ಬಜಕೂಡ್ಲು: ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ದಿನಾಂಕ 4-3-2019 ಸೋಮವಾರ ಸಾಯಂಕಾಲ ಘಂಟೆ 5 ರಿಂದ ಮಹಾಶಿವರಾತ್ರಿ ಮಹೋತ್ಸವವನ್ನು ಆಚರಿಸಲಾಯಿತು. ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇ| ಮೂ | ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ಶಿವಪೂಜೆ, ಎಣ್ಮಕಜೆ ವಲಯದ ಹತ್ತು ಮಂದಿ ರುದ್ರದ್ಯಾಯಿಗಳಿಂದ ರುದ್ರಪಾರಾಯಣ, ಶಿವಪಂಚಾಕ್ಷರೀ ಮಂತ್ರಜಪ ಹಾಗೂ ವಿಭೂತಿ ತಯಾರಿಗಾಗಿ ಬೆರಣಿ ಉರಿಸುವ ಕಾರ್ಯಕ್ರಮ ಗಳನ್ನು ನಡೆಸಲಾಯಿತು.
ಮುಳ್ಳೇರಿಯಾ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಶ್ರೀ ಕೇಶವಪ್ರಸಾದ ಎಡಕ್ಕಾನ ಇವರು ಗೋಪೂಜೆ ನಡೆಸುವ ಮೂಲಕ ತಮ್ಮಜನ್ಮೋತ್ಸವವನ್ನು ಸಕುಟುಂಬ ಗೋಶಾಲೆಯಲ್ಲಿ ಆಚರಿಸಿದರು.
ಮುಳ್ಳೇರಿಯಾ ಮಂಡಲ ಕಾರ್ಯದರ್ಶಿಗಳು, ಎಣ್ಮಕಜೆ ವಲಯ ಪದಾಧಿಕಾರಿಗಳು, ಗೋಶಾಲೆ ಪದಾಧಿಕಾರಿಗಳು ಹಾಗು ಗೋಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾದರು.