” ತನ್ನ ಜೀವನವನ್ನು ಮಾನವರ ಒಳಿತಿಗಾಗಿ ಮುಡಿಪಾಗಿರಿಸಿದ ಗೋಮಾತೆಯ ಬದುಕು ತ್ಯಾಗದ ಸಂಕೇತ. ಗೋವಿಲ್ಲದಿದ್ದರೆ ನಮ್ಮ ಜೀವನ ಅಪೂರ್ಣ. ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ಕೊಡುವ ಗೌರವ ಅನುಪಮ. ಗೋಗ್ರಾಸ ನೀಡದೆ ಯಾವುದೇ ಶುಭಕಾರ್ಯವೂ ಸಂಪನ್ನವಾಗುವುದಿಲ್ಲ ” ಈ ನುಡಿಗಳು ಉಪ್ಪಿನಂಗಡಿ ಮಂಡಲ ಉಜಿರೆ ವಲಯದ ಗುರಿಂಗಾನ ಮನೆಯ ಪರಮೇಶ್ವರ ಭಟ್ಟರ ಪತ್ನಿ ವಿಜಯಲಕ್ಷ್ಮಿ ಅವರದ್ದು.
ಮೂಲತಃ ಕನ್ಯಾನದವರಾದ ಪ್ರಸ್ತುತ ಚಾರ್ಮಾಡಿ ನಿವಾಸಿಗಳಾಗಿರುವ ನಾರಾಯಣ ಭಟ್, ದ್ರೌಪದಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ಒಂದು ವರ್ಷದ ಗುರಿ ತಲುಪಿ ಲಕ್ಷ ಭಾಗಿನಿಯಾದ ಮಾಸದ ಮಾತೆಯಾಗಿದ್ದಾರೆ.
ಉಜಿರೆಯ ನಡ ಘಟಕ ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ತಂಗಿ ಶೈಲಜಾ ಪೋಳ್ಯ ಅವರ ಪ್ರೇರಣೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದವರು.
” ದೇಶೀಯ ಗೋವುಗಳ ಬಗ್ಗೆ ಸಮಾಜದಲ್ಲಿ ಉತ್ತಮ ಸ್ಪಂದನೆಯಿದೆ. ಗೋಮಾತೆಯ ಸೇವೆಯಲ್ಲಿ ಅನೇಕ ಮಂದಿ ಬಂಧುಗಳು, ಸ್ನೇಹಿತರು ಕೈ ಜೋಡಿಸಿದ್ದಾರೆ. ಶ್ರೀಗುರುಗಳ ಕಾರುಣ್ಯದಿಂದ ಗುರಿ ತಲುಪಲು ಸಾಧ್ಯವಾಯಿತು. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದೆ ” ಎನ್ನುವ ಇವರ ಗೋಸೇವೆಗೆ ಮನೆಯವರೆಲ್ಲರ ಸಹಕಾರವಿದೆ.
ಪ್ರಸನ್ನಾ ವಿ ಚೆಕ್ಕೆಮನೆ