ರೈತರೇ, ನಿಮ್ಮ ಕೃಷಿಭೂಮಿ ಸಾರ ಹೆಚ್ಚಿಸಲು ಬಂದಿದೆ ಸ್ವರ್ಗಸಾರ : ಇದು ರೈತರಿಗಾಗಿ ಗೋಫಲ ಟ್ರಸ್ಟ್ ಸಿದ್ಧಪಡಿಸಿರುವ ಸಂಪೂರ್ಣ ಜೈವಿಕ‌ ಗೊಬ್ಬರ

ಗೋವು ಸುದ್ದಿ

ನಮ್ಮೆಲ್ಲ ಸನಾತನ ಉಲ್ಲೇಖಗಳು ಗೋಮಯೇ ವಸತೇ ಲಕ್ಷ್ಮೀ ಎಂದೇ ಹೇಳುತ್ತವೆ. ಅಂದ್ರೆ ಬದುಕಿನುದ್ದಕ್ಕೂ ಮಾನವನಿಗೆ ನೆರಳಾಗುವ ಗೋಮಾತೆಯು ನಮಗೆ ನೀಡುವ ಕೊಡುಗೆಗಳಲ್ಲಿ ಗೋಮಯ ಹಾಗೂ ಗೋಮೂತ್ರ ಪ್ರಧಾನವಾದದ್ದು. ಗೋಮಯ ಹಾಗೂ ಗೋಮೂತ್ರವನ್ನು ನಮ್ಮ ಹಿರಿಯರು ಲಕ್ಷ್ಮೀ ಹಾಗೂ ಗಂಗೆಯ ರೂಪದಲ್ಲಿ ನೋಡುತ್ತಿದ್ದರು. ಇಂಥ ಆರೋಗ್ಯ ಹಾಗೂ ಪೂಜನೀಯ ಗೋವಸ್ತುಗಳು ನಮ್ಮ ಭೂಮಿ ಸೇರಿದರೆ ಮಾತ್ರ ನಾವು ಸೇವಿಸುವ ಆಹಾರ ಆರೋಗ್ಯಪೂರ್ಣವಾಗಲು ಸಾಧ್ಯ.

 

ಹೀಗಾಗಿ ನಾವು ಸೇವಿಸುವ ಆಹಾರವನ್ನು ಆರೋಗ್ಯಪೂರ್ಣವಾಗಿಸುವ ನಿಟ್ಟಿನಲ್ಲಿ, ಆಹಾರವನ್ನು ಉತ್ಪಾದಿಸಿ ಕೊಡುವ ಭೂಮಿಗೂ ಫಲವತ್ತಾದ ರಾಸಾಯನಿಕ‌ ಮುಕ್ತ ಆಹಾರ ಕೊಡುವ ನಿಟ್ಟಿನಲ್ಲಿ ಗೋಮಯ ಹಾಗೂ ಗೋಮೂತ್ರ ಬಳಸಿ ಫಲವತ್ತಾದ ಗೊಬ್ಬರ ತಯಾರಿಸಲಾಗುತ್ತಿದೆ.

 

ದೇಸೀ ಗೋವಿನ ಸಂರಕ್ಷಣೆಯ ಮಹದಾಂದೋಲನವನ್ನು ಜೀವನದ ಸಂಕಲ್ಪವಾಗಿಸಿಕೊಂಡ ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾಗಿರುವ ಗೋಫಲ ಟ್ರಸ್ಟ್ [ರಿ] ಸಂಸ್ಥೆಯು ಇಂತಹದೊಂದು ಮಹತ್ತರ ಕಾರ್ಯಕ್ಕೆ‌ ಮುನ್ನುಡಿ ಬರೆದಿದೆ.
ಶ್ರೀಮಠದ ಗೋಶಾಲೆಗಳಲ್ಲಿ ಲಭ್ಯವಿರುವ ಗೋಮಯವನ್ನು ಬಳಸಿಕೊಂಡು ಕಹಿಬೇವು, ಹರಳುಹಿಂಡಿಗಳನ್ನು ಮಿಶ್ರಣ ಮಾಡಿ, ಇನ್ನಷ್ಟು ಸೂಕ್ಷ್ಮಾಣು ಪ್ರಕ್ರಿಯೆಗಳು ಉಂಟಾಗಲು ಜೀವಾಮೃತವನ್ನು ಸೇರಿಸಿ ವಿಶಿಷ್ಟವಾದ ಸ್ವರ್ಗಸಾರ ಗೊಬ್ಬರ ಸಿದ್ದಪಡಿಸಿ ಕೃಷಿಕರಿಗೆ ಪರಿಚಯಿಸುತ್ತಿದೆ.

 

ಇದು ಪ್ರಕೃತಿ ಸಹಜ ದೇಸೀ ಗೋ ವಿಸರ್ಜಿತ ಮೂತ್ರ ಹಾಗೂ ಗೋಮಯ ಆಧಾರಿತವಾಗಿದ್ದು ಮೌಲ್ಯವರ್ಧನೆಗೊಳಿಸಿದ ಗೊಬ್ಬರವಾಗಿದೆ. ದೇಸೀ ಗೋವಿನ ಗೋಮಯ ,ಗೋಮೂತ್ರ, ಜೀವಾಮೃತ, ಕಹಿಬೇವಿನ ಬೀಜದ ಪುಡಿ, ಹರಳುಹಿಂಡಿ ಹಾಗೂ ಇನ್ನಿತರ ಪ್ರಕೃತಿ ಸಹಜ ವಸ್ತುಗಳನ್ನು ಮಿಶ್ರಣ ಮಾಡಿ ಈ ಗೊಬ್ಬರ ತಯಾರಿಸಬಹುದಾಗಿದೆ.

 

ಈ ಗೊಬ್ಬರವನ್ನು ಯಾವ ಯಾವ ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಬಹುದು ಎಂಬುದನ್ನು ನೋಡೋದಾದ್ರೆ:

ತೆಂಗು ಬೆಳೆಗೆ ೧೦ ಕೆಜಿ
ಅಡಿಕೆ ಬೆಳೆಗೆ ೨ ಕೆಜಿ
ಬಾಳೆ ಬೆಳೆಗೆ ೨ ಕೆಜಿ
ಭತ್ತ [೧ ಎಕ್ರೆ] ೧೦೦೦ ಕೆಜಿ
ಕಾಳುಮೆಣಸು ಬೆಳೆಗೆ ೧/೨
ಕೊಕ್ಕೊ ಗಿಡಗಳಿಗೆ ೧ ಕೆಜಿ
ತರಕಾರಿ [೧ ಎಕ್ರೆ] ೧೦೦೦
ಹೂವಿನ ಗಿಡಗಳಿಗೆ ೧/೨
ಕಾಫಿ ಗಿಡಗಳಿಗೆ ೧ ಕೆಜಿ
ಹಣ್ಣಿನ ಗಿಡಕ್ಕೆ ೨ ಕೆಜಿ
ರಬ್ಬರ್ ಗಿಡಗಳಿಗೆ ೨ ಕೆಜಿ

 

ಈ ರಾಸಾಯನಿಕ ಮುಕ್ತ ಗೊಬ್ಬರದಲ್ಲಿರುವ ಪೌಷ್ಟಿಕಾಂಶದ ವಿವರ ಹೀಗಿದೆ:
1. Nitrogen (N) 1.9
2.Phosphates (P) 0.7
3. Potash ( K) 1.9
4. Carbon (C) 24.3
5.C/N ratio 13
6. pH 8.1
7.Moisture 30.0

 

ಹೀಗೆ ದೇಸಿ ಗೋವಿನ ಸಗಣಿಯಿಂದ ಸಿದ್ಧಪಡಿಸಲಾದ ಗೊಬ್ಬರವನ್ನು ಬಳಸೋದರಿಂದ ಕೃಷಿಭೂಮಿಗೆ ಸಾಕಷ್ಟು ಲಾಭಗಳಿವೆ. ಅವುಗಳನ್ನು ಪಟ್ಟಿ ಮಾಡೋದಾದ್ರೆ:
* ಭೂಮಿಯ ಫಲವತ್ತತೆ ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುತ್ತದೆ.
* ಕೃಷಿ ಉತ್ಪನ್ನಗಳ ಇಳುವರಿ, ರುಚಿ, ಗುಣಮಟ್ಟ ಅಧಿಕಗೊಳ್ಳುತ್ತದೆ.
* ರಾಸಾಯನಿಕ‌ ಮುಕ್ತ ಹಾಗೂ ದುಷ್ಪರಿಣಾಮಗಳಿಲ್ಲದ ಆಹಾರ ಉತ್ಪನ್ನಗಳನ್ನು ಬೆಳೆಯಲು ಸಹಕಾರಿ.
* ಭೂಮಿಯಲ್ಲಿ ಸಹಜವಾಗಿ ಫಲವತ್ತತೆ ಸೃಷ್ಟಿಸುವ ಎರೆಹುಳುಗಳ ಸಂಖ್ಯೆ ಅಧಿಕಗೊಳಿಸುತ್ತದೆ.
* ಇದು ಪರಿಸರಕ್ಕೆ ಪೂರಕವಾದ ಗೊಬ್ಬರವಾಗಿರೋದರಿಂದ ಮಾಲಿನ್ಯರಹಿತವಾಗಿದ್ದು ಭೂಮಿಯ ಸಾರಕ್ಕೆ ಧಕ್ಕೆಯಾಗುವುದಿಲ್ಲ.
* ಈ ಗೊಬ್ಬರ ತಯಾರಿಸಲು ಬಳಸುವ ಜೀವಾಮೃತವೂ ಭೂಮಿಯಲ್ಲಿ ಪೂರಕ ಸೂಕ್ಷ್ಮಾಣುಜೀವಿಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಅಧಿಕಗೊಳಿಸುತ್ತದೆ.

 

ಇದರ ದರವೂ ಕೈಗೆಟಕುವ ಪ್ರಮಾಣದಲ್ಲೇ ಇದ್ದು,‌
* ೧ ಕೆಜಿಗೆ ೨೫ ರೂಪಾಯಿ
* ೨ ಕೆಜಿಗೆ ೫೦ ರೂಪಾಯಿ
* ೦೫ ಕೆಜಿಗೆ ೧೦೦ ರೂಪಾಯಿ
* ೪೦ ಕೆಜಿಗೆ ೬೦೦ ರೂಪಾಯಿ ದರ ನಿಗದಿಪಡಿಸಲಾಗಿದೆ.

 

ಗೊಬ್ಬರ ಖರೀದಿ ಹಾಗೂ ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ 9449595238 ಅಥವಾ ಗೋಫಲ ಟ್ರಸ್ಟ್ [ರಿ] # ೩೭೮, ೨ನೇ ಮಾಳಿಗೆ, ೨ನೇ ಅಡ್ಡ ರಸ್ತೆ, ಗಿರಿನಗರ, ಬೆಂಗಳೂರು ೫೬೦೦೮೫ ಇವರನ್ನು ಸಂಪರ್ಕಿಸಬಹುದಾಗಿದೆ.

 

ಮತ್ಯಾಕೆ ತಡ? ನಮ್ಮನ್ನು ಸದಾ ಪೊರೆಯುವ ಭೂಮಿ ತಾಯಿಗೆ ನಾವು ಸ್ವರ್ಗಸಾರವನ್ನೆ ಉಣಿಸೋಣ.‌
ರೈತರೇ, ಸ್ವರ್ಗಸಾರ ಬಳಸಿ, ಭೂಮಿತಾಯಿಯ ಆರೋಗ್ಯ ಕಾಪಾಡಿ.

Author Details


Srimukha

2 thoughts on “ರೈತರೇ, ನಿಮ್ಮ ಕೃಷಿಭೂಮಿ ಸಾರ ಹೆಚ್ಚಿಸಲು ಬಂದಿದೆ ಸ್ವರ್ಗಸಾರ : ಇದು ರೈತರಿಗಾಗಿ ಗೋಫಲ ಟ್ರಸ್ಟ್ ಸಿದ್ಧಪಡಿಸಿರುವ ಸಂಪೂರ್ಣ ಜೈವಿಕ‌ ಗೊಬ್ಬರ

Leave a Reply

Your email address will not be published. Required fields are marked *