ಪವಿತ್ರ ಉದ್ದೇಶಕ್ಕಾಗಿ ನಾಯಕತ್ವ ಅಪೇಕ್ಷಣೀಯ – ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ

ಇತರೆ

ಕತ್ತಿಯನ್ನು ಮಸೆದಂತೆ ನೀವು ನಿಮ್ಮನ್ನು ಪರಿಷ್ಕರಿಸಿಕೊಂಡಾಗ ಸೇವೆಗೆ ಇನ್ನಷ್ಟು ಅವಕಾಶ ಸಿಗುವಂತಾಗುತ್ತದೆ. ನಾಯಕರಾಗಲು ಹಾತೊರೆಯುವುದು ಸಮಾಜದಲ್ಲಿ ಕಾಣುತ್ತಿದ್ದು, ಒಂದು ಪವಿತ್ರ ಉದ್ದೇಶಕ್ಕಾಗಿ ನಾಯಕತ್ವ ಅಪೇಕ್ಷಣೀಯ ಎಂದು ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಗಳವರು ಹೇಳಿದರು.

ಶ್ರೀರಾಮಚಂದ್ರಾಪುರಮಠದ ಸೇವಾ ಖಂಡದ ಕಾರ್ಯವೇಕ್ಷಣೆ ಮತ್ತು ತರಬೇತಿ ಉಪಖಂಡದ ವತಿಯಿಂದ ವೆಬಿನಾರ್ ಮೂಲಕ ನಡೆಯುವ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಕಾರ್ಯವೇಕ್ಷಣೆ ಉಪಖಂಡ ಶ್ರೀಸಂಯೋಜಕ ಬಾಲಸುಬ್ರಹ್ಮಣ್ಯ ಭಟ್ ಮಾತನಾಡಿ ವ್ಯಕ್ತಿ ಪಕ್ವವಾದರೆ ವ್ಯಕ್ತಿತ್ವ ಸರಿಯಾದ ದಾರಿಯಲ್ಲಿರಲು ಸಾಧ್ಯ. ಸಮಾಜದಲ್ಲಿ ವಿವಿಧ ಸ್ತರಗಳವರ ಜತೆಗೆ ತೊಡಗಿಕೊಳ್ಳುವಾಗ ನಮ್ಮ ನಡೆನುಡಿಗಳು ಅಚ್ಚುಕಟ್ಟಾಗಿರಬೇಕು ಎಂದು ವಿವರಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ವಾಯುಸೇನಾ ಅಧಿಕಾರಿಗಳಾದ ಶ್ರೀಪ್ರಕಾಶ ಭಟ್ ಕುಕ್ಕಿಲ ಮಾತನಾಡಿ ನಮ್ಮನ್ನು ನಾವು ಅರಿಯಲು ಪ್ರಯತ್ನ ಪಡಬೇಕು. ಮಾತಿನ ಶೈಲಿಯ ಮೂಲಕ ವ್ಯಕ್ತಿಯನ್ನು ಒಂದು ಹಂತದಲ್ಲಿ ಅರಿಯಲು ಸಾಧ್ಯವಾಗುತ್ತದೆ ಎಂದರು.

ಸ್ವಪರಿಚಯ ಸೇರಿ ವಿವಿಧ ಚಟುವಟಿಕೆಗಳಲ್ಲಿ ಶಿಬಿರಾರ್ಥಿಗಳು ಭಾಗವಹಿಸಿದರು. ಪ್ರತಿ ಶನಿವಾರ ಹಾಗೂ ಭಾನುವಾರ ಒಂದು ಗಂಟೆಗಳ ಕಾಲ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ೨೫ಕ್ಕೂ ಅಧಿಕ ಮಂದಿ ಭಾಗವಹಿಸಿದರು. ಸೇವಾ ಖಂಡದ ಸಂಯೋಜಕಿ ವಿದ್ಯಾಲಕ್ಷ್ಮಿ ಕೈಲಂಕಜೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *