ಕುಮಟಾ ಮಂಡಲದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಇತರೆ

ಶ್ರೀಸಂಸ್ಥಾನದವರ ಅನುಗ್ರಹದಿಂದ ಕುಮಟಾ ಮಂಡಲದ ಎಸೆಸೆಲ್ಸಿಯಲ್ಲಿ ೯೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವಾಲಗಳ್ಳಿ ವಲಯದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷರಾದ ಜಿ. ಎಸ್. ಹೆಗಡೆಯವರು ವಹಿಸಿ ಮಾತನಾಡಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿ ವಾಹಿನಿಯ ಮಂಡಲ ಪ್ರಧಾನರಾದ ಎಂ.ಜಿ. ಭಟ್ ಇವರು ಮಾತನಾಡಿ ಮುಂದೆ ಗುರಿ ಹಿಂದೆ ಗುರು ಇದ್ದರೆ ಯಾವುದೇ ಮನುಷ್ಯ ಯಶಸ್ಸು ಗಳಿಸಲು ಸಾಧ್ಯ. ಆದರೆ ನಮ್ಮ ಗುರುಗಳು ಮಠದ ಪ್ರತಿ ಶಿಷ್ಯನ ಕೈಹಿಡಿದು ಜೊತೆಯಾಗಿಯೇ ನಡೆಸಿಕೊಂಡು ಹೋಗುತ್ತಿದ್ದಾರೆ ಇಂತಹ ಗುರುಗಳನ್ನು ಪಡೆದ ನಾವೇ ಧನ್ಯರು ಆದ್ದರಿಂದ ಮುಂದಿನ ದಿನಗಳಲ್ಲಿ ನಾವು ಮಠದ ಜೊತೆಗೆ ಸಂಪರ್ಕವಿಟ್ಟುಕೊಂಡು ಸೇವೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಹಾಮಂಡಲದ ಸುಬ್ರಾಯ ಭಟ್ ಅವರು ಮಾತನಾಡಿ ಸಾಧನೆಗೈದ ಎಲ್ಲರೂ ಅಭಿನಂದನೆಗೆ ಅರ್ಹರು. ಅಭಿನಂದಿಸಲು ಸಂತಸವೆನಿಸುತ್ತದೆ. ಈ ಅಭಿನಂದನೆಯ ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಮುಂದಿನ ದಿನಗಳಲ್ಲಿ ನೀವು ಸಮಾಜಕ್ಕೆ ಮಾದರಿಯಾಗಬೇಕು ಮಠದಲ್ಲಿ ನಡೆಯುವ ಎಲ್ಲಾ ಸೇವೆಗಳಲ್ಲಿ ಭಾಗಿಯಾಗಬೇಕು. ಗುರು ಅನುಗ್ರಹ ಸದಾ ನಿಮಗೆ ಸಿಗುವಂತಾಗಲಿ ಎಂದು ಹಾರೈಸಿದರು.

ಸಂಘಟನಾ ಖಂಡದ ಶ್ರೀಸಂಯೋಜಕರಾದ ಸುವರ್ಣಗದ್ದೆ ಮಂಜುನಾಥ ಭಟ್ ಅವರು ಮಾತನಾಡಿ ಮಠದ ಬಗ್ಗೆ ಪರಂಪರೆಯ ಬಗ್ಗೆ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಿಳಿದುಕೊಳ್ಳಬೇಕು ಹಾಗೂ ಮಠದ ಜೊತೆಗೆ ನೇರ ಸಂಪರ್ಕದಲ್ಲಿರಬೇಕು ಹವ್ಯಕರನ್ನೇ ಮದುವೆಯಾಗಬೇಕು ಯಾಕೆಂದರೆ ಹವ್ಯಕ ಅತ್ಯಂತ ಶ್ರೇಷ್ಠ ಜನ್ಮ ವಾಗಿದ್ದು ಅದು ಮುಂದುವರೆದುಕೊಂಡು ಹೋಗುವ ಅಗತ್ಯವಿದೆ ಹಾಗೂ ವೈಜ್ಞಾನಿಕ ಕಾರಣ ಕೂಡ ಇದೆ.

ಮಹಾಮಂಡಲದ ಶ್ರೀಕಾಂತ್ ಪಂಡಿತ್ ಮಾತನಾಡಿ ಸಾಧನೆಗೈದ ಎಲ್ಲರೂ ಅಭಿನಂದನೆಗೆ ಅರ್ಹರು ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ನಿಮ್ಮಿಂದ ಬರಲಿ. ಗುರುಗಳ ಅನುಗ್ರಹ ಎಲ್ಲರ ಮೇಲಿರಲಿ ಎಂದು ಹಾರೈಸಿದರು.

ಅರುಣ್ ಹೆಗಡೆ ಯವರು ಕೂಡ ವೇದಿಕೆಯಲ್ಲಿ ಇದ್ದರು. ಮಾತನಾಡಿ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಿದೆ, ಇನ್ನು ಹೆಚ್ಚಿನ ಸಾಧನೆ ನಿಮ್ಮಿಂದ ಆಗಲಿ ಎಂದು ಹಾರೈಸಿದರು

ರಾಜ್ಯ ಪ್ರಶಸ್ತಿ ಪಡೆದ ಡಾಕ್ಟರ್ ರವೀಂದ್ರ ಭಟ್ ಸೂರಿ ಅವರನ್ನು ಹಾಗೂ ಯಕ್ಷಸಿರಿ ಪ್ರಶಸ್ತಿ ಪಡೆದ ರಾಮ ಹೆಗಡ ಅವರನ್ನು ಸನ್ಮಾನಿಸಲಾಯಿತು. ಡಾಕ್ಟರ್ ರವೀಂದ್ರ ಭಟ್ ಸೂರಿ ಅವರು ಮಾತನಾಡಿ ನನ್ನ ಜೀವನದ ಶ್ರೇಷ್ಠ ಸಾಧನೆಗೆ ಗುರುಗಳ ಆಶೀರ್ವಾದವೇ ಕಾರಣ ಅವರ ಸಂಪೂರ್ಣ ಅನುಗ್ರಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದರು. ಯಕ್ಷಸಿರಿ ಪ್ರಶಸ್ತಿ ಪಡೆದ ಶ್ರೀ ರಾಮ ಹೆಗಡೆ ಅವರು ಕೂಡ ಮಾತನಾಡಿದರು.

ವಲಯದ ಜಿ.ಜಿ. ಭಟ್ ಅವರು ವಂದನಾರ್ಪಣೆ ಮಾಡಿದರು. ದಿನೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು, ಪಾಲಕರು ಹಾಗೂ ಪದಾಧಿಕಾರಿಗಳು ಕಾರ್ಯಕರ್ತರು ಒಟ್ಟು ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ೨೩ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಸ್ಮರಣಿಕೆಯನ್ನು ನೀಡಲಾಯಿತು.

ಎಸೆಸೆಲ್ಸಿಯಲ್ಲಿ ಶೇಕಡ ೯೦ ಹಾಗೂ ೯೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಶ್ರೀಗಳ ಆಶೀರ್ವಾದಪೂರ್ವಕ ಅಭಿನಂದನಾ ಪತ್ರವನ್ನು ಹಾಗೂ ನೆನಪಿನ ಕಾಣಿಕೆಯನ್ನು ಮಂಡಲದ ಅಧ್ಯಕ್ಷರು ಹಾಗೂ ಮಹಾಮಂಡಲದ ಹಿರಿಯರ ಕೈಯಿಂದ ಪಡೆದರು. ಶಂಖನಾದ ಹಾಗೂ ಗುರುವಂದನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Leave a Reply

Your email address will not be published. Required fields are marked *