ಅಡಿಕೆ ವರ್ತಕ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀ ಆರ್. ಎಸ್. ಹೆಗಡೆ ಹರಗಿ ಆಯ್ಕೆ

ಸುದ್ದಿ

 

ಸಾಗರ: ದಿನಾಂಕ 23.02.2019ರಂದು ಸಾಗರದ ಬಾಪಟ್ ಸಭಾಂಗಣದಲ್ಲಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಉತ್ತರಕನ್ನಡ ಜಿಲ್ಲೆಗಳ ಅಡಿಕೆ ವರ್ತಕ ಸಂಘಗಳ ಒಕ್ಕೂಟ ‘ಕರ್ನಾಟಕ ಅರೇಕಾ ಛೇಂಬರ್ ಆಪ್ ಕಾಮರ್ಸ್(ರಿ)’ನ ವಾರ್ಷಿಕ ಮಹಾಸಭೆ ನಡೆಯಿತು. ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಶ್ರೀ ಆರ್.ಎಸ್. ಹೆಗಡೆ ಹರಗಿಯವರು ಸರ್ವಾನುಮತದಿಂದ ನಿಯೋಜಿತರಾದರು. ವೇದಿಕೆಯಲ್ಲಿ ಅಧ್ಯಕ್ಷರಾದ ಶ್ರೀ ಎಂ.ಎನ್. ಹೆಗಡೆ ಸಾಗರ, ನಿಕಟಪೂರ್ವ ಅಧ್ಯಕ್ಷ ಶ್ರೀ ಹೆಚ್. ಓಂಕಾರಪ್ಪ ಶಿವಮೊಗ್ಗ, ಉಪಾಧ್ಯಕ್ಷ ಶ್ರೀ ಜಿ.ಎಂ. ಪ್ರಸನ್ನಕುಮಾರ್ ಭೀಮಸಮುದ್ರ, ಸಾಗರ ವರ್ತಕ ಸಂಘದ ಅಧ್ಯಕ್ಷ ಬಸವರಾಜರು ಹಾಗೂ ವಿವಿಧ ಪ್ರಾಂತ್ಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Author Details


Srimukha

Leave a Reply

Your email address will not be published. Required fields are marked *