ಚಾತುರ್ಮಾಸ್ಯ: ರಾಘವೇಶ್ವರ ಶ್ರೀ ಪುರಪ್ರವೇಶ

ಮಠ

 

ಗೋಕರ್ಣ: ಶ್ರೀಮಗ್ಗಜದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಇಪ್ಪತ್ತೊಂಬತ್ತನೇ ಚಾತುರ್ಮಾಸ್ಯದ ಅಂಗವಾಗಿ ಶ್ರೀಗಳ ಪುರಪ್ರವೇಶ ಅಶೋಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಚಾತುರ್ಮಾಸ್ಯ ವ್ರತ ಕೈಗೊಳ್ಳಲು ಆಗಮಿಸಿದ ಪರಮಪೂಜ್ಯರನ್ನು ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಡಿ.ಡಿ.ಶರ್ಮಾ, ಸತ್ಯನಾರಾಯಣ ಶರ್ಮಾ, ವಿವಿಧ ಸಮಾಜಗಳ ಗಣ್ಯರು ಸಕಲ ಗೌರವಗಳೊಂದಿಗೆ ಬರಮಾಡಿಕೊಂಡರು.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಇಪ್ಪತ್ತೊಂಬತ್ತನೇ ಚಾತುರ್ಮಾಸ್ಯ ವ್ರತ ಆಷಾಢ ಹುಣ್ಣಿಮೆಯಂದು ಬುಧವಾರ (ಜುಲೈ 13) ಅಶೋಕೆಯಲ್ಲಿ ಆರಂಭವಾಗಲಿದೆ. ಮಧ್ಯಾಹ್ನ 2.30ಕ್ಕೆ ನಡೆಯುವ ಧರ್ಮಸಭೆಯಲ್ಲಿ ಪರಮಪೂಜ್ಯರು ಚಾತುರ್ಮಾಸ್ಯ ಸಂದೇಶ ಕರುಣಿಸುವರು. ರಾಜ್ಯ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಕೆ.ಶೆಟ್ಟಿ ಮತ್ತಿತರರು ಧರ್ಮಸಭೆಯಲ್ಲಿ ಭಾಗವಹಿಸುವರು.

ಪರಮಪೂಜ್ಯರ ಪರಿಕಲ್ಪನೆಯ ವಿಶ್ವದಲ್ಲೇ ವಿಶಿಷ್ಟ ಎನಿಸಿದ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆರಂಭಕ್ಕೆ ಪೂರ್ವಭಾವಿಯಾಗಿ ಎರಡು ವರ್ಷಗಳಿಂದ ನಡೆಯುತ್ತಿರುವ ಗುರುಕುಲಗಳ ಮಹತ್ವವನ್ನು ಸಮಾಜಕ್ಕೆ ಪ್ರಚುರಪಡಿಸುವ ಉದ್ದೇಶದಿಂದ ಈ ಚಾತುರ್ಮಾಸ್ಯವನ್ನು ಗುರುಕುಲ ಚಾತುರ್ಮಾಸ್ಯವಾಗಿ ನಡೆಸಲಾಗುತ್ತಿದೆ.

ಚಾತುರ್ಮಾಸ್ಯ ವ್ರತಾರಂಭದಂದು ಪರಮಪೂಜ್ಯರು ವಿಶೇಷವಾಗಿ ಗುರುಪರಂಪರಾ ಪೂಜೆ ನೆರವೇರಿಸಿ ವ್ರತ ಆರಂಭಿಸುವರು. ಈ ತಿಂಗಳ 16ರಂದು ಶ್ರೀ ವರ್ಧಂತಿ, ಆಗಸ್ಟ್ 19ರಂದು ಶ್ರೀಕೃಷ್ಣ ಜನ್ಮಾಷ್ಟಮಿ, 31ರಂದು ಗಣೇಶ ಚತುರ್ಥಿಯಂಥ ವಿಶೇಷ ಕಾರ್ಯಕ್ರಮಗಳು ಚಾತುರ್ಮಾಸ್ಯದ ಅವಧಿಯಲ್ಲಿ ನಡೆಯಲಿವೆ. ಸೆಪ್ಟೆಂಬರ್ 10ರಂದು ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಹಾಗೂ ಸೀಮೋಲ್ಲಂಘನ ನಡೆಯಲಿದೆ.

Author Details


Srimukha

Leave a Reply

Your email address will not be published. Required fields are marked *