ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಸಭೆಯು ದಿನಾಂಕ ೦1 – 01 – 2023 ಆದಿತ್ಯವಾರ ಗುಂಪೆ ವಲಯ ಕಛೇರಿಯಲ್ಲಿ ನಡೆಯಿತು.
ಶಂಖನಾದ , ಗುರುವಂದನೆ , ಗೋಸ್ತುತಿಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ವಹಿಸಿದರು.
ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಗತಸಭೆಯ ವರದಿ ಮತ್ತು ಮಹಾಮಂಡಲ ಸುತ್ತೋಲೆಯನ್ನು ವಾಚಿಸಿ ವಿಭಾಗವಾರು ವರದಿಗಳನ್ನು ನೀಡಿದರು.
ಕೋಶಾಧ್ಯಕ್ಷರಾದ ರಾಜಗೋಪಾಲ ಅಮ್ಮಂಕಲ್ಲು ಡಿಸೆಂಬರ್ ತಿಂಗಳ ವಲಯ ಲೆಕ್ಕಪತ್ರವನ್ನು ಮಂಡಿಸಿದರು.
ವೈದಿಕ ಪ್ರಧಾನರಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಉಪಾಸನಾ ವರದಿಗಳನ್ನು ನೀಡಿ ಶ್ರೀಗುರುಗಳ ನಿರ್ದೇಶಾನುಸಾರ ನಡೆಯುತ್ತಿರುವ ಶಿವಪಂಚಾಕ್ಷರಿ ಜಪಾನುಷ್ಠಾನದಲ್ಲಿ ವಲಯದಿಂದ ಭಾಗವಹಿಸುವ ಶಿಷ್ಯಬಾಂಧವರ ಮಾಹಿತಿ ನೀಡಿದರು.
ಜನವರಿ 23 ರಿಂದ 25 ರ ತನಕ ಪೆರಾಜೆಯ ಮಾಣಿಮಠದಲ್ಲಿ ನಡೆಯುವ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ 26 ರಿಂದ 28 ರ ವರೆಗೆ ಗೋಕರ್ಣದ ಅಶೋಕೆಯಲ್ಲಿ ಸೇವಾಸೌಧ ಸಮರ್ಪಣೆಯ ಅಂಗವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿಯನ್ನು ಸಭೆಗೆ ನೀಡಲಾಯಿತು.
ಶ್ರೀಮಠಕ್ಕೆ ಪ್ರತಿ ವರ್ಷದಂತೆ ಸಮರ್ಪಿಸಲಿರುವ ದೀಪಕಾಣಿಕೆ , ಬೆಳೆ ಸಮರ್ಪಣೆ / ಉತ್ಸವಕಾಣಿಕೆ , ಬಿಂದು ಸಿಂಧು ಕಾಣಿಕೆಗಳನ್ನು ಗುರಿಕ್ಕಾರರು ತಿಳಿಸಿದ ದಿನ ಅವರ ಮನೆಗೆ ಹೋಗಿ ಸಲ್ಲಿಸುವಂತೆ ತಿಳಿಸಲಾಯಿತು.
ಸಭಾಧ್ಯಕ್ಷರು ಮಾತನಾಡಿ ಮಾಣಿಮಠದ ಕಾರ್ಯಕ್ರಮಗಳಿಗೆ ವಲಯದಿಂದ ಸುವಸ್ತುಗಳನ್ನು ಸಮರ್ಪಿಸಲು ಇಚ್ಚಿಸುವವರು ಮುಷ್ಟಿಭಿಕ್ಷಾ ಸಂಗ್ರಹ ಕೇಂದ್ರಗಳಿಗೆ ಜನವರಿ 21 ಕ್ಕೆ ತಲುಪಿಸುವಂತೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ವಲಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಷ್ಯಬಾಂಧವರು ಭಾಗವಹಿಸುವಂತೆ ಕೋರಿಕೊಂಡರು. ಶ್ರಾವಣಕೆರೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮಠದಲ್ಲಿ ಜನವರಿ 21 ಶನಿವಾರ ಬೆಳಗ್ಗಿನಿಂದ ನಡೆಯಲಿರುವ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಮಂತ್ರಿಸಿದರು.
ರಾಮತಾರಕ ಜಪ, ಶಾಂತಿಮಂತ್ರ ,ಶಂಖನಾದದೊಂದಿಗೆ ಸಭೆ ಸಂಪನ್ನವಾಯಿತು.
ಶಿಷ್ಯಮಾಧ್ಯಮ ಗುಂಪೆವಲಯ