ಶ್ರೀಸಂಸ್ಥಾನದವರಿಗೆ ‘ಸಮರಸ’ ಟ್ರಸ್ಟಿನ ಯೋಜನೆಯ ರೇಖಾಪ್ರತಿ ಸಮರ್ಪಣೆ

ಸುದ್ದಿ

 

ಬೆಂಗಳೂರು: ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಳ್ಳೇರಿಯ ಹವ್ಯಕಮಂಡಲದ ಕೇಂದ್ರಬಿಂದುವಾಗಿ ಮುಳ್ಳೇರಿಯ – ಬದಿಯಡ್ಕ ರಾಜಮಾರ್ಗದ ಬದಿಯಲ್ಲಿ ದೇಲಂಪಾಡಿ ಸಮೀಪ ಶ್ರೀಮಠದ ಅಂಗಸಂಸ್ಥೆಯಾಗಿ ಸಮರಸ ನಿರ್ಮಾಣವಾಗಲಿದೆ.

 

ಶ್ರೀಮಠದ ಅಂಗಸಂಸ್ಥೆಯಾದ ‘ಸಮರಸ’ ಯೋಜನೆಯ ಭೂಮಿಯ ರೇಖಾಪ್ರತಿಯನ್ನು ಈ‌ ಭಾನುವಾರ, 16.12.2018ರಂದು ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರಿಗೆ ಸಮರ್ಪಿಸಲಾಯಿತು.

 

ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಶ್ರೀ ಹರಿಪ್ರಸಾದ್ ಪೆರಿಯಾಪ್ಪು, ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದು ಶ್ರೀಸಂಸ್ಥಾನದವರ ಆಶೀರ್ವಾದ ಪಡೆದುಕೊಂಡರು.

 

ಶ್ರೀಸಂಸ್ಥಾನದವರು ಯೋಜನೆಯ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ, ಕಾರ್ಯಸಿದ್ಧಿಯಾಗಲೆಂದು ಅನುಗ್ರಹಿಸಿ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.

 

Author Details


Srimukha

Leave a Reply

Your email address will not be published. Required fields are marked *