ಬೆಂಗಳೂರು: ಮಹಾನಗರದ ಹಂಪಿನಗರದಲ್ಲಿನ ಶ್ರೀಭಾರತೀ ವಿದ್ಯಾಲಯದಲ್ಲಿ ಶಾಲಾ ವಾರ್ಷಿಕೋತ್ಸವವು ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಾಶೀರ್ವಾದದೊಂದಿಗೆ ನೆರವೇರಿತು.
ಶ್ರೀಮಠದ ಪರಂಪರೆಯಂತೆ ಗುರುವಂದನೆಯ ಅನಂತರ ಪ್ರತಿ ವರ್ಷದಂತೆ ನಿರ್ದಿಷ್ಟ ಥೀಮ್ ಆಧಾರಿತ ಮನರಂಜನಾ ಕಾರ್ಯಕ್ರಮದಲ್ಲಿ ಈ ಬಾರಿ ಭಾರತೀಯ ಹಬ್ಬಗಳು ಎಂಬ ವಿಷಯದಲ್ಲಿ ಚಿಣ್ಣರು ಬಣ್ಣ ಬಣ್ಣದಕಾ ರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
೩ ರಿಂದ ೧೦ ನೇ ತರಗತಿಯ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಪುಟಾಣಿ ಮಕ್ಕಳು ಪ್ರಾರ್ಥನಾ ಸ್ತೋತ್ರವನ್ನು ಹಾಡಿದರು. ವೇದಿಕೆಯಲ್ಲಿ ಶ್ರೀಸಂಸ್ಥಾನದವರ ಭಾವಚಿತ್ರಗಳೊಂದಿಗೆ, ದೀಪೋಜ್ವಲನ ಮಾಡಲಾಯಿತು.
ಹುತಾತ್ಮರಾದ ಯೋಧರಿಗೆ ನಮನ:
ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಿ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಪಿರಮಿಡ್ ಪ್ರದರ್ಶನದ ಮೂಲಕ ಉಗ್ರರ ದಾಳಿಗೆ ಬಲಿಯಾದ ವೀರ ಯೋಧರಿಗೆ ಗೌರವ ಸಲ್ಲಿಸಿದರು.
ಶ್ರೀರಾಮಚಂದ್ರಾಪುರಮಠದ ವಿದ್ಯಾ ವಿಭಾಗದ ಕಾರ್ಯದರ್ಶಿಗಳಾದ ಶ್ರೀ ಪ್ರಮೋದ ಪಂಡಿತ್ , ಇಸ್ರೋ ಸಂಸ್ಥೆಯ ಹಿರಿಯ ಹಾಗೂ ವಿಶ್ರಾಂತ ವಿಜ್ಞಾನಿಗಳಾದ ಶ್ರೀ ಪಿ. ಜೆ. ಭಟ್ಟ , ಪ್ರೊಫೆಸರ್ ಡಾ. ಪರಮೇಶ್ವರ ಪಂಡಿತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.