ಮಂಗಲಗೋಯಾತ್ರೆಯ ಸ್ಮರಣಸಂಚಿಕೆ ‘ಸನ್ಮಂಗಲ’ ಶ್ರೀಸಂಸ್ಥಾನದವರಿಂದ ಲೋಕಾರ್ಪಣೆ

ಕಲೆ ~ ಸಾಹಿತ್ಯ ಗೋವು

ಬೆಂಗಳೂರು: ಮಂಗಲಗೋಯಾತ್ರೆಯ ವಿವರಗಳನ್ನೊಳಗೊಂಡ ‘ಸನ್ಮಂಗಲ’ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಇಂದು, 1.12.2018 ರಂದು, ಲೋಕಾರ್ಪಣೆಗೊಂಡಿತು.

 

ಭಾರತೀಯ ಗೋತಳಿಗಳ ಸಂರಕ್ಷಣೆಗಾಗಿ ಶ್ರೀಸಂಸ್ಥಾನದವರು ಯೋಜಿಸಿದ ಮಹತ್ತಾದ ಹಲವು ಕಾರ್ಯಗಳಲ್ಲಿ ಗೋಯಾತ್ರೆಗಳು ಪ್ರಮುಖವಾದುವು. ಗೋವಿನ ಕಾರಣದಿಂದ ಆರಂಭವಾದ ಮೊದಲ ಸ್ವಾತಂತ್ರ್ಯಸಂಗ್ರಾಮಕ್ಕೆ
ಮಂಗಲಪಾಂಡೆಯ ಸ್ಮರಣಾರ್ಥ ‘ಮಂಗಲಗೋಯಾತ್ರೆ’ ಎಂದ ಕರೆಯಲ್ಪಟ್ಟ ಈ ಯಾತ್ರೆಯು 2016 ನವೆಂಬರಿನಿಂದ 2017 ಜನವರಿಯ ವರೆಗೆ ರಾಜ್ಯಾದ್ಯಾಂತ ಸಂಚರಿಸಿ,
2017 ಜನವರಿ 27ರಿಂದ 29ರ ತನಕ ಮಂಗಳೂರಿನ ಮಂಗಲಭೂಮಿಯಲ್ಲಿ ಮಹಾಮಂಗಲದೊಂದಿಗೆ ಮುಕ್ತಾಯಗೊಂಡಿತು. ಅದರ ನೆನಪನ್ನು ಶಾಶ್ವತವಾಗಿಡುವ ನಿಟ್ಟಿನಲ್ಲಿ
ಮಂಗಲಯಾತ್ರೆಯ ಸ್ಮರಣಸಂಚಿಕೆ ‘ಸನ್ಮಂಗಲ’ ಇಂದು ಶ್ರೀಸಂಸ್ಥಾನದವರ ಅಮೃತಹಸ್ತದಿಂದ ಲೋಕಾರ್ಪಣೆಗೊಂಡಿತು.

ಸ್ಮರಣಸಂಚಿಕೆಯ ಪ್ರಧಾನಸಂಪಾದಕರಾದ ವಿದ್ವಾನ್ ಜಗದೀಶಶರ್ಮಾ, ಜಾಹೀರಾತು ನಿರ್ವಾಹಕರಾದ ಡಾ.ರಾಜೇಶ್ ಪಾದೇಕಲ್ಲು, ಮಂಗಲಗೋಯಾತ್ರೆ ಮತ್ತು‌ ಮಹಾಮಂಗಲ ಸಮಿತಿಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ‌ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *