ಗ್ರಾಮರಾಜ್ಯ – ಆರೋಗ್ಯಪೂರ್ಣ ಜೀವನಕ್ಕಾಗಿ ಪರಿಶುದ್ಧ ಆಹಾರ : ಈಗ ಮುಳ್ಳೇರಿಯಾದಲ್ಲಿ

ಸುದ್ದಿ

 

ಮುಳ್ಳೇರಿಯ: ಶ್ರೀಸಂಸ್ಥಾನದವರ ದಿವ್ಯ ಸಂಕಲ್ಪ ‘ವಿಷಮುಕ್ತ ಅಡುಗೆ ಮನೆ – ಅಮೃತ ಸತ್ತ್ವ ಆಹಾರ ‘. ಇದಕ್ಕೆಂದೇ ರೂಪಿಸಿದ ಶ್ರೀಮಠದ ಅಧೀನ ಸಂಸ್ಥೆ ಯೋಜನೆ ‘ಗ್ರಾಮರಾಜ್ಯ’ ಈಗಾಗಲೇ ಬೆಂಗಳೂರು ಮತ್ತು ಕರ್ನಾಟಕದ ಹಲವೆಡೆ ಮನೆಮಾತಾಗಿ ಹೆಸರು ಮಾಡಿದೆ. ಇದರ ಮೂಲಕ ಪರಿಶುದ್ದ, ನೈಸರ್ಗಿಕ ಮತ್ತು ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳು, ಮನೆಬಳಕೆ ವಸ್ತುಗಳು ಮತ್ತು ಗವ್ಯೋತ್ಪನ್ನಗಳು ಇದೀಗ ದಕ್ಷಿಣ ಕನ್ನಡದಲ್ಲಿಯೂ ಲಭ್ಯ. ಮುಳ್ಳೇರಿಯಾ ಪೇಟೆಯ ಹೃದಯ ಭಾಗದಲ್ಲಿ ಜಿ. ಕೆ. ಎಂಟರ್ಪ್ರೈಸಸ್ ಎಂಬ ಹೆಸರಿನಲ್ಲಿ ಈ ಸದುದ್ಯಮವನ್ನು ಪ್ರಾರಂಭಿಸಲಾಗಿದೆ.

ಮುಳ್ಳೇರಿಯಾ ಹವ್ಯಕ ಮಂಡಲ ವ್ಯಾಪ್ತಿಯ ಚಂದ್ರಗಿರಿ ಹವ್ಯಕ ವಲಯದ ಉಪಾಧ್ಯಕ್ಷ ಶ್ರೀ ಜಿ. ಕೆ. ಭಟ್ ಕುಳೂರು ಮತ್ತು ವಲಯ ಮುಷ್ಠಿ ಭಿಕ್ಷಾ ವಿಭಾಗ ಪ್ರಧಾನೆ ಶ್ರೀಮತಿ ಸೌಮ್ಯಪ್ರಭಾ ಕುಳೂರು ಇವರ ನೇತೃತ್ವದಲ್ಲಿ ಮುಳ್ಳೇರಿಯಾದಲ್ಲಿ ಗ್ರಾಮರಾಜ್ಯ ವಿತರಣಾ ಕೇಂದ್ರವನ್ನು ಪ್ರಾರಂಭಿಸಲಾಯಿತು. ದೀಪಜ್ವಲನ, ಗುರುವಂದನೆ, ಗೋಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಮುಳ್ಳೇರಿಯಾ ಮಂಡಲ ಧರ್ಮಕರ್ಮ ವಿಭಾಗ ಪ್ರಧಾನ ಶ್ರೀ ನವನೀತಪ್ರಿಯ ಕೈಪ್ಪಂಗಳ, ಮಂಡಲ ಮುಷ್ಠಿ ಭಿಕ್ಷಾ ಪ್ರಧಾನೆ ಶ್ರೀಮತಿ ಗೀತಾಲಕ್ಷ್ಮಿ, ವಲಯ ಕಾರ್ಯದರ್ಶಿ ಶ್ರೀ ರಾಜಗೋಪಾಲ ಕೈಪ್ಪಂಗಳ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹವ್ಯಕ ಮಹಾ ಮಂಡಲ ಅಧ್ಯಕ್ಷೆ ಶ್ರೀಮತಿ ಈಶ್ವರಿ ಬೇರ್ಕಡವು, ಶ್ರೀ ಶ್ಯಾಮ ಭಟ್ ಬೇರ್ಕಡವು, ಶ್ರೀ ಕೆ. ಯನ್. ಭಟ್ ಬೆಳ್ಳಿಗೆ ಕೇಂದ್ರಕ್ಕೆ ಭೇಟಿಯಿತ್ತು ಈ ಸದುದ್ಯಮಕ್ಕೆ ಹರ್ಷವನ್ನು ವ್ಯಕ್ತಪಡಿಸಿ ಶುಭಾಶಯಗಳನ್ನಿತ್ತರು.

Leave a Reply

Your email address will not be published. Required fields are marked *