ಬಜಕೂಡ್ಲು: ಪರಮಪೂಜ್ಯ ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿರುವ ಕಾಸರಗೋಡು ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಗುಂಪೆ ವಲಯದ ಪುತ್ತಿಗೆ ಶ್ರೀ ಸುಬ್ರಾಯ ದೇವಸ್ಥಾನದ ಹತ್ತಿರದ ಗದ್ದೆಯಲ್ಲಿ ಇದ್ದ ಮೇವಿನ ಹುಲ್ಲನ್ನು ಸಾಗಿಸಿ ತಲಪಿಸುವ ಶ್ರಮದಾನವು 12.02.2019ರಂದು ಯಶಸ್ವಿಯಾಗಿ ಜರಗಿತು.
ಸಾಯಂಕಾಲ 5 ಗಂಟೆಯಿಂದ 6ಗಂಟೆಯವರೆಗೆ ನಡೆದ ಸೇವಾಅರ್ಘ್ಯದಲ್ಲಿ ಒಟ್ಟು 36 ಗೋಣಿ ಹಸಿಸೊಪ್ಪು ಹಾಗೂ ಹುಲ್ಲನ್ನು ಸಂಗ್ರಹಿಸಲಾಯಿತು.
ಮಹಾಮಂಡಲದ ಕಾಮದುಘಾ ಕಾರ್ಯದರ್ಶಿ ಡಾ. ವೈ. ವಿ. ಕೃಷ್ಣಮೂರ್ತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶ್ರೀ ಶಂಕರನಾರಾಯಣ ಭಟ್ ಗುಂಪೆ ಕಟಾವುಯಂತ್ರದಲ್ಲಿ ಸಹಕರಿಸಿದರು. ಡಾ. ಮಾಲತಿ ಪ್ರಕಾಶ, ಶ್ರೀ ಕೇಶವಪ್ರಸಾದ ಎಡಕ್ಕಾನ, ಶ್ರೀ ಸುಬ್ರಹ್ಮಣ್ಯ ಭಟ್ ಬಜಪ್ಪೆ, ಶ್ರೀಮತಿ ಗೀತಾ ಪುತ್ತಿಗೆ, ಶ್ರೀ ಪ್ರದೀಪ ಕರ್ವಜೆ, ಶ್ರೀಮತಿ ಕಿರಣಾ ಮೂರ್ತಿ, ಶ್ರೀಮತಿ ಜಯಶ್ರೀ ಮೈರ್ಕಳ ಭಾಗವಹಿಸಿದ್ದರು. ಸ್ವರ್ಗ ಶ್ರೀ ಉದಯಕುಮಾರ ಅವರವಾಹನದಲ್ಲಿ ಗೋಶಾಲೆಗೆ ಹುಲ್ಲನ್ನು ಕಳಿಸಲಾಯಿತು.