ಸಾಧಕರಿಗೆ ಶ್ರೀಸಂಸ್ಥಾನದವರಿಂದ ವಿಶೇಷ ಅನುಗ್ರಹ

ಶಿಕ್ಷಣ

 

ಬೆಂಗಳೂರು: ಹವ್ಯಕ ಮಹಾಮಂಡಲದ ವತಿಯಿಂದ ದಿನಾಂಕ 16-12-2018ರಂದು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಶ್ರೀಸಂಸ್ಥಾನದವರು ಆಶೀರ್ವದಿಸಿದರು. ಯೋಗ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀಮತಿ ಸಂಧ್ಯಾ ಎನ್. ಭಟ್ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರಿಂದ ವಿಶೇಷ ಅನುಗ್ರಹವನ್ನು ಪಡೆದುಕೊಂಡರು.

ದಕ್ಷಿಣ ಬೆಂಗಳೂರು ಮಂಡಲಾಂತರ್ಗತ ಸರ್ವಧಾರಿ ವಲಯದ ಶ್ರೀ ಪಟ್ಣಡ್ಕ ನಾರಾಯಣ ಭಟ್ ಇವರ ಪತ್ನಿ (ಪುತ್ತೂರಿನ ಮಾಜಿ ಶಾಸಕ ಹಿರಿಯ ಮುಖಂಡ ಉರಿಮಜಲು ರಾಮ ಭಟ್ ಅವರ ಪುತ್ರಿ) ಶ್ರೀಮತಿ ಸಂಧ್ಯಾ ಎನ್. ಭಟ್ ಹಲವಾರು ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ನ್ಯಾಷನಲ್ ಯೋಗ ರೆಫ್ರೀ ಆಗಿಯೂ ಹಲವು ರಾಜ್ಯಮಟ್ಟದ ಸ್ಪರ್ಧೆಗಳಿಗೆ ತೀರ್ಪುಗಾರರಾಗಿಯೂ ಭಾಗವಹಿಸಿರುತ್ತಾರೆ. ಪಂಜಾಬಿನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಇದೀಗ ಏಷ್ಯನ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.

Author Details


Srimukha

Leave a Reply

Your email address will not be published. Required fields are marked *