ಮುಜುಂಗಾವು: ದಿನಾಂಕ 22.2.2019ರಂದು ಸ್ಕೌಟ್ ಮತ್ತು ಗೈಡ್ ಸ್ಥಾಪಕ ಬೇಡನ್ ಪವೆಲ್ ರ ಜನ್ಮದಿನದ ನೆನಪಿಗಾಗಿ ಕಾಸರಗೋಡು ಜಿಲ್ಲಾ ಸ್ಕೌಟ್ ಮತ್ತು ಗೈಡ್ ಹಾಗೂ ವಿದ್ಯಾಪೀಠದ ಸಹಯೋಗದಲ್ಲಿ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಸ್ಪಂದನ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ನಿಮಿತ್ತ ಬೇಡನ್ ಪವೆಲ್ ರ ನೆನಪಿನಲ್ಲಿ ಸಮೀಪದ ಶ್ರೀ ಅಪ್ಪು ಪಾಟಾಳಿಯವರ ಮಗ ದೃಷ್ಠಿ ಹೀನ ಯುವಕನಿಗೆ ಧನಸಹಾಯ ಮಾಡಲಾಯಿತು.
ಕಾಸರಗೋಡು ಜಿಲ್ಲಾ ಸ್ಕೌಟ್ ಗೈಡ್ ನಿರ್ದೇಶಕರಾದ ಶ್ರೀ ಕಿರಣಪ್ರಸಾದ್ ಮಾತನಾಡಿ, ಸ್ಕೌಟ್ ಗೈಡ್ ನಮಗೆ ಮಾನವೀಯತೆಯನ್ನು ಕಲಿಸುವ ಕ್ಷೇತ್ರ. ಯಾವುದೇ ಕಷ್ಟದ ಪರಿಸ್ಥಿತಿಯಲ್ಲೂ ಅದನ್ನು ಮೆಟ್ಟಿನಿಂದು ಬದುಕಲು ಕಲಿಸುವುದರ ಜೊತೆಗೆ ಸಂಕಷ್ಟದಲ್ಲಿರುವವರನ್ನೂ ಮೇಲೆತ್ತಲು ಹೇಳಿಕೊಡುತ್ತದೆ ಎಂದರು.
ಪಿ.ಟಿ.ಎ. ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಆಚಾರ್ಯ ಮಾತನಾಡಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಕಷ್ಟದಲ್ಲಿರುವವರಿಗೆ ತಮ್ಮಕೈಲಾದ ಸಹಾಯ ಮಾಡುವುದು, ಯಾವುದೇ ವಿಪರೀತ ಪರಿಸ್ಥಿತಿಯನ್ನು ಎದುರಿಸಲು ಎಳವೆಯಲ್ಲೇ ಕಲಿಯುವುದರಿಂದ ಮುಂದೆ ಅವರು ಸಮಾಜ ಗುರುತಿಸುವ ವ್ಯಕ್ತಿಗಳಾಗಲು ಇದು ಸೋಪಾನ ಎಂದರು.
ವೇದಿಕೆಯಲ್ಲಿ ಸ್ಕೌಟ್ ಗೈಡಿನ ಕುಂಬಳೆ ಕಾರ್ಯಕರ್ತರಾದ ಶ್ರೀ ವಿಜಯಕುಮಾರ್ ಹಾಗೂ ಗೈಡ್ ಕಾರ್ಯರ್ತೆ ಶ್ರೀಮತಿ ಜ್ಯೋತಿಲಕ್ಷ್ಮಿ ಹಾಗೂ ನಿವೃತ್ತ ಅಧ್ಯಾಪಿಕೆ ಶ್ರೀಮತಿ ಶ್ರೀಕುಮಾರಿ, ಶಾಲಾ ಆಡಳಿತ ಸಮಿತಿ ಕಾರ್ಯದರ್ಶಿಗಳಾದ ಶ್ರೀ ಶ್ಯಾಮರಾಜ್ ದೊಡ್ಡಮಾಣಿ, ಶಾಲಾಆಡಳಿತಾಧಿಕಾರಿ ಶ್ರೀ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಿತ್ರಾಸರಸ್ವತಿ ವೇದಿಕೆಯಲ್ಲಿದ್ದು ಶುಭಹಾರೈಸಿದರು.
ಆಡಳಿತಾಧಿಕಾರಿಗಳಾದ ಶ್ರೀಶ್ಯಾಂಭಟ್ ದರ್ಭೆಮಾರ್ಗ ಪ್ರಸ್ತಾವನೆ ಮಾಡಿದರು. ಗೈಡ್ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಕು. ಮಧುರಾ ಕಾರ್ಯಕ್ರಮ ನಿರ್ವಹಿಸಿದಳು. ವಿದ್ಯಾರ್ಥಿ ಕು. ಸಂದೇಶ ಧನ್ಯವಾದವಿತ್ತನು.