” ಶ್ರೀಮಠದ ಸೇವೆಯಲ್ಲಿ ದೊರಕುವ ಆನಂದ ವರ್ಣನೆಗೆ ಸಿಗದು ” : ಅದಿತಿ ಬಿ.ಎಸ್.ಭಟ್

ಮಾತೃತ್ವಮ್

 

” ಹಿರಿಯ ಗುರುಗಳ ಕಾಲದಿಂದಲೂ ಶ್ರೀಮಠದ ಸಂಪರ್ಕವಿದೆ. ಇತ್ತೀಚಿನ ಎರಡು ದಶಕಗಳಿಂದ ಶ್ರೀಮಠದ ಸೇವೆಗೆ ಮತ್ತಷ್ಟು ಅವಕಾಶಗಳು ದೊರಕಿದವು. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಾಗ ದೊರಕುವ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ. ಅದನ್ನು ಅನುಭವಿಸಿದವರಷ್ಟೇ ತಿಳಿಯಬಲ್ಲರು ” ಎಂದು ನುಡಿದವರು ಪುತ್ತೂರು ಸಮೀಪ ಬಡೆಕ್ಕಿಲ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಶ್ರೀಗಿರಿನಗರ ವಲಯ ನಿವಾಸಿಗಳಾಗಿರುವ ಡಾ. ಬಿ.ಎಸ್. ಭಟ್ ಅವರ ಪತ್ನಿ ಅದಿತಿ ಭಟ್.

 

ಕನ್ಯಾನ ಕಮ್ಮಜೆಯ ಗಣಪತಿ ಭಟ್ ಪಾರ್ವತಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

 

ಶ್ರೀರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಭಾಗವಹಿಸಿದ ಅದಿತಿ ಭಟ್ ಶ್ರೀಮಠದ ವಿವಿಧ ಸೇವಾ ವಿಭಾಗಗಳಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದವರು.

 

” ನನ್ನ ಆತ್ಮ ಸಂತೋಷಕ್ಕಾಗಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಸಾವಿರದ ಸುರಭಿಯ ಮೂಲಕ ಲಕ್ಷ ಭಾಗಿನಿಯಾಗಿ ಶ್ರೀಗುರುಗಳಿಂದ ಬಾಗಿನವನ್ನು ಸ್ವೀಕರಿಸಿದ್ದೇನೆ. ಗೋಮಾತೆಯ ಸೇವೆಗೆ ಅನೇಕ ಮಂದಿ ಬಹಳ ಸಂತೋಷದಿಂದ ಸಹಕಾರ ನೀಡಿದ್ದಾರೆ. ‌ನಾವು ಗಿರಿನಗರ ನಿವಾಸಿಗಳಾದುದರಿಂದ ಶ್ರೀಮಠದ ಸೇವೆಯನ್ನು ಮಾಡುವ ಸದವಕಾಶ ನಮಗೆ ದೊರಕಿದೆ. ಇಲ್ಲಿ ನಡೆಯುವ ಚಾತುರ್ಮಾಸ್ಯದ ಸಂದರ್ಭಗಳಲ್ಲಿ ಕಾರ್ಯಕರ್ತೆಯಾಗಿ ಸೇವೆ ಮಾಡಿದ್ದೇನೆ ” ಎನ್ನುವ ಇವರು ಧರ್ಮಭಾರತೀ ಪತ್ರಿಕೆಯ ಸಹಾಯ ವಿಭಾಗದಲ್ಲೂ ಸೇವೆ ಸಲ್ಲಿಸಿದ್ದಾರೆ.

 

” ಸಾಧ್ಯವಿರುವಷ್ಟು ಕಾಲ ಸಾಧ್ಯವಾದ ರೀತಿಯಲ್ಲಿ ಶ್ರೀಮಠದ, ಗೋಮಾತೆಯ ಸೇವೆ ಮಾಡುವುದೇ ಜೀವನದ ಗುರಿ ” ಎನ್ನುವ ಅದಿತಿ ಭಟ್ ಅವರ ಕಾರ್ಯಗಳಿಗೆ ಮನೆಯವರೆಲ್ಲರ ಸಂಪೂರ್ಣ ಸಹಕಾರ ದೊರಕಿದೆ.

 

ಪ್ರಸನ್ನಾ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *