ಸಂಪಾದಕರ ಜತೆ ಶ್ರೀಸಂವಾದ

ಮಠ ಸುದ್ದಿ

ಗಿರಿನಗರ: ಶ್ರೀಮಜ್ಜಗದ್ಗುರುಶಂಕರಾಚಾರ್ಯಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಪೀಠಾರೋಹಣಕ್ಕೆ 25 ಸಂವತ್ಸರಗಳು ತುಂಬಿರುವ ಹಿನ್ನೆಲೆಯಲ್ಲಿ ಶ್ರೀಮಠದ ಕಾಲು ಶತಮಾನದ ಕಾರ್ಯಚಟುವಟಿಕೆಗಳ ಸಿಂಹಾವಲೋಕನ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚಿಂತನ-ಮಂಥನಕ್ಕೆ ವೇದಿಕೆ ಕಲ್ಪಿಸುವ ಸಲುವಾಗಿ ನಾಡಿನ ಪ್ರಮುಖ ಪತ್ರಿಕೆಗಳ ಸಂಪಾದಕರು, ಮಾಧ್ಯಮಸಂಸ್ಥೆಗಳ ಮುಖ್ಯಸ್ಥರ ಜತೆಗೆ ಶ್ರೀಗಳ ಸಂವಾದ ಕಾರ್ಯಕ್ರಮವನ್ನು ಪುನರ್ವಸು ಭವನದಲ್ಲಿ ಗುರುವಾರ (ಅಕ್ಟೋಬರ್ 10) ಹಮ್ಮಿಕೊಳ್ಳಲಾಗಿತ್ತು.

 

ಇದುವರೆಗೆ ಶ್ರೀಮಠ ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನ, ಗೋಯಾತ್ರೆಯಂಥ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆ, ಇನ್ನು ಮುಂದೆ ಸಮಾಜದ ಸರ್ವಾಂಗೀಣ ಪ್ರಗತಿಯ ಉದ್ದೇಶದ ಬೃಹತ್ ಯೋಜನೆಗಳನ್ನು ಕಾಲಮಿತಿಯಲ್ಲಿ ಹಮ್ಮಿಕೊಳ್ಳಲಿದೆ ಎಂದು ಶ್ರೀಗಳು ಸಂವಾದದಲ್ಲಿ ವಿವರಿಸಿದರು.
ವಿಶ್ವದಲ್ಲೇ ಏಕೈಕ ಗೋಸ್ವರ್ಗವನ್ನು ಶ್ರೀಮಠ ಕಳೆದ ವರ್ಷ ಸಮಾಜಕ್ಕೆ ಸಮರ್ಪಿಸಿದ್ದರೆ, 2020ರ ಏಪ್ರಿಲ್ 26ರಂದು ಭಾರತೀಯ ಪರಂಪರೆಯ ಎಲ್ಲ ವಿದ್ಯೆಗಳನ್ನು ಒಂದೆಡೆ ಕಲಿಸುವ, ವಿಶ್ವದಲ್ಲೇ ಏಕೈಕ ಎನಿಸಿದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.

ವಿಜಯವಾಣಿ ಸಹ ಸಂಪಾದಕ ರಾಘವೇಂದ್ರ ಗಣಪತಿ, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಹೊಸದಿಗಂತ ಸಮೂಹ ಸಂಪಾದಕ ವಿನಾಯಕ ಭಟ್ ಮುರೂರು, ಪ್ರಜಾವಾಣಿಯ ಪ್ರವೀಣ್ ಪಾಡಿಗಾರ್, ದಕ್ಷಿಣ್ ಭಾರತ್ ರಾಷ್ಟ್ರಮತ ಹಿಂದಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಭೂಪೇಂದ್ರ ಕುಮಾರ್, ವಿಜಯ ಕರ್ನಾಟಕದ ಶಶಿಧರ್ ಹೆಗಡೆ, ಸಂಯುಕ್ತ ಕರ್ನಾಟಕದ ಸಹ ಸಂಪಾದಕ ಕೆ.ವಿ.ಪರಮೇಶ್, ಬೆಂಗಳೂರು ಸ್ಥಾನಿಕ ಸಂಪಾದಕ ಸೋಮಶೇಖರ ಯಡವಟ್ಟಿ, ವಿಕ್ರಮ ನಿಯತಕಾಲಿಕ ಸಂಪಾದಕ ವೃಷಾಂಕ್ ಭಟ್, ಆರ್ಗನೈಸರ್ ಇಂಗ್ಲಿಷ್ ನಿಯತಕಾಲಿಕದ ಗುರುಪ್ರಸಾದ್, ಉತ್ಥಾನ ಸಂಪಾದಕ ಕೇಶವ ಭಟ್ ಕಾಕುಂಜೆ, ವನ್ ಇಂಡಿಯಾ ಪ್ರಧಾನ ಸಂಪಾದಕ ಬಾಲರಾಜ್ ತಂತ್ರಿ, ಸಂಪಾದಕ ಎಚ್.ಎಂ.ಪ್ರಶಾಂತ್, ಟಿವಿ-5 ಮುಖ್ಯಸ್ಥ ಶ್ರೀನಾಥ್ ಜೋಶಿ, ಎಸ್‍ನ್ಯೂಸ್ ಸಂಪಾದಕ ರಾಜೀವ್ ಹೆಗಡೆ, ದಿಗ್ವಿಜಯ ಟಿವಿ ಮುಖ್ಯ ಕಾರ್ಯಕ್ರಮ ನಿರ್ಮಾಪಕ ಪ್ರಶಾಂತ್ ಆರ್.ಎಸ್ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ವಿಶ್ವವಿದ್ಯಾಪೀಠ ನಿರ್ವಹಣಾ ಸಮಿತಿ ಅಧ್ಯಕ್ಷ ಡಾ.ವೈ.ವಿ.ಕೃಷ್ಣಮೂರ್ತಿ ಸ್ವಾಗತಿಸಿರು. ಡಾ.ಶಾರದಾ ಜಯಗೋವಿಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Author Details


Srimukha

Leave a Reply

Your email address will not be published. Required fields are marked *