ತಾಳ್ಮೆಯ ಸಂಪಾದನೆ ತಪಸ್ಸಿನಿಂದ ಸಾಧ್ಯ: ರಾಘವೇಶ್ವರ ಶ್ರೀ

ಮಠ

 

ಗೋಕರ್ಣ: ತಾಳ್ಮೆಯ ಸಂಪಾದನೆ ಆಗುವುದು ತಪಸ್ಸಿನಿಂದ; ಅತಿಯಾದ ಸುಖ, ದುಃಖವನ್ನು ತಡೆದುಕೊಳ್ಳುವ ತಾಳ್ಮೆ ದೊರಕುವುದು ತಪಸ್ಸಿನಿಂದ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಬ್ರಹ್ಮಜ್ಞಾನವನ್ನು ಅನುಭವಿಸುವ ಯೋಗ್ಯತೆ ದೊರಕುವುದು ತಪಸ್ಸಿನಿಂದ ಮಾತ್ರ; ಅದನ್ನು ಅನುಭವಿಸಲು ಯೋಗಿಗಳಿಗೆ ಮಾತ್ರ ಸಾಧ್ಯವಾಗುತ್ತದೆ. ಯೋಗ್ಯತೆ ಇದ್ದರೆ ಮಾತ್ರವೇ ಯೋಗ ಬರಬೇಕು. ಎಂದು ಮಾರ್ಮಿಕವಾಗಿ ನುಡಿದರು.

ಯೋಗ್ಯತೆ ಇಲ್ಲದವನಿಗೆ ಯೋಗ ಒದಗಿದರೂ ಅದರಿಂದ ಅನಾಹುತ ಮಾತ್ರ ಆಗುತ್ತದೆ. ನೊಣ ವಜ್ರವನ್ನು ನುಂಗಿದಂತಾಗುತ್ತದೆ. ಸಿಕ್ಕಿದರೂ ಅದನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೆನ್ನನ್ನೇ ಮುರುವಂಥ ಭಾರವನ್ನು ಎತ್ತುವ ಸಾಹಸ ಮಾಡಬಾರದು ಎಂದು ಕಿವಿಮಾತು ಹೇಳಿದರು. ದುಃಖವನ್ನು ತಡೆದುಕೊಳ್ಳಲು ಶಕ್ತಿ ಬೇಕು; ಅಂತೆಯೇ ಸುಖವನ್ನು ಅನುಭವಿಸಲೂ ಶಕ್ತಿ ಬೇಕು ಎಂದರು.

“ಪರಮಾತ್ಮ ಸಾಕ್ಷಾತ್ಕಾರವನ್ನು ಇಂದೇ ನನಗೆ ಕೊಡಬಲ್ಲಿರಾ ಎಂದು ಶಿಷ್ಯನೊಬ್ಬ ಗುರುವನ್ನು ಕೇಳುತ್ತಾನೆ. ಆಗ ಗುರುಗಳು, ಇಂದೇ ಬ್ರಹ್ಮಜ್ಞಾನವನ್ನು ಕೊಡಬಲ್ಲೆ; ಅದನ್ನು ಅರಗಿಸಿಕೊಳ್ಳುವ ಶಕ್ತಿ ನಿನಗಿದೆಯೇ ಎಂದು ಪ್ರಶ್ನಿಸುತ್ತಾರೆ. ಸ್ವರ್ಗ ನರಕಗಳ ಸೃಷ್ಟಿಯೇ ಈ ಕಾರಣದಿಂದ ಆಗಿದೆ. ಸ್ವರ್ಗಸುಖವನ್ನು ಮನುಷ್ಯರು ತಡೆದುಕೊಳ್ಳಲು ಸಾಧ್ಯವಿಲ್ಲ. ಮನುಷ್ಯನಿಗೆ ಇದನ್ನು ಅರಗಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಅದಕ್ಕೆ ಮನುಷ್ಯ ತನ್ನ ದೇಹವನ್ನು ಇಲ್ಲೇ ತ್ಯಜಿಸಿ, ಸ್ವರ್ಗಕ್ಕೆ ಪ್ರತ್ಯೇಕ ದೇಹ ಬೇಕಾಗುತ್ತದೆ. ಅಂತೆಯೇ ಪಾಪದ ದುಃಖವನ್ನು ತಡೆದುಕೊಳ್ಳಲು ನರಕದಲ್ಲೂ ಪ್ರತ್ಯೇಕ ದೇಹ ಬೇಕಾಗುತ್ತದೆ” ಎಂದರು.

ಅಂಥ ನೋವಾದರೂ ಅದನ್ನು ಅನುಭವಿಸುವ ಶಕ್ತಿ ಆ ದೇಹಕ್ಕೆ ಇರುತ್ತದೆ. ಮಿತಿ ಮೀರಿದ ಸುಖ- ದುಃಖವನ್ನು ತಡೆದುಕೊಳ್ಳುವುದೇ ಸ್ವರ್ಗ- ನರಕದ ಸೃಷ್ಟಿಗೆ ಕಾರಣ ಎಂದು ವಿಶ್ಲೇಷಿಸಿದರು.

ಚಾತುರ್ಮಾಸ್ಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸ್ನೇಹಾ ಯೋಗೀಶ್‍ಕುಮಾರ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

Author Details


Srimukha

Leave a Reply

Your email address will not be published. Required fields are marked *