ಶ್ರೀಭಾರತೀವಿದ್ಯಾಪೀಠದ ಮಕ್ಕಳಿಗೆ ಬೀಳ್ಕೊಡುಗೆ ; ಸ್ಪಂದನ’

ಶಿಕ್ಷಣ

ಬದಿಯಡ್ಕ: ಇತ್ತೀಚೆಗೆ ಇಲ್ಲಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಸ್ಪಂದನ ನಡೆಯಿತು.

 

ಅಭ್ಯಾಗತರಾಗಿ ಆಗಮಿಸಿದ ಸಿಂಡಿಕೇಟ್ ಬೇಂಕ್ ನ ನಿವೃತ್ತ ಪ್ರಬಂಧಕರಾದ ಶ್ರೀ ವೆಂಕಟೇಶ್ವರ ಭಟ್ಟ ಅವರು, ಶಾಲೆಯ ಪರವಾಗಿ ಮಕ್ಕಳಿಗೆ ಜ್ಞಾನದ ಪ್ರತೀಕವಾದ ಬೆಳಗುತ್ತಿರುವ ದೀಪವನ್ನು ನೀಡಿ ಮಾತನಾಡಿದರು. ಅಂಕ ಗಳಿಸುವುದೊಂದೇ ವಿದ್ಯಾರ್ಥಿಗಳ ಧ್ಯೇಯವಾಗಿರದೆ ಸರಳತೆ,ಸಭ್ಯತೆ, ಸ್ವಚ್ಛತೆ, ಬದ್ಧತೆ ಹಾಗೂ ಪ್ರೀತಿ ಎಂಬ ಪಂಚ ಸೂತ್ರಗಳನ್ನು ಅಳವಡಿಸಿ ಜೀವನ ಸಾಗಿಸಿ ಗುರಿ ತಲುಪಬೇಕು. ಸಾಗಿ ಬಂದ ದಾರಿಯನ್ನು ಮರೆಯಬಾರದು. ಪಾಲಕರ, ಶಿಕ್ಷಕರ ಹಿತನುಡಿಗಳ ಅನುಸರಣೆ ಅತೀ ಮುಖ್ಯಎಂದರು.

 

ಶಾಲೆಯ ಸ್ಥಾಪಕಾಧ್ಯಕ್ಷರಾದ ಡಾ.ವೈ.ವಿ. ಕೃಫ್ಣಮೂರ್ತಿಯವರು ಮಾತನಾಡಿ ನಮ್ಮ ಹೆಮ್ಮಯ ಸೇನಾನಿ ಅಭಿನಂದನ್ ರ ಕಾರ್ಯವನ್ನು ಪ್ರಾಸಂಗಿಕವಾಗಿ ಎತ್ತಿ ಹಿಡಿದು ಎಲ್ಲರೂ ದೇಶದಲ್ಲಿ ಅಭಿನಂದನೀಯರಾಗಬೇಕೆಂದು ಹಾರೈಸಿದರು.

 

ಶಾಲಾ ಸಂಚಾಲಕರಾದ ಶ್ರೀ ಜಯಪ್ರಕಾಶ ಪಜಿಲ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ವಿಜ್ಞಾನ ಮುಂದುವರಿದಂತೆ ನಾವೂ ಮುಂದುವರಿಯಬೇಕು ಎಂಬುವುದನ್ನು ಟೊಪ್ಪಿ ಮಾರುವವನ ಕಥೆಯ ನಿದರ್ಶನದೊಂದಿಗೆ ಹೇಳಿ ಮಕ್ಕಳನ್ನು ಹರಸಿದರು.

 

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ ಇವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಗುರು ಶಿಷ್ಯರ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸುವ ಕಾರ್ಯಕ್ರಮ ಇದಾಗಿದ್ದು ನಿಮಗಾಗಿ ನೀವು ಕಲಿತ ಶಾಲೆ ಸದಾ ತೆರದಿರುತ್ತದೆ ಎಂದರು.

 

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಗಣೇಶ್ ಪೈ , ಉಪಾಧ್ಯಕ್ಷೆ
ಶ್ರೀಮತಿ ಪ್ರಮೀಳಾ, ಖಜಾಂಚಿ ಶ್ರೀ ರಾಜಗೋಪಾಲ ಚುಳ್ಳಿಕ್ಕಾನ ಮೊದಲಾದವರು ಮಕ್ಳಳಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಶುಭ ಹಾರೈಸಿದರು.

 

ಕೆಲವು ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

 

ಇದೇ ಸಂದರ್ಭದಲ್ಲಿ 10ನೆಯ ತರಗತಿಯ ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ತಮ್ಮ ನೆನಪಿನ ಕಾಣಿಕೆಯನ್ನು ಸಮರ್ಪಿಸಿದರು.

 

9ನೆಯ ತರಗತಿಯ ಕು. ಅಪರ್ಣಾ ಪಿ ಸ್ವಾಗತಿಸಿ ಕು. ಪ್ರತೀಕಾ ಕೆ ವಂದಿಸಿದರು. ಕು.ಸಿಂಧುಶ್ರೀ ಕಾರ್ಯಕ್ರಮವನ್ನು ನಿರ್ವಹಿಸಿದರು.

Leave a Reply

Your email address will not be published. Required fields are marked *