ಮಾತೃತ್ವಮ್ ಕಾಸರಗೋಡು ನಗರಸಮಿತಿ ಸಭೆ

ಇತರೆ

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಹತ್ವಾಕಾಂಕ್ಷೆಯ ಯೋಜನೆಯಾದ ‘ ಮಾತೃತ್ವಮ್ ‘ ನ ಕಾಸರಗೋಡು ನಗರಸಮಿತಿಯ ಸಭೆಯು ಜುಲೈ ೨ ರಂದು ಮೊತ್ತಮೊದಲಾಗಿ ಅಂತರ್ಜಾಲದ ಗೂಗಲ್ ಮೀಟ್ ಮೂಲಕ ನೆರವೇರಿತು.

ಗುರುವಂದನೆ ಗೋಸ್ತುತಿಯೊಂದಿಗೆ ಆರಂಭವಾದ ಸಭೆಯಲ್ಲಿ ಕಾಸರಗೋಡು ನಗರದ ಅಧ್ಯಕ್ಷೆ ಕುಸುಮ ಪೆರ್ಮುಖ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕಾಸರಗೋಡು ನಗರದ ಮಾತೃತ್ವಮ್ ಸಮಿತಿಯ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ಸವಿಸ್ತಾರವಾಗಿ ತಿಳಿಸಿದರು.

ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀಮತಿ ಈಶ್ವರಿ ಬೇರ್ಕಡವು
” ಕಾಸರಗೋಡು ನಗರಸಮಿತಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಸ್ತುತ ಕಾರ್ಯನಿರತವಾಗಿರುವ ಮಾತೃತ್ವಮ್ ಸಮಿತಿಯೇ ಮುಂದಿನ ಅವಧಿಗೂ ಮುಂದುವರಿಸುವಂತೆ ಶ್ರೀಸಂಸ್ಥಾನದವರ ಆದೇಶವಾಗಿದೆ ಹಾಗೂ ಮಾಸದಮಾತೆಯರೆಲ್ಲರೂ ಇದಕ್ಕೆ ಸಹಕಾರ ನೀಡಬೇಕು ” ಎಂದು ಕೋರಿದರು.

ಕೇಂದ್ರ ಪ್ರಧಾನ ಕಾರ್ಯದರ್ಶಿ ಶ್ರೀಮತಿ ನಾಗರತ್ನ ಜಿ ಭಟ್
ಮಾತೃತ್ವಮ್ ಸಮಿತಿಯ ಗೂಗಲ್ ಮೀಟ್ ಸಭೆಯು ಇತರ ಸಮಿತಿಯವರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿ ಇಂತಹ ಸಭೆಗಳಿಂದ ಮಾತೃತ್ವಮ್ ಯೋಜನೆಯ ಕಾರ್ಯಗಳು ತ್ವರಿತಗತಿಯಲ್ಲಿ ಮುಂದುವರಿಯಲು ಅತ್ಯಂತ ಉಪಯುಕ್ತ ‘ ಎಂದು ನುಡಿದರು.

ಕೇಂದ್ರ ಕೋಶಾಧಿಕಾರಿ ಶ್ರೀಮತಿ ಜಯಶೀಲ ಶ್ರೀನಿವಾಸ್ ಅವರು ರಶೀದಿ ಯಲ್ಲಿ PAN number ನಮೂದಿಸುವ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು
.ಮಂಗಳೂರು ಪ್ರಾಂತ್ಯದ ಅಧ್ಯಕ್ಷೆ ಶ್ರೀಮತಿ ಸುಮಾ ರಮೇಶ್
‘ ಮಾತೃತ್ವಮ್ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಮಾಸದಮಾತೆಯರೆಲ್ಲರೂ ದೇಶೀಯ ಗೋತಳಿಗಳ ಬಗ್ಗೆ ಪರಿಜ್ಞಾನ ಹೊಂದಿರಬೇಕು ಹಾಗೂ ಸಮಾಜದ ಇತರರಿಗೂ ಅದನ್ನು ಸಮರ್ಪಕವಾಗಿ ತಿಳಿಸುವ ಅಗತ್ಯವಿದೆ ‘ ಎಂದರು.

ಕಾಸರಗೋಡು ನಗರದ ಕೋಶಾಧಿಕಾರಿ ಶಿವಕುಮಾರಿ ಕುಂಚಿನಡ್ಕ ಇವರು ನಗರದ ಕೋಶದ ಬಗ್ಗೆ ಸಂಪೂರ್ಣ ವರದಿಯನ್ನು ನೀಡಿದರು.

ಮುಳ್ಳೇರಿಯ ಮಂಡಲಾಧ್ಯಕ್ಷರಾದ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್, ಮಂಡಲ ಕಾರ್ಯದರ್ಶಿ ಮಾಡಾವು ಕೃಷ್ಣಮೂರ್ತಿ ಮಾತೃತ್ವಮ್ ನ ಕಾರ್ಯವೈಖರಿಯನ್ನು ಶ್ಲಾಘಿಸಿ ಎಲ್ಲಾ ಮಾಸದಮಾತೆಯರನ್ನೂ ಅಭಿನಂದಿಸಿದರು.

ವಿಜಯಲಕ್ಷ್ಮಿ ಮುಂಡೋಳುಮೂಲೆ ಹಾಗೂ ಪಾರ್ವತಿ ಹಿಳ್ಳೆಮನೆ ಇವರು ಮಾಸದಮಾತೆಯಾಗಿ ಕೆಲವೇ ತಿಂಗಳಲ್ಲಿ ಗುರಿ ತಲುಪಿದ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾಸರಗೋಡು ನಗರಸಮಿತಿಯ ಕಾರ್ಯದರ್ಶಿ ಗೀತಾಲಕ್ಷ್ಮಿ ಮುಳ್ಳೇರಿಯ ಸ್ವಾಗತಿಸಿ, ನಿರೂಪಿಸಿದ ಸಭೆಯಲ್ಲಿ ಕೇಂದ್ರ ಸಮಿತಿಯ ಅಂಕಿತಾ ನೀರ್ಪಾಜೆ, ಮಂಗಳೂರು ಪ್ರಾಂತ್ಯದ ಕಾರ್ಯದರ್ಶಿ ಸರಿತಾ ಪ್ರಕಾಶ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಾಸದ ಮಾತೆಯರು ಭಾಗವಹಿಸಿದ್ದರು.

ಶಾಂತಿಮಂತ್ರದೊಂದಿಗೆ ಸಭೆ ಸಂಪನ್ನವಾಯಿತು.

Author Details


Srimukha

Leave a Reply

Your email address will not be published. Required fields are marked *