿಭಾಗದ ವತಿಯಿಂದ ದಿನಾಂಕ 16.12.2018ರಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಶ್ರೀಸಂಸ್ಥಾನದವರಿಂದ ಅನುಗ್ರಹ ಪೂರ್ವಕ ಪ್ರತಿಭಾ ಪುರಸ್ಕಾರವನ್ನು ಪಡೆದರು.
ಶ್ರೀರಾಮಚಂದ್ರಾಪುರ ಮಂಡಲಾಂತರ್ಗತ ತೀರ್ಥರಾಜಪುರ ವಲಯದ ಶ್ರೀಮತಿ ಸೌಮ್ಯಾ ಪಿ. ವಿ. ಹಾಗೂ ಶ್ರೀ ಡಾ. ಸುರೇಶ್ ಕುಮಾರ್ ಇವರ ಪುತ್ರಿ ಕು. ಯಾಮಿನೀ ಭಟ್ ಎಂಜಿನಿಯರಿಂಗ್ ಪದವಿಯಲ್ಲಿ ಎರಡು ಸ್ವರ್ಣ ಪದಕಗಳನ್ನು ಗಳಿಸಿ ವಿಶೇಷ ಸಾಧನೆಗೈದಿದ್ದಾರೆ.
ಮುಳ್ಳೇರಿಯ ಮಂಡಲಾಂತರ್ಗತ ಎಣ್ಮಕಜೆ ವಲಯದ ಶ್ರೀಮತಿ ಸುಮಿತ್ರಾ ಪಿ. ಹಾಗೂ ಶ್ರೀ ವೆಂಕಟರಾಜ ಮಿತ್ರ ಇವರ ಪುತ್ರಿ ಕು. ಮಾನಸ ಎಂ.ಟೆಕ್. ನಲ್ಲಿ ಸ್ವರ್ಣ ಪದಕವನ್ನು ಗಳಿಸುವುದರ ಮೂಲಕ ಸಾಧನೆಗೈದಿದ್ದಾರೆ.
ಉಪ್ಪಿನಂಗಡಿ ಮಂಡಲಾಂತರ್ಗತ ಕಬಕ ವಲಯದ ಶ್ರೀಮತಿ ಉಷಾ ಹಾಗೂ ಶ್ರೀ ವೆಂಕಟೇಶ ಭಟ್ ಇವರ ಸುಪುತ್ರ ಡಾ. ನವನೀತ ಭಟ್ ಆಯುರ್ವೇದ ಎಂ. ಡಿ. ಯಲ್ಲಿ ನಾಲ್ಕನೇ ಶ್ರೇಯಾಂಕವನ್ನು ಹಾಗೂ ದಕ್ಷಿಣ ಬೆಂಗಳೂರು ಮಂಡಲಾಂತರ್ಗತ ಸೋಮೇಶ್ವರ ವಲಯದ ಶ್ರೀ ಅಭಿಜ್ಞ ಕಶ್ಯಪ್ ಇವರ ಪತ್ನಿ ಶ್ರೀಮತಿ ಡಾ. ಶಾರದಾ ಸ್ಫೂರ್ತಿ (ಮುಳ್ಳೇರಿಯ ಮಂಡಲಾಂತರ್ಗತ ಪಳ್ಳತ್ತಡ್ಕ ವಲಯದ ಶ್ರೀಮತಿ ಅನ್ನಪೂರ್ಣೇಶ್ವರಿ ಸಿ. ಭಟ್ ಹಾಗೂ ಶ್ರೀ ಚಂದ್ರಶೇಖರ ಏತಡ್ಕ ಇವರ ಪುತ್ರಿ) ಆಯುರ್ವೇದ ಎಂ. ಡಿ. ಯಲ್ಲಿ ಮೊದಲನೇ ಶ್ರೇಯಾಂಕವನ್ನು ಗಳಿಸುವುದರ ಮೂಲಕ ವಿಶೇಷ ಸಾಧನೆಗೈದಿದ್ದಾರೆ.
ಉಪ್ಪಿನಂಗಡಿ ಮಂಡಲಾಂತರ್ಗತ ಮಾಣಿ ವಲಯದ ಶ್ರೀಮತಿ ಮಲ್ಲಿಕಾ ಶ್ರೀರಾಮ ಮುರ್ಗಜೆ ಹಾಗೂ ಶ್ರೀ ಶ್ರೀರಾಮ ಭಟ್ ಇವರ ಪುತ್ರ ಚಿ. ಸ್ವಸ್ತಿಕ್ ಪದ್ಮ ಪದವಿಪೂರ್ವ ವಿದ್ಯಾರ್ಥಿಯಾಗಿದ್ದು, ಈಗಾಗಲೇ ಹಲವಾರು ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿ ವಿಶ್ವದ ಗಮನ ಸೆಳೆದಿದ್ದು, ಇತ್ತೀಚೆಗೆ ಇಂಟರ್‌ನ್ಯಾಶನಲ್ ಸೈನ್ಸ್ ಆಂಡ್ ಎಂಜಿನಿಯರಿಂಗ್ ಫೇರ್- 2018 ರಲ್ಲಿ ಮಾಡಿದ ಸಾಧನೆಗಾಗಿ ಮೆಸಾಚ್ಯುಸೆಟ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಲಿಂಕನ್ ಲ್ಯಾಬೋರೇಟರಿ ಆಂಡ್ ಇಂಟರ್‌ನ್ಯಾಶನಲ್ ಆಸ್ಟ್ರೋನಾಮಿಕಲ್ ಯೂನಿಯನ್ ಅವರಿಂದ
ಪುಟ್ಟ ಗ್ರಹವೊಂದಕ್ಕೆ ತಮ್ಮ ಹೆಸರನ್ನು ನಾಮಕರಣ ಮಾಡುವ ಗೌರವಕ್ಕೆ ಪಾತ್ರರಾಗುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ.
ವಿಶಿಷ್ಟ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ತನ್ನದಾಗಿಸಿಕೊಂಡು ಏಕಾಗ್ರತೆ ಮತ್ತು ತನ್ಮಯತೆಗಳನ್ನು ಮೈಗೂಡಿಸಿಕೊಂಡು
ಅನುಪಮ ಸಾಧನೆಗೈದು
ವಿದ್ಯಾರ್ಥಿಲೋಕಕ್ಕೆ ಆದರ್ಶರಾದ ಇವರೆಲ್ಲರೂ ಈ ದಿನ ಶ್ರೀಸಂಸ್ಥಾನದವರ ವಿಶೇಷ ಅನುಗ್ರವನ್ನು ಪಡೆದುಕೊಂಡರು.