ಕೆಲವೂಮ್ಮೆ ಪರಿಸ್ಥಿತಿ ಒಳ್ಳೆಯವರನ್ನು ಕೆಟ್ಟವರನ್ನಾಗಿ ಮಾಡುತ್ತದೆ. ಆದರೆ ಕೆಟ್ಟವರಾಗದೆ ಪರಿಸ್ಥಿತಿಯನ್ನು ಒಳ್ಳೆಯ ರೀತಿಯಲ್ಲಿ ಸ್ವಿಕರಿಸುವುದನ್ನು ಬಲ್ಲವರಾದರೆ ಅವರು ನಿಜವಾದ ಗುರು ಆಗುತ್ತಾರೆ. ಅಂತಹ ನಿರ್ಮಲ ಭಾವಕ್ಕೆ ಮಣ್ಣು ಎರಚಿದರೂ ಅವರಿಗೆ ಒಳ್ಳೆಯದಾಗಲಿ ಎಂದು ಬಯಸುವ ಮನಸ್ಸು ದೊಡ್ಡದು. ಆದರೆ ಇದನ್ನೇ ಬಳಸಿ ಇನ್ನಷ್ಟು ಮತ್ತಷ್ಟು ಮೂರ್ಖಬುದ್ಧಿಯಿಂದ ವಿವಿಧ ಬಣ್ಣಗಳ ಮಣ್ಣನ್ನು ಎರಚುತ್ತ ತಾವು ಕೆಸರಿನಲ್ಲಿ ಮುಚ್ಚಿ ಹೋಗುತ್ತಿದ್ದಾರೆ ಎಂಬುದನ್ನು ಮರೆಯುತಿದ್ದಾರೆ.
ದೇವರು ಏನು ಕೊಟ್ಟ? ಏತಕ್ಕೆ ಕೊಟ್ಟ? ನಾವು ಹೇಗೆ ಬಳಸುತ್ತಿದ್ದೇವೆ? ಎಂಬುದನ್ನು ಒಮ್ಮೆ ಪ್ರಶ್ನಿಸಬೇಕು. ಒಮ್ಮೆ ತಪ್ಪು ಮಾಡುವುದು ಪಾಪವಲ್ಲ ಆದರೆ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಹೋಗುವುದು ಮುಖ್ಯ. ಆದರೆ ಕೆಲವರು ಪಾಪ ಮಾಡಿ, ಅದು ಪಾಪ ಎಂದು ತಿಳಿದರೂ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಾರೆ. ಒಂದಲ್ಲ, ನೂರು ಪಾಪದ ಕೊಡ ತುಂಬಲಿ ಎಂಬುದು ಅವರ ಬಯಕೆ ಇರಬಹುದು. ಇಂಥವರು ಒಳ್ಳೆಯ ಕೆಲಸ ಮಾಡುವಾಗೆಲ್ಲ ಕಾಲು ಎಳೆಯುತ್ತಲೇ ಇರುತ್ತಾರೆ. ಆದರೂ ಅವರನ್ನು ತುಳಿಯದೇ ಅವರು ಮೇಲೆ ಬರಲಿ ಎಂದು ಬಯಸುವ ಮನಸ್ಸಿದ್ದರೆ ಅದು ಗುರುವಿಗೆ ಮಾತ್ರ. ಅಂತಹ ಗುರುವಿಗೇ ಮೋಸ ಮಾಡಿದರೆ ಗುರುತರವಾದ ಪಾಪ ತಟ್ಟದಿರಲು ಸಾಧ್ಯವೇ?
ಹಾಗಾಗಿ ಅಂತವರು ಇನ್ನಾದರೂ ಸ್ವಲ್ಪ ಒಳ್ಳೆಯ ಕೆಲಸ ಮಾಡಲಿ, ಸ್ವಲ್ಪವಾದರೂ ಪಾಪದ ಮೂಟೆಯ ಭಾರವನ್ನು ತಗ್ಗಿಸಿಕೊಳ್ಳಲಿ.