ಗುರಿಕ್ಕಾರರ ಗುರುಮಾರ್ಗ – ಒಂದು ಸಂವಾದ ಕಾರ್ಯಾಗಾರ

ಮಠ

ಸಮಾಜದಲ್ಲಿ ಗುರಿಕ್ಕಾರರ ಮಹತ್ವ, ಗುರಿಕ್ಕಾರರು ಎದುರಿಸುತ್ತಿರುವ ಸಮಸ್ಯೆಗಳು, ವೈದಿಕರು – ಗುರಿಕ್ಕಾರರು – ಶಿಷ್ಯರೊಂದಿಗಿನ ಸಮನ್ವಯತೆ, ಸಂಘಟನೆಯ ಪದಾಧಿಕಾರಿಗಳು – ಗುರಿಕ್ಕಾರ ನಡುವಿನ ಸಮನ್ವಯತೆ ಈ ವಿಷಯಗಳನ್ನು ಆಧರಿಸಿ ಮಂಡಲದ ಎಲ್ಲಾ ವಲಯಗಳ ಎಲ್ಲಾ ಗುರಿಕ್ಕಾರರು ಮತ್ತು ಪದಾಧಿಕಾರಿಗಳು ಭಾಗವಹಿಸಿ ಚರ್ಚಿಸಿ ಒಂದು ಸಂವಾದ ರೂಪದಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವೇ  ಈ ಕಾರ್ಯಾಗಾರದ  ಧ್ಯೇಯೋದ್ದೇಶವಾಗಿತ್ತು.

 

2022ರಲ್ಲಿ ನಡೆಸಿದ ಗುರಿಕ್ಕಾರರ ಸಮಾವೇಶ ನಿರೀಕ್ಷಿತ ಯಶಸ್ಸು ಕಾಣದಿದ್ದುದರಿಂದ  ಈ ಬಾರಿ ಮಂಡಲದ ನಾಲ್ಕು ಕಡೆ 3/4 ವಲಯಗಳನ್ನು ಸೇರಿಸಿ ಕಾರ್ಯಾಗಾರ ನಡೆಸಲು ಉದ್ದೇಶಿಸಲಾಯಿತು. ಮಂಡಲದಿಂದ ಈ ರೀತಿ ಮಾಡಲುದ್ದೇಶಿಸಿದ ಕಾರ್ಯಾಗಾರದ ಬಗ್ಗೆ ಪ್ರಸ್ತಾಪಿಸಿ ಆಹ್ವಾನಿಸಿದಾಗ  ಮಹಾಮಂಡಲದಿಂದ ಪ್ರೋತ್ಸಾಹ ಮತ್ತು ಪೂರ್ಣ ಸಹಕಾರವನ್ನು ನೀಡಿರುವುದಲ್ಲದೆ ಈ ಕಾರ್ಯಕ್ರಮವು  ಮಹಾಮಂಡಲದಿಂದಲೇ ನಡೆಯುವಂತೆಯೂ ಮಹಾಮಂಡಲ ಪದಾಧಿಕಾರಿಗಳು ಅದಕ್ಕಾಗಿ ಎರಡು ದಿನ ಮೀಸಲಿಟ್ಟಿರುವುದಲ್ಲದೆ ಮಹಾಮಂಡಲ ವ್ಯಾಪ್ತಿಯ ಎಲ್ಲಾ ಮಂಡಲಗಳಲ್ಲಿಯೂ ಇಂತಹ ಕಾರ್ಯಾಗಾರ ಏರ್ಪಡಿಸಲು ಉದ್ದೇಶಿಸಿರುವುದಾಗಿಯೂ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು ತಿಳಿಸಿದ್ದರು.

ಇದರ ಫಲವಾಗಿ ಅಕ್ಟೋಬರ್ 18 ರಂದು ಬೆಳಿಗ್ಗೆ  09:30 – 12:30 ಗಂಟೆವರೆಗೆ  ಶ್ರೀ ಸುಬ್ರಾಯ ದೇವಸ್ಥಾನ ಕೇಪು ಇಲ್ಲಿ, ಕೇಪು, ಕಲ್ಲಡ್ಕ, ವಿಟ್ಲ ಘಟಕ ಮತ್ತು ವಲಯ ಪ್ರತಿನಿಧಿಗಳಿಗೆ, ಅಪರಾಹ್ನ  3:00 – 6:00 ಗಂಟೆ ವರೆಗೆ ಬಾಯಾರಿನ ಸೊಂದಿ ದುರ್ಗಾಲಯದಲ್ಲಿ ಕೋಳಿಯೂರು,ಕನ್ಯಾನ,ಬಾಯಾರಿನ ಪ್ರತಿನಿಧಿಗಳಿಗೆ; 19.10.2025 ರಂದು ಬೆಳಿಗ್ಗೆ 09:30 -12:30 ಗಂಟೆವರೆಗೆ ಮಂಗಳೂರು ನಂತೂರಿನಲ್ಲಿರುವ ಶಂಕರಶ್ರೀ ಸಭಾಭವನದಲ್ಲಿ ಮಂ. ಮಧ್ಯ, ದಕ್ಷಿಣ, ಉತ್ತರ ಮತ್ತು ಮುಡಿಪು ಘಟಕ, ವಲಯಗಳ  ಪ್ರತಿನಿಧಿಗಳಿಗೆ, ಅಪರಾಹ್ನ 3:30-6:30  ನಮ್ಮ ಮಠದ ಸುಪರ್ದಿಯಲ್ಲಿರುವ ಶಿರಿಯಾರದ ಚಿತ್ತಾರಿ ಮಹಾಗಣಪತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಉಡುಪಿ,ಕುಂದಾಪುರ ಘಟಕ, ವಲಯ ಪ್ರತಿನಿಧಿಗಳಿಗೆ ಕಾರ್ಯಾಗಾರ ಏರ್ಪಡಿಸಲಾಯಿತು.

 

ಸಂಪನ್ಮೂಲ ವ್ಯಕ್ತಿಗಳಾಗಿ ಉಂಡೇಮನೆ ವಿಶ್ವೇಶ್ವರ ಭಟ್ಟರು ಹವ್ಯಕ ಸಮಾಜದಲ್ಲಿ ಗುರಿಕ್ಕಾರ ಮಹತ್ವ ಬಗ್ಗೆ ಮಾತನಾಡಿದರೆ ವೇ . ಮೂ . ಅಮೈ ಶಿವಪ್ರಸಾದ್ ಭಟ್ಟರು ಗುರಿಕ್ಕಾರ – ವೈದಿಕ – ಶಿಷ್ಯರ ಒಳಗಿನ ಸಮನ್ವಯತೆ ಬಗ್ಗೆ ವಿಷಯ ಮಂಡಿಸಿದರು. ವೇ.ಮೂ. ಮುಗುಳಿ ತಿರುಮಲೇಶ್ವರ ಭಟ್ಟರು ಗುರಿಕ್ಕಾರರ ಗುರುಮಾರ್ಗ ಬಗ್ಗೆ ವಿವರಣೆಯನ್ನಿತ್ತರು. ಗುರಿಕ್ಕಾರರುಗಳೊಂದಿಗೆ  ಪ್ರಶ್ನೋತ್ತರಗಳು ಅತ್ಯುತ್ತಮ ರೀತಿಯಲ್ಲಿ  ಮೂಡಿ ಬಂತು. ಬಹುತೇಕ ಪ್ರಶ್ನೆಗಳು, ಸಂದೇಹಗಳು ಪರಿಹರಿಸಲ್ಪಟ್ಟುವು. ಯಾವ ಪ್ರಶ್ನೆಗಳಿಗೆ ಶ್ರೀಗುರುಗಳಿಂದಲೇ ಪರಿಹಾರ ಸಿಗಬೇಕೋ ಅದು ಮುಂದಿನ ದಿನಗಳಲ್ಲಿ  ನಡೆಯಲಿರುವ ಗುರಿಕ್ಕಾರರುಗಳ ಮಹಾಧಿವೇಶನದಲ್ಲಿ ಶ್ರೀವಾಣಿಯಿಂದಲೇ ಸಿಗಲಿದೆ ಎಂದು ಮಹಾಮಂಡಲ ಅಧ್ಯಕ್ಷರು ತಿಳಿಸಿದರು.

ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು ಸಂಘಟನೆಯನ್ನು ಬಲಿಷ್ಠಗೊಳಿಸಲು, ಸಂಘಟನೆ ತಳಹದಿಯಲ್ಲಿರುವ ಘಟಕಗಳನ್ನು ಬಲಪಡಿಸಬೇಕು,ಅದಕ್ಕಾಗಿ ಘಟಕ ಪರಿಷತ್ತು ರಚಿಸಬೇಕು. ಘಟಕದ ಅಧ್ಯಕ್ಷ ಗುರಿಕ್ಕಾರರೆ ಆಗಿರುತ್ತಾರೆ. ಸಂಘಟನೆಯ ಪದಾಧಿಕಾರಿಗಳು(ಗುರುಸೇವಕರು), ಗುರಿಕ್ಕಾರರು ಮತ್ತು ಶಿಷ್ಯರೊಂದಿಗಿನ ಸಮನ್ವಯತೆ ಮತ್ತಷ್ಟು ಉತ್ತಮಗೊಳಿಸಿ ನಮ್ಮ ಮಠದ ಕೀರ್ತಿಪತಾಕೆಯನ್ನು ಉತ್ತುಂಗಕ್ಕೆ ಏರಿಸಬೇಕು ಎಂದು ಸ್ಫೂರ್ತಿದಾಯಕವಾಗಿ ಮಾತನಾಡಿದರು.

 

ಕಾರ್ಯಕ್ರಮ  ಏರ್ಪಡಿಸಿದ ನಾಲ್ಕು ಕಡೆಗಳಲ್ಲೂ  ಕಾರ್ಯಾಗಾರವು ಅದ್ಭುತ ಯಶಸ್ಸು ಪಡೆಯಿತು.  ಒಟ್ಟಿಗೆ 147 ಮಂದಿಗಳಲ್ಲಿ 110 ಮಂದಿ ಗುರಿಕ್ಕಾರರು ಕಾರ್ಯಾಗಾರದಲ್ಲಿ ಭಾಗವಹಿಸಿ ಇತಿಹಾಸ ಬರೆದರು. ಮಂಡಲ ಗುರಿಕ್ಕರರಾದ ಉದಯಕುಮಾರ ಭಟ್  ಖಂಡಿಗ ಕಾರ್ಯಾಗಾರ ಈ ಸಲ ಉತ್ತಮ ರೀತಿಯಲ್ಲಿ ನಡೆಯಬೇಕೆಂಬ ಮತುವರ್ಜಿ ವಹಿಸಿ ಆ ಕಾರ್ಯಕ್ರಮಕ್ಕೆ ಕಾರಣಿ ಭೂತರು. ಸಂಪನ್ಮೂಲ  ವ್ಯಕ್ತಿಗಳಾದ ಉಂಡೆಮನೆ ವಿಶ್ವೇಶ್ವರ ಭಟ್ಟರ ಸ್ಫೂರ್ತಿದಾಯಕ ಮಾತುಗಳು, ವೇ.ಮೂ. ತಿರುಮಲೇಶ್ವರ ಭಟ್ಟರ ಮತ್ತು ವೇ.ಮೂ.ಅಮೈ ಶಿವಪ್ರಸಾದ್ ಭಟ್ಟರ ಸ್ಪಟಿಕ ಸ್ಪಷ್ಟ ಮಾತುಗಳು ಹಾಗೂ ಉತ್ತರಗಳು ಅತ್ಯಂತ ಪ್ರೇರಣಾದಾಯಕವಾಗಿದ್ದವು. ನಿರೂಪಕರಾಗಿ, ಸಮಯ ಪಾಲಕರಾಗಿ  ಮಂಡಲ ಉಪಾಧ್ಯಕ್ಷ  ರಾಜಶೇಖರ ಭಟ್ ಕಾಕುಂಜೆ ಅವರು ಕಾರ್ಯಕ್ರಮವು ಅತ್ಯುತ್ತಮ ರೀತಿಯಲ್ಲಿ ನಡೆಯುವಂತೆ ನಿರ್ವಹಣೆಗೈದರು.

ಎಲ್ಲಾ ಗುರಿಕ್ಕಾರರ ಸಾಟಿ , ಸನ್ನದುಗಳು ಸರಿಯಾಗಿವೆಯೇ ಅಗತ್ಯತೆಗಳೇನು ಎಂಬುದನ್ನು ವ್ಯವಸ್ಥಿತ ರೀತಿಯಲ್ಲಿ ದಾಖಲೀಕರಿಸಿದ ಮಂಡಲ ವಿ.ವಾಹಿನಿ ಪ್ರಧಾನ ಭಾಸ್ಕರ ಭಟ್ ಹೊಸಮನೆ, ಗುರುಸೇವೆಯಲ್ಲಿ ಯಾವುದೇ ಕೆಲಸ ಕಾರ್ಯಗಳಿಗೆ ತಾನು ಸದಾ ಸಿದ್ದ ಎಂದು ಮಂಡಲ ಸಹಾಯ ಪ್ರಧಾನ ಕೃಷ್ಣಪ್ರಮೋದ ಶರ್ಮ ತೋರಿಸಿಕೊಟ್ಟರು.

 

 

ಉಮೇಶ್ ಭಟ್ ಕೋಣಮ್ಮೆ

ಪ್ರಧಾನ ಕಾರ್ಯದರ್ಶಿ,ಮಂಗಳೂರು ಮಂಡಲ.

Leave a Reply

Your email address will not be published. Required fields are marked *