ಕುಮಟಾ : ಹವ್ಯಕರ ಮೂಲಸ್ಥಾನವಾದ ಹೊನ್ನಾವರದ ಹೈಗುಂದದಿಂದ ಗೋಕರ್ಣದ ಅಶೋಕಗೆ ತೆರಳುತ್ತಿರುವ ಧರ್ಮ ಜ್ಯೋತಿಯನ್ನು ಕುಮಟಾದಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಪುಷ್ಪಾರ್ಚನೆಗೆ ಇರುವುದರ ಮೂಲಕ ಸ್ವಾಗತಿಸಿದರು.
ಹೊನ್ನಾವರದಿಂದ ಹೊರಟ ಭವ್ಯ ಮೆರವಣಿಗೆಯಲ್ಲಿ ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಆರ್ .ಎಸ್ ಹೆಗಡೆ ಹರಿಗಿ, ಹೊನ್ನಾವರ ಮಂಡಲದ ಅಧ್ಯಕ್ಷ ಆರ್.ಜಿ ಹೆಗಡೆ ಹಾಗೂ ಪ್ರಮುಖರು ಹಾಜರಿದ್ದರು. ಶಾಸಕರ ಜೊತೆ ಬಿಜೆಪಿ ಪ್ರಮುಖರಾದ ವಿನೋದ್ ಪ್ರಭು ಹಾಗೂ ಇತರರು ಕುಮಟದಲ್ಲಿ ಧರ್ಮಜ್ಯೋತಿಯನ್ನು ಸ್ವಾಗತಿಸಿ ಮೆರವಣಿಗೆ ಮುಂದುವರಿಸಿ ಕೊಟ್ಟರು. ಈ ಸಂದರ್ಭದಲ್ಲಿ ಕುಮಟಮಂಡಲದ ಅಧ್ಯಕ್ಷರಾದ ಜಿ. ಎಸ್ ಹೆಗಡೆ
ಗುರುಕುಲ ಚಾತುರ್ಮಾಸ್ಯ ಸೇವಾ ಸಮಿತಿಯ ಅಧ್ಯಕ್ಷರಾದ ಹರಿಪ್ರಸಾದ್ ಪೆರಿಯಾಪು ಇತರರು ಹಾಜರಿದ್ದರು.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಇಪ್ಪತ್ತೊಂಬತ್ತನೇ ಚಾತುರ್ಮಾಸ್ಯ ವ್ರತ ಆಷಾಢ ಹುಣ್ಣಿಮೆಯಂದು (ಈ ತಿಂಗಳ 13) ಬುಧವಾರ ಗೋಕರ್ಣ ಸಮೀಪದ ಅಶೋಕೆಯಲ್ಲಿ ಆರಂಭವಾಗಲಿದೆ. ಆದಿಗುರು ಶಂಕರರ ಪಾದಸ್ಪರ್ಶದಿಂದ ಪವಿತ್ರವಾದ ಲೋಕಶಂಕರರು ತಮ್ಮ ಸಾನ್ನಿಧ್ಯವನ್ನು ಅನುಗ್ರಹಿಸಿದ ದೈವರಾತರ ತಪೋಭೂಮಿಯೂ ಕರ್ಮಭೂಮಿಯೂ ಆದ ಅಶೋಕೆಯ ಪುಣ್ಯ ಪರಿಸರದಲ್ಲಿ ನಡೆಯಲಿದ್ದು ತನ್ನಿಮಿತ ಹವ್ಯಕರ ಮೂಲ ನೆಲೆಯಿಂದ ಭವ್ಯ ಮೆರವಣಿಗೆ ಮೂಲಕ ಜ್ಯೋತಿಯನ್ನು ತಂದು ಶ್ರೀಗಳಪುರ ಪ್ರವೇಶದ ಸಂದರ್ಭದಲ್ಲಿ ಅಶೋಕಗೆ ತಲುಪಿಸಲಾಗಿದೆ.