ಮಕ್ಕಳಿಂದ ಮಾತಾಪಿತರಿಗೆ ಪೂಜೆ : ಶ್ರೀಭಾರತೀ ವಿದ್ಯಾಪೀಠದಲ್ಲಿ ಮಾದರಿ ಕಾರ್ಯಕ್ರಮ

ಉಪಾಸನೆ ಶಿಕ್ಷಣ ಸುದ್ದಿ

ಮುಜುಂಗಾವು: ಇಲ್ಲಿನ ಶ್ರೀಭಾರತೀ ವಿದ್ಯಾಪೀಠದ ಮಕ್ಕಳಿಂದ ಮಾತಾಪಿತೃ ಪೂಜೆ ನೆರವೇರಿತು.

ವಿದ್ಯಾಪೀಠ ಶಾಲೆಯಲ್ಲಿ 26.11.2018ರ ಸೋಮವಾರರಂದು ನಡೆದ ಕಾರ್ಯಕ್ರಮವು ದೀಪಪ್ರಜ್ವಲನ, ಗಣಪತಿ ಸ್ತುತಿ, ಗುರುವಂದನೆಗಳೊಂದಿಗೆ ಆರಂಭವಾಯಿತು. ಬಳಿಕ ಮಕ್ಕಳು ಅವರವರ ಮಾತಾಪಿತೃಗಳಿಗೆ ಆರತಿ ಅಕ್ಷತೆಯೊಂದಿಗೆ ಪೂಜೆ ನೆರವೇರಿಸಿದರು. ಅನಂತರ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಬಳಿಕ ಮಾತನಾಡಿದ ಆಡಳಿತಾಧಿಕಾರಿ ಶ್ರೀ ಶ್ಯಾಮ ಭಟ್ ದರ್ಬೆಮಾರ್ಗ,
‘ಇಳೆಗೆ ಇಳಿಸಿದ ನಮ್ಮ ಮಾತಾಪಿತರು ಜಗತ್ತಿನ ತಂದೆತಾಯಿಯರಾದ ಪಾರ್ವತಿಪರಮೇಶ್ವರರಿಗೆ ಸಮಾನರು. ವೃದ್ಧಾಪ್ಯದಲ್ಲಿ ಅವರ ಬೇಕುಬೇಡಗಳನ್ನು ನಾವು ಪೂರೈಸಿ ಸೇವೆಯನ್ನು ಮಾಡಬೇಕು’ ಎಂದು ಕಿವಿಮಾತು ಹೇಳಿದರು.

 

200ಕ್ಕೂ ಅಧಿಕ ಮಾತಾಪಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಕ್ಕಳಿಂದ ಪೂಜೆಯನ್ನು ಸ್ವೀಕರಿಸಿ ಮನಃಪೂರ್ವಕವಾಗಿ ಆಶೀರ್ವದಿಸಿದರು.

 

Author Details


Srimukha

Leave a Reply

Your email address will not be published. Required fields are marked *