ಮುಳ್ಳೆರಿಯಾ ಹವ್ಯಕ ಮಂಡಲ ಸಭೆ : ಗೋವಿಗಾಗಿ ಮೇವು ಯೋಜನೆಯ ಕುರಿತು ಮಾಹಿತಿ

ಸಮಾರಂಭ ಸುದ್ದಿ

ಗುತ್ತಿಗಾರು : ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆಯು ಗುತ್ತಿಗಾರು ವಲಯದ ಅಧ್ಯಕ್ಷ ಅಡಿಕೆಹಿತ್ಲು ಶ್ರೀ ಸೀತಾರಾಮ ಭಟ್ ಅವರ ಮನೆಯಲ್ಲಿ 25.11.2018ರಂದು ಜರಗಿತು.

 

ಮಂಡಲಾಧ್ಯಕ್ಷ ಪ್ರೊ. ಟಿ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಸ್ತಾವನೆಗೈದು, ಗತಸಭೆಯ ವರದಿಯನ್ನು ಮಂಡಿಸಿದರು. ಕೋಶಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಭಟ್ ಗಬ್ಲಲಡ್ಕ ಇವರು ಲಕ್ಷ್ಮೀಲಕ್ಷಣದ ಮಾಹಿತಿ ನೀಡಿ ಲೆಕ್ಕಪತ್ರ ಮಂಡಿಸಿದರು. ವಲಯ ಪದಾಧಿಕಾರಿಗಳು ಮತ್ತು ವಿಭಾಗ ಪ್ರಧಾನರು ವರದಿ ನೀಡಿ ಮಾಹಿತಿಗಳನ್ನಿತ್ತರು.

 

ಗುರಿಕ್ಕಾರರಾದ ಶ್ರೀ ಸತ್ಯನಾರಾಯಣ ಭಟ್ ಮೊಗ್ರ ಇವರು ಮಾತನಾಡಿ ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇವರ ನೇತೃತ್ವದಲ್ಲಿ 28.12.2018 ರಿಂದ 30-12-2018ರ ತನಕ ಜರಗಲಿರುವ ವಿಶ್ವ ಹವ್ಯಕ ಸಮ್ಮೇಳನದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

 

ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ನಿರಂತರವಾಗಿ ಮೇವಿನ ಹುಲ್ಲನ್ನು ಸಾಗಿಸುವ ವಿಶೇಷ ಯೋಜನೆ ‘ಗೋವಿಗಾಗಿ ಮೇವು’ ಶ್ರಮದಾನ ಮತ್ತು ಮೇವು ಬ್ಯಾಂಕ್ ಕುರಿತು ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಶ್ರೀ ಕೇಶವಪ್ರಸಾದ ಎಡಕ್ಕಾನ ಮಾಹಿತಿ ನೀಡಿದರು.

 

ಈ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಒದಗಿಸುವ ವಿದ್ಯಾಸಹಾಯ ನಿಧಿ ₹ 1,20,000/- ಮೊತ್ತವನ್ನು 32 ಮಂದಿ ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಎರಡು ಬಾರಿ ವಲಯಾಧ್ಯಕ್ಷರಾಗಿ ಸೇವೆ ಮಾಡಿದ ಸಾಮಾಜಿಕ ಮುಂದಾಳುವೂ ಗುರಿಕ್ಕಾರರೂ ಆಗಿರುವ ನಿವೃತ್ತ ಸಹಕಾರೀ ಉದ್ಯೋಗಿ ದೇರಳಕಟ್ಟೆಯಲ್ಲಿರುವ ಕಾನತ್ತೂರು ಶ್ರೀ ಸುಬ್ರಹ್ಮಣ್ಯ ಭಟ್ಟ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ ಸಮ್ಮಾನಿಸಲಾಯಿತು.

Author Details


Srimukha

Leave a Reply

Your email address will not be published. Required fields are marked *