ಅಂಬಾಗಿರಿಯ ಶ್ರೀ ರಾಮಕೃಷ್ಣ ಕಾಳಿಕಾ ಭವಾನಿ ಮಠದಲ್ಲಿ ಪ್ರತಿವರ್ಷ ಶರನ್ನವರಾತ್ರಿ ಪ್ರಯುಕ್ತ ನಡೆಸುವ ನವ ಚಂಡಿಕಾ ಹವನ ವೇದಮೂರ್ತಿ ಕಟ್ಟೆ ಶಂಕರಭಟ್ಟರ ಆಚಾರತ್ವ ದಲ್ಲಿ ಧರ್ಮಕರ್ಮ ವಿಭಾಗದ ಪ್ರಧಾನರಾದ ವೇ. ಮೂ. ಜನಾರ್ಧನ ಭಟ್ಟರ ನೇತೃತ್ವ ಹಾಗೂ ವಲಯದ ಅಧ್ಯಕ್ಷರಾದ ವಿ. ಎಂ. ಹೆಗಡೆ ದಂಪತಿಗಳ ಯಜಮಾನತ್ವದಲ್ಲಿ ಸಂಪನ್ನಗೊಂಡಿತು.
ಮಾತೆಯರಿಂದ ಕುಂಕುಮಾರ್ಚನೆ ಹಾಗೂ ಕನಕಧಾರಾ ಸ್ತೋತ್ರ ಪಠಣ ನಡೆಯಿತು.
ವಲಯದ ವಿದ್ಯಾ ವಿಭಾಗದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶ್ರೀ ಸಂಸ್ಥಾನದವರ ಆಶೀರ್ವಾದ ಪೂರ್ವಕ ಪ್ರಶಂಸನಾ ಪತ್ರ ವಿತರಣಾ ಕಾರ್ಯಕ್ರಮವು ನಡೆಯಿತು.
ವಲಯದ ಅಧ್ಯಕ್ಷರಾದ ವಿ. ಎಂ. ಹೆಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪಿ. ಜಿ ಭಟ್ಟರು, ಬಿ. ಕೆ. ಹೆಗಡೆಯವರು ವಿದ್ಯಾರ್ಥಿಗಳಿಗೆ ಗುರು, ಮಠ, ಪಾಲಕರು ಹಾಗೂ ಮಕ್ಕಳ ಭವಿಷ್ಯದ ಕುರಿತಾಗಿ ಮಾರ್ಗದರ್ಶನ ನೀಡಿದರು.
ಮಂಡಲದ ವಿದ್ಯಾರ್ಥಿ ವಾಹಿನಿ ಪ್ರಧಾನರಾದ ಶ್ರೀಧರ ಹೆಗಡೆ, ಸಾಗರ ಪ್ರಾಂತ್ಯದ ಮಾತ್ರತ್ವಂ ಅಧ್ಯಕ್ಷೆ ವೀಣಾ ಭಟ್ಟ, ವಲಯದ ಮಾತ್ರ ಪ್ರಧಾನೆ ಸಾವಿತ್ರಿ ಹೆಗಡೆ, ಧರ್ಮಕರ್ಮ ವಿಭಾಗ ಪ್ರಧಾನರಾದ ಜನಾರ್ಧನ ಭಟ್ಟರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಒಟ್ಟೂ 5 ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.
ಸಂಘಟನಾ ಕಾರ್ಯದರ್ಶಿಗಳಾದ ಡಿ. ಎಸ್ . ಹೆಗಡೆಯವರು ಸ್ವಾಗತಕೋರಿದರು. ಕೋಶಾಧ್ಯಕ್ಷರಾದ ಲಕ್ಷ್ಮಣ ಶ್ಯಾನಭಾಗರು ವಂದನಾರ್ಪಣೆ ಮಾಡಿದರು. ವಲಯದ ವಿದ್ಯಾರ್ಥಿ ವಾಹಿನಿ ಪ್ರಧಾನರಾದ ಉದಯ ಭಟ್ಟರು ಕಾರ್ಯಕ್ರಮವನ್ನು ನಿರ್ವಹಿಸಿದರು.