” ಗೋಮಾತೆಯ ಸೇವೆ ಮಾಡಲು ಶ್ರೀಗುರುಕೃಪೆ ಬೇಕು ” : ದೀಪಾ ಸಹದೇವ , ಬೆಂಗಳೂರು

” ನಾವೆಲ್ಲರೂ ಗೋಮಾತೆಯ ಹಾಲನ್ನು ಕುಡಿದು ಬೆಳೆದವರು, ಚಲಿಸುವ ದೇವಾಲಯವಾದ ಗೋಮಾತೆಯ ರಕ್ಷಣೆಗಾಗಿ ಪುರಾಣೇತಿಹಾಸಗಳಲ್ಲಿ ಅನೇಕ ಮಂದಿ ಮಹಾತ್ಯಾಗಗಳನ್ನು ಮಾಡಿದ್ದಾರೆ. ನಮ್ಮ ಬದುಕಿಗೆ ಇವರೆಲ್ಲರೂ ಮಾರ್ಗದರ್ಶಿಗಳಾಗಬೇಕು. ಗೋಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಶ್ರೀಗುರುಗಳ ಮಾತುಗಳೇ ನನ್ನ ಗೋಸೇವೆಗೆ ಪ್ರೇರಣೆ ” ಎಂದು ನುಡಿದವರು ಗುತ್ತಿಗಾರು ಸಮೀಪದ ಕಟ್ಟ ಮೂಲದ ಪ್ರಸ್ತುತ ದಕ್ಷಿಣ ಬೆಂಗಳೂರು ಮಂಡಲದ ,ಗಿರಿನಗರ ವಲಯದಲ್ಲಿ ವಾಸಿಸುತ್ತಿರುವ ಸಹದೇವ ಕಟ್ಟ ಇವರ ಪತ್ನಿ ದೀಪಾ. ಮಂಗಳೂರಿನ ವಿಜಯ ಭಟ್ ಹಾಗೂ ಜಯಶ್ರೀ ದಂಪತಿಗಳ ಪುತ್ರಿಯಾದ […]

Continue Reading

” ಸಮರ್ಪಣಾ ಭಾವದ ಸೇವೆಯಿಂದ ಮನಸ್ಸಿಗೆ ನೆಮ್ಮದಿ ” ಸರಸ್ವತಿ ಪ್ರಭಾಕರ ಹೆಗಡೆ, ಸಾಗರ

  ” ಸಾವಿರದ ಸುರಭಿ ಯೋಜನೆಯಲ್ಲಿ ಗೋಮಾತೆಯ ಸೇವೆ ಮಾಡುವ ಮಾತೆಯರಿಗೆ ಸಹಕಾರ ನೀಡುತ್ತಾ ಸುರಭಿ ಸೇವಿಕೆಯಾಗಿ ಸೇವೆ ಮಾಡಿದೆ. ಮಾತೃತ್ವಮ್ ನ ಮಾಸದ ಮಾತೆಯರಿಗೂ ಸಹಕಾರ ನೀಡಿದೆ. ನಮ್ಮ ವಲಯ ಕೋಶಾಧ್ಯಕ್ಷೆ ರುಕ್ಮಾವತಿ ರಾಮಚಂದ್ರ ಅವರು ‘ ನೀನೇ ಮಾಸದ ಮಾತೆಯಾಗು ‘ ಎಂದು ಪ್ರೋತ್ಸಾಹ ನೀಡಿದರು. ಅವರ ಮಾರ್ಗದರ್ಶನದ ಮೂಲಕ ನಾನೂ ಮಾಸದ ಮಾತೆಯಾಗಿ ಸೇವೆ ಮಾಡಲು ನಿರ್ಧರಿಸಿದೆ. ” ಎನ್ನುವವರು ಸಾಗರ ಮಂಡಲದ ಪೂರ್ವ ವಲಯದ ‘ ಅರುಣೋದಯ’ ಅಗ್ರಹಾರದ ನಿವಾಸಿಗಳಾಗಿರುವ ಪ್ರಭಾಕರ […]

Continue Reading

” ಬದುಕಿನ ಅದೃಷ್ಟ ಎಂಬುದು ಶ್ರೀಗುರು ಸೇವೆಯ ಸೌಭಾಗ್ಯ ” : ನವ್ಯಶ್ರೀ ಹೊಸಕೊಪ್ಪ

  ” ಗುರು ಶಿಷ್ಯ ಸಂಬಂಧ ಎಂಬುದು ಆತ್ಮ ಸಂಬಂಧ, ನನ್ನ ಕಣ್ಣಿಗೆ ಕಾಣುವ ಶ್ರೀರಾಮ ದೇವರು ಎಂದರೆ ಶ್ರೀಗುರುಗಳೇ. ಒಮ್ಮೆಯೂ ನಾನು ಯಾವ ವಿಚಾರಕ್ಕೂ ಶ್ರೀಗುರುಗಳನ್ನು ಭೇಟಿಯಾಗಿ ನಿವೇದನೆ ಮಾಡಿಲ್ಲ, ಆದರೂ ಅನೇಕ ಸಂಕಷ್ಟಗಳಿಂದ ಪಾರಾಗಿದ್ದು ಶ್ರೀಗುರುಗಳ ಕೃಪಾ ಕಟಾಕ್ಷದಿಂದ ಎಂಬುದೇ ಸತ್ಯ. ಬದುಕಿನ ಅದೃಷ್ಟ ಎಂದರೆ ಅದು ಶ್ರೀಗುರು ಸೇವೆಯ ಸೌಭಾಗ್ಯ. ಇದಕ್ಕಿಂತ ಮಿಗಿಲಾಗಿ ನನ್ನ ಬದುಕಿನಲ್ಲಿ ಯಾವುದೂ ಇಲ್ಲ ” ಎಂಬ ಭಾವಪೂರ್ಣ ನುಡಿಗಳು ನವ್ಯಶ್ರೀ ಹೊಸಕೊಪ್ಪ ಅವರದ್ದು. ಮನೆಘಟ್ಟದ ಸುಬ್ಬರಾವ್, ಪ್ರಭಾ […]

Continue Reading

ಮನವೆಂದೂ ಶ್ರೀಮಠದ ಸೇವೆಯಲ್ಲಿ ತಲ್ಲೀನ ” : ಪ್ರೇಮಲತಾ ಜಿ. ಭಟ್ , ಕಜೆಹಿತ್ತಿಲು

  ” ನಮ್ಮ ಸಮಾಜವನ್ನು ಒಗ್ಗೂಡಿಸಿ, ಗೋಮಾತೆಯ ಮಹತ್ವವನ್ನು ತಿಳಿಸಿ, ಅದರ ಉಳಿವಿಗಾಗಿ ಅವಿರತ ಶ್ರಮಿಸುವ ನಮ್ಮ ಶ್ರೀಗುರುಗಳ ಮಹೋನ್ನತ ಪರಿಕಲ್ಪನೆಯಾದ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಸೇವೆ ಮಾಡುವ ಅವಕಾಶ ದೊರಕಿದ್ದು ಮನಸ್ಸಿಗೆ ಅತ್ಯಂತ ಸಂತಸ ನೀಡಿದೆ. ಮನದ ಪ್ರಾರ್ಥನೆಯನ್ನು ತಾನೇ ಅರಿತು ಅದಕ್ಕೆ ಕೂಡಲೇ ಪರಿಹಾರ ದೊರಕುವಂತೆ ಮಾಡುವ ಶ್ರೀಚರಣ ಸೇವೆಯಲ್ಲಿ ಮನಸ್ಸು ಸದಾ ತಲ್ಲೀನವಾಗಲು ಬಯಸುತ್ತಿದೆ.‌ ಆ ಖುಷಿಯನ್ನು ವರ್ಣಿಸಲು ಸಾಧ್ಯವಿಲ್ಲ , ಬದುಕಿನಲ್ಲಿ ನೆಮ್ಮದಿ, ಶಾಂತಿಯ ಆಶ್ರಯಧಾಮವೇ ಶ್ರೀರಾಮದೇವರು. ಇದು […]

Continue Reading

” ಶ್ರೀಮಠದ ಸೇವೆಯಿಂದ ದೊರಕುವುದು ಮನಕ್ಕೆ ಆನಂದ ” : ವಾಸಂತಿ ಹೆಗಡೆ ಬೆಂಗಳೂರು

  ” ದೊಡ್ಡ ಗುರುಗಳ ಕಾಲದಿಂದಲೇ ಶ್ರೀಮಠದ ಸಂಪರ್ಕದಲ್ಲಿ ಇರುವವರು ನಾವು, ಕೆಲವು ಕಾಲ ವಿದೇಶದಲ್ಲಿ ಇದ್ದು ಬಂದವರಾದರೂ ಮನಸ್ಸಿಗೆ ಆನಂದ ದೊರಕುವುದು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಾಗಲೇ. ಬೇರೆಲ್ಲೂ ಸಿಗದ ನೆಮ್ಮದಿ, ಶಾಂತಿ ಇಲ್ಲಿದೆ ” ಎನ್ನುವವರು ಹೊನ್ನಾವರ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ವಿಜಯನಗರ ವಲಯ ನಿವಾಸಿಗಳಾಗಿರುವ ವಾಸಂತಿ ಹೆಗಡೆ. ಕುಮಟಾದ ಶಂಕರ ರಾಮ ಹೆಗಡೆ ಹಾಗೂ ಲಕ್ಷ್ಮೀ ಹೆಗಡೆಯವರ ಪುತ್ರಿಯಾದ ವಾಸಂತಿ ಹೆಗಡೆಯವರು ಶ್ರೀಮಠದ ವಿವಿಧ ವಿಭಾಗಗಳಲ್ಲಿ ಸೇವೆ ಮಾಡಿದ ಅನುಭವವುಳ್ಳವರು. ಮಂಡಲಾಧ್ಯಕ್ಷರಾದ […]

Continue Reading

ಶ್ರೀಗುರು ಕಾರುಣ್ಯದಿಂದ ದೊರಕಿದ ಮರುಜನ್ಮವಿದು ” : ಲಕ್ಷ್ಮೀ ಮಂಜುನಾಥ, ತುಮಕೂರು

” ಪೂರ್ವ ಜನ್ಮದ ಸುಕೃತದಿಂದ ಶ್ರೀಮಠದ ಸಂಪರ್ಕಕ್ಕೆ ಬಂದೆವು, ಶ್ರೀಗುರುಗಳ ಚರಣ ಸೇವಾ ಸೌಭಾಗ್ಯವೂ ಒದಗಿಬಂತು. ಇತ್ತೀಚೆಗಂತೂ ಕೊರೋನಾ ಬಂದಾಗ ಶ್ರೀಗುರುಗಳ ಚರಣಕ್ಕೆ ಶರಣಾಗಿ ಗೋಸೇವೆ, ಶ್ರೀಮಠದ ಸೇವೆಗಾಗಿಯೇ ಮರುಜನ್ಮ ಪಡೆದಂತೆ ಬದುಕಿ ಬಂದೆ, ನನ್ನ ಮನದ ಭಾವನೆಗಳನ್ನೆಲ್ಲ ಹೇಳಲು ಪದಗಳೇ ಸಾಲದು, ಅಕ್ಷರ ರೂಪ ನೀಡಲೂ ಅಸಾಧ್ಯ, ಏನಿದ್ದರೂ ಶ್ರೀಗುರುಗಳ ಕರುಣೆ, ಆಶೀರ್ವಾದ ,ಅದುವೇ ನಮ್ಮ ಬದುಕಿನ ಶ್ರೀರಕ್ಷೆ ” ಎಂದು ಭಾವಪೂರ್ಣವಾಗಿ ನುಡಿಯುವವರು ತುಮಕೂರಿನ ಲಕ್ಷ್ಮೀ ಮಂಜುನಾಥ . ಶೃಂಗೇರಿಯ ನಾಗಭೂಷಣ ಭಟ್ ಹಾಗೂ […]

Continue Reading

ಬದುಕಿನ ಪಥ ಬದಲಾಗಿದ್ದು ಶ್ರೀಗುರುಗಳ ಮಾರ್ಗದರ್ಶನದಿಂದ ” : ಗೀತಾ ಮಂಜುನಾಥ ಹೆಗಡೆ ,ಕೆರೆಮನೆ

  ” ಸುಮಾರು ಹದಿನೇಳು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆಧುನಿಕ ಬದುಕಿನಿಂದ ಧಾರ್ಮಿಕ, ಸೌಹಾರ್ದಯುತ ನೆಮ್ಮದಿಯ ಬದುಕಿನ ಪಥ ತೆರೆದುಕೊಂಡಿದ್ದು ಶ್ರೀಗುರು ಸೇವೆಯಿಂದ. ಜೀವನದ ಶೈಲಿ, ರೀತಿ ನೀತಿಗಳು,ಸಂಸ್ಕಾರಗಳು ಸಂಪೂರ್ಣ ಬದಲಾಗಿದ್ದು ಶ್ರೀಗುರುಗಳ ಆಶೀರ್ವಚನಗಳ ಪ್ರೇರಣೆಯಿಂದ ” ಎಂದು ಶ್ರದ್ಧೆಯಿಂದ ನುಡಿಯುವವರು ಹೊನ್ನಾವರ ಮಂಡಲ ಅಪ್ಸರಕೊಂಡ ವಲಯದ ಗುಣವಂತೆ ಕೆರೆಮನೆಯ ಮಂಜುನಾಥ ಹೆಗಡೆಯವರ ಪತ್ನಿ ಗೀತಾ ಎಂ.ಹೆಗಡೆ. ಸಿದ್ಧಾಪುರ ತಾಲೂಕಿನ ಕ್ಯಾದಗಿ ಗಜಾನನ ಹೆಗಡೆ, ಸೀತಮ್ಮ ದಂಪತಿಗಳ ಪುತ್ರಿಯಾದ ಗೀತಾ ಸ್ವಯಂ ಇಚ್ಛೆಯಿಂದ ಮಾಸದ ಮಾತೆಯಾಗಿ […]

Continue Reading

ಗೋಮಾತೆಯ ಸೇವೆಯಲ್ಲಿ ಭಾಗಿಯಾಗುವುದೇ ಅವಿಸ್ಮರಣೀಯ ಅನುಭವ ” : ವನಮಾಲಾ ಬಿ. ಭಟ್, ಆರ್ಲಪದವು

” ನಮ್ಮ ದೇಶದ ಸಂಸ್ಕೃತಿಯ ಪ್ರತೀಕ ಗೋಮಾತೆ, ಅವಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ‘ ಎಂಬ ಶ್ರೀಗುರುಗಳ ಮಾತುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬಂದೆ.‌ ಗೋಮಾತೆಯ ಸೇವೆ ನಿಜಕ್ಕೂ ಅವಿಸ್ಮರಣೀಯ ಅನುಭವ ನೀಡಿದೆ ” ಎನ್ನುವವರು ಉಪ್ಪಿನಂಗಡಿ ಮಂಡಲದ ಬೆಟ್ಟಂಪಾಡಿ ವಲಯದ ಆರ್ಲಪದವು ನಿವಾಸಿಗಳಾಗಿರುವ ಬಾಲಕೃಷ್ಣ ಭಟ್ ಇವರ ಪತ್ನಿ ವನಮಾಲಾ ಭಟ್ ಅವರು. ವಾದ್ಯಕೋಡಿ ಗಣಪತಿ ಭಟ್, ಶಂಕರಿ ಅಮ್ಮ ದಂಪತಿಗಳ ಪುತ್ರಿಯಾದ ವನಮಾಲಾ ಅವರು ಮಾತೃತ್ವಮ್ ಯೋಜನೆಯ ಮೂಲಕ ಒಂದು […]

Continue Reading

ಶ್ರೀಗುರು ಚರಣ ಸೇವೆಯ ಕುಸುಮಗಳು : ಕಮಲಾ ಸುಬ್ರಹ್ಮಣ್ಯ ಹೆಗಡೆ

  ಒಂದು ಮನೆಯ ಪ್ರತಿಯೊಬ್ಬ ಸದಸ್ಯನೂ ಶ್ರೀಗುರುಗಳ ಸೇವೆಯಲ್ಲಿ ತೊಡಗಿಸಿಕೊಂಡರೆ ಆ ಮನೆಯವರನ್ನೆಲ್ಲ ‘ ಶ್ರೀಗುರು ಸೇವೆಯ ಚರಣ ಕುಸುಮಗಳು ‘ ಎಂದು ಹೇಳಬಹುದಲ್ಲವೇ ? ಅಂತಹ ಒಂದು ಕುಟುಂಬ ಹೊನ್ನಾವರ ಮಂಡಲದ ಹೊನ್ನಾವರ ವಲಯದ ನೀಲ್ಕೋಡು ಗುಬ್ಬಿಮನೆಯ ಸುಬ್ರಹ್ಮಣ್ಯ ಹೆಗಡೆ ಅವರ ಪತ್ನಿ ಕಮಲಾ ಎಸ್. ಹೆಗಡೆ ಅವರದ್ದು. ” ನಮ್ಮ ಸೇವೆಯ ಬಗ್ಗೆ ಹೇಳಲೇನಿದೆ..? ಶ್ರೀಗುರುಗಳ ಅನುಗ್ರಹ, ಆಶೀರ್ವಾದದಿಂದ ನಾವೆಲ್ಲ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುವ ಪುಣ್ಯ ದೊರಕಿದೆ. ‌ಇದಕ್ಕಿಂತ ಮಿಗಿಲಾದ ಸೌಭಾಗ್ಯ ಇನ್ನೇನಿದೆ ” […]

Continue Reading

ಗೋಮಾತೆಯ ಸೇವೆಗೆ ಸರಳ ಹಾದಿ ; ಮಾತೃತ್ವಮ್ :ಸುಜಾತ ಮೈಸೂರು

  ” ಶ್ರೀಗುರುಸೇವೆಯಲ್ಲಿ, ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಾಗ ದೊರಕುವ ನೆಮ್ಮದಿ, ಸಂತಸ ಬಣ್ಣನೆಗೆ ಸಿಗುವಂಥದ್ದಲ್ಲ. ಶ್ರೀಗುರು ಕೃಪೆಯೂ ಹಾಗೆಯೇ, ಬದುಕಿನಲ್ಲಿ ಅನೇಕ ಸಮಸ್ಯೆಗಳು ತಲೆದೋರಿದಾಗ ಸುಜ್ಞಾನವೆಂಬ ಬೆಳಕನ್ನು ನೀಡಿ ಆ ತೊಂದರೆಗಳನ್ನು ನಿವಾರಿಸುವುದು ಶ್ರೀಗುರುಗಳ ಅನುಗ್ರಹ. ಅದನ್ನು ಮಾತಿನ ಮೂಲಕವಾಗಲಿ, ಅಕ್ಷರಗಳ ಮೂಲಕವಾಗಲಿ ವಿವರಿಸಲು ಸಾಧ್ಯವಿಲ್ಲ. ಶ್ರೀಗುರುಗಳ ಮಹತ್ವದ ಯೋಜನೆಯಾದ ಮಾತೃತ್ವಮ್ ಮಾತೆಯರಿಗೆ ಮನೆಯಲ್ಲಿದ್ದುಕೊಂಡೇ ಗೋಸೇವೆ ಮಾಡಲು ದೊರಕಿದ ಅತ್ಯಂತ ಸುಲಭ ಹಾಗೂ ಸರಳವಾದ ಹಾದಿ . ಯಾರಿಗೂ ಯಾವುದೇ ಒತ್ತಡವಿಲ್ಲದೆ ಮಾಡಬಹುದಾದ ಸೇವೆಯಿದು ” ಎನ್ನುವವರು […]

Continue Reading

ಬದುಕಿನ ಸತ್ಯಪಥದ ದರ್ಶನ ಶ್ರೀಗುರು ಸೇವೆಯಿಂದ : ಸತ್ಯಶೋಭಾ ಕೈಲಾರು

” ಕತ್ತಲು ತುಂಬಿದ ಕೋಣೆಯನ್ನು ಬೆಳಗಲು ಹಣತೆ ಹೇಗೆ ಮುಖ್ಯವೋ, ಮಾನವನ ಜೀವನದಲ್ಲಿ ತುಂಬಿರುವ ಅಜ್ಞಾನವೆಂಬ ಕತ್ತಲನ್ನು ಕಳೆದು ಸುಜ್ಞಾನವೆಂಬ ಬೆಳಕಿನ ಪಥದತ್ತ ಸಾಗಲು ಶ್ರೀಗುರುಗಳ ಕಾರುಣ್ಯ ಅತೀ ಅಗತ್ಯ , ಭ್ರಮೆಯ ಬದುಕಿನ ಪೊರೆ ಸರಿದು ಸತ್ಯಪಥದ ಹಾದಿ ತೋರುವ ಶ್ರೀಗುರುಸೇವೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಾಗ ದೊರಕುವ ನೆಮ್ಮದಿ, ಶಾಂತಿ ಅವರ್ಣನೀಯ ” ಉಪ್ಪಿನಂಗಡಿ ಮಂಡಲದ, ಉಪ್ಪಿನಂಗಡಿ ವಲಯದ ಕೈಲಾರು ಸತ್ಯನಾರಾಯಣ ಭಟ್ಟರ ಪತ್ನಿ ಸತ್ಯಶೋಭಾ ಅವರ ಮಾತುಗಳು ಇವು. ಸೀಮಾ ಗುರಿಕ್ಕಾರರಾಗಿದ್ದ ಮೊಗ್ರ ಎನ್. ಗೋಪಾಲಕೃಷ್ಣಯ್ಯ […]

Continue Reading

ಪರಮಾನುಗ್ರಹದ ಪರಮಪದ ಬಯಸುವ ಸೇವಾಬಿಂದುಗಳು : ಸಾವಿತ್ರಿ ಜಿ. ಭಟ್ ಮತ್ತು ಪುತ್ರಿಯರು

ಮಂಗಳೂರು ಮಂಡಲದ , ವಿಟ್ಲ ವಲಯದ ಸಾವಿತ್ರಿ ಜಿ.ಭಟ್ ಹಾಗೂ ಪುತ್ರಿಯರ ಪರಿಚಯವಿಲ್ಲದ ಶ್ರೀಮಠದ ಶಿಷ್ಯರು ವಿರಳ ಎನ್ನಬಹುದು. ಈ ಮೂವರೂ ಮಾತೃತ್ವಮ್ ಯೋಜನೆಯ ಮೂಲಕ ಗುರಿ ತಲುಪಿದ ಮಾಸದ ಮಾತೆಯರಾಗಿದ್ದಾರೆ. ಶ್ರೀಗುರುಸೇವೆಯಲ್ಲಿಯೇ ಬದುಕಿನ ನೆಮ್ಮದಿ, ಶಾಂತಿ ಕಾಣುತ್ತಿರುವ ಈ ಮಾತೆಯರ ಬದುಕಿನಲ್ಲಿ ಶ್ರೀಮಠದ ಸೇವೆಗೆ ಮೊದಲ ಆದ್ಯತೆಯನ್ನು ಕಾಣಬಹುದು. ಇವರ ಸೇವೆಗೆ ಪರಿಮಿತಿ ಎಂಬುದೇ ಇಲ್ಲ. ‘ಪೂರ್ಣತೆಯ ಬದುಕಿನೆಡೆಗೆ ಸಾಗಲು ಧರ್ಮ ಮಾರ್ಗವನ್ನು ತೋರಿ ಗುರುಗಳೇ ‘ ಎಂಬ ಪ್ರಾರ್ಥನೆ ಈ ಮೂರೂ ಕುಟುಂಬಗಳದ್ದು. ಮನೆಗಳು […]

Continue Reading

” ಬದುಕಿಗೆ ದೊರಕಿದ ಸೂಕ್ತ ಮಾರ್ಗದರ್ಶನ ಶ್ರೀಗುರುಸೇವೆ ” : ರಾಜರಾಜೇಶ್ವರಿ ಎಸ್ ಭಟ್, ಸುಳ್ಯ

  ” ಹಿರಿಯ ಗುರುಗಳ ಕಾಲದಿಂದಲೇ ನನ್ನ ತವರುಮನೆಯವರು ಗುರು ಭಕ್ತರು, ನನಗೆ ರಾಜರಾಜೇಶ್ವರಿ ಎಂಬ ಹೆಸರಿಡಲು ಸೂಚಿಸಿದವರು ಹಿರಿಯ ಗುರುಗಳು. ಎಳವೆಯಿಂದಲೇ‌ ತವರಿನಲ್ಲಿ ದೊರಕಿದ ಮಾರ್ಗದರ್ಶನದ ಫಲವಾಗಿ ನನಗೆ ಶ್ರೀಗುರು ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು, ಗೋವುಗಳೆಂದರೆ ತುಂಬಾ ಪ್ರೀತಿ, ಪೇಟೆಯಲ್ಲಿ ಹಸುಗಳನ್ನು ಸಾಕುವುದು ಸುಲಭವಲ್ಲ, ಈಗ ಶ್ರೀಗುರುಸೇವೆ ಹಾಗೂ ಗೋಮಾತೆಯ ಸೇವೆ ಮಾಡುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ” ಎಂದು ನುಡಿಯುವವರು ಕಡೆಂಗೋಡ್ಲು ಮೂಲದ ಪ್ರಸ್ತುತ ಮುಳ್ಳೇರಿಯ ಮಂಡಲದ ಸುಳ್ಯ ನಿವಾಸಿಗಳಾಗಿರುವ ಫ್ರೊ. […]

Continue Reading

” ಗೋಮಾತೆಯನ್ನು ಮಾತೆಯಂತೆ ಪ್ರೀತಿಸಬೇಕು ” : ಸರಸ್ವತಿ ಎಸ್. ಭಟ್, ತೆಕ್ಕೆಕರೆ

  ” ನಮ್ಮ ಪೂಜ್ಯ ಶ್ರೀ ಗಳು ಗೋರಕ್ಷಾ ಅಭಿಯಾನ ಆರಂಭಿಸಿದ ಮೇಲೆ ಗೋಮಾತೆಯನ್ನು ಆರ್ಥಿಕ ದೃಷ್ಟಿಯಿಂದ ನೋಡುವವರಲ್ಲಿ ಒಂದಿಷ್ಟು ಬದಲಾವಣೆ ಕಾಣಿಸುತ್ತಿದೆ. ದನ ಎಂದರೆ ಧನ ಎಂಬ ಭಾವನೆಯನ್ನು ಬದಿಗೆ ಸರಿಸಿ ಗೋಮಾತೆ ಎಂದರೆ ಶ್ರೀಮಾತೆ ಎಂಬ ಪೂಜ್ಯ ಭಾವ ಹೊಂದಿದ್ದಾರೆ , ಕೆಲವೇ ವರ್ಷಗಳಲ್ಲಿ ಮರೆಯಾಗಿ ಹೋಗಲಿದ್ದ ಅನೇಕ ಭಾರತೀಯ ಗೋತಳಿಗಳ ಸಂರಕ್ಷಣೆಯ ದೃಷ್ಟಿಯಿಂದ ಶ್ರೀಗುರುಗಳು ಕೈಗೊಂಡ ವ್ಯವಸ್ಥಿತವಾದ ಯೋಜನೆಯು ಇಂದು ಅನೇಕ ಮಂದಿಗೆ ಭಾರತೀಯ ತಳಿಯ ಹಸುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ […]

Continue Reading

” ನಂಬಿ ಕೆಟ್ಟವರಿಲ್ಲವೋ ಶ್ರೀಚರಣಗಳ….” : ಇಂದಿರಾ ಶ್ಯಾನುಬಾಗ್ , ಶಿರಸಿ

  ” ಬದುಕಿನ ಹಾದಿಯಲ್ಲಿ ಕತ್ತಲು ಕವಿದಂತೆ ಅತಿ ಕಠಿಣ ಕಷ್ಟ ಬಂದಾಗಲೂ ಶ್ರೀಚರಣಗಳ ಮೇಲಿನ ಭರವಸೆ ಕಳೆದುಕೊಳ್ಳ ಬೇಡಿ, ವಿಧಿ ಲಿಖಿತವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಶ್ರೀ ಗುರುಚರಣಗಳನ್ನು ಆಶ್ರಯಿಸಿದವರಿಗೆ ಮನಸ್ಸಿನ ಮಾಯೆಯ ಪೊರೆಯನ್ನು ಸರಿಸಿ ,ಭಗವಂತನ ದಿವ್ಯಾನುಗ್ರಹ ಪಡೆಯುವ ಹಾದಿ ತೋರುವ ಸದ್ಗುರುಗಳು ಸಾಂತ್ವನದ ಭರವಸೆಯನ್ನು ಅನುಗ್ರಹಿಸುತ್ತಾರೆ. ಇದು ನಮ್ಮ ಬದುಕಿನ ಅನುಭವದ ನುಡಿಗಳು ” ಎಂದು ಶರಣಾಗತ ಭಾವದಿಂದ ‌ನುಡಿಯುವವರು ಸಿದ್ದಾಪುರ ಮಂಡಲದ ಅಂಬಾಗಿರಿ ವಲಯದ ಲಕ್ಷ್ಮಣ ಶ್ಯಾನುಬಾಗ್ ಅವರ ಪತ್ನಿ […]

Continue Reading

ಗೋಮಾತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಶೈಲಾ ಶ್ರೀಕಾಂತ್ ಹೆಗಡೆ

” ಮೂವತ್ತಮೂರು ಕೋಟಿ ದೇವತೆಗಳ ನಿವಾಸ ಸ್ಥಾನವಾದ ಗೋಮಾತೆಯ ಒಡಲು ಪುಣ್ಯದ ಕಡಲು. ನಮ್ಮ ತಾಯಿಯ ರಕ್ಷಣೆಯನ್ನು ಯಾವ ರೀತಿಯಲ್ಲಿ ಮಾಡುತ್ತೇವೆಯೋ ಅದೇ ರೀತಿಯಲ್ಲಿ ಗೋಮಾತೆಯ ಸಂರಕ್ಷಣೆಯ ಜವಾಬ್ದಾರಿಯನ್ನು ನಾವು ವಹಿಸಬೇಕು, ಆಗಲೇ ಸಮಾಜದಲ್ಲಿ ಗೋಸಂರಕ್ಷಣಾ ಯೋಜನೆಗಳು ಸಫಲವಾಗಬಹುದು. ಇದಕ್ಕಾಗಿ ನಮ್ಮ ಸಂಸ್ಥಾನದವರ ಮಾರ್ಗದರ್ಶನದಂತೆ ಮುಂದೆ ಸಾಗಿದರೆ ಮುಂದೊಂದು ದಿನ ಗೋಮಾತೆ ವಿಶ್ವ ವಂದ್ಯೆಯಾಗಬಹುದು ” ಗೋವು ಹಾಗೂ ತಮ್ಮ ನಡುವಿನ ಭಾವನಾತ್ಮಕ ಸಂಬಂಧದ ಬಗ್ಗೆ ತಿಳಿಸುತ್ತಾ ತಮ್ಮ ಮನದ ಅನಿಸಿಕೆಗಳನ್ನು ಈ ರೀತಿಯಾಗಿ ಬಿಚ್ಚಿಟ್ಟವರು ಬೆಂಗಳೂರು […]

Continue Reading

ದೇಶೀ ಗೋ ಉತ್ಪನ್ನಗಳು ಔಷಧೀಯ ಗುಣಗಳ ಆಗರ : ಡಾ. ಅಮೃತಾ ಪ್ರಸಾದ್

  ಗೋವು ಎಂದರೆ ಮಮತೆಯ ಇನ್ನೊಂದು ರೂಪ,ಗೋಮಾತೆಯ ಹಾಲು ಅದು ಅಮೃತ ಸಮಾನ, ಗೋಮೂತ್ರವೂ ಹಲವು ವ್ಯಾಧಿ ನಿವಾರಕ ಎಂಬುದು ನಮಗೆಲ್ಲ ತಿಳಿದಿದೆ, ಗೋರಕ್ಷಣೆಗಾಗಿ ದೀಕ್ಷಾಬದ್ಧರಾದರೆ ಮಾತ್ರ ದೇಶೀ ಗೋವುಗಳ ರಕ್ಷಣೆ ಸಾಧ್ಯ. ಇದಕ್ಕಾಗಿ ನಮ್ಮ‌ ಶ್ರೀಗಳು ತೋರಿದ ಹಾದಿಯಲ್ಲಿ ಮುಂದುವರಿಯುವ ಅಭಿಲಾಷೆ ನನ್ನದು ,ಹಳ್ಳಿಗಳಂತೆ ನಗರಗಳಲ್ಲಿ ಪ್ರತೀ ಮನೆಯಲ್ಲೂ ಹಸು ಸಾಕಣೆ ಅಸಾಧ್ಯ. ಆದರೂ ಗೋಮಾತೆಯ ಸೇವೆ ಮಾಡಲು ಶ್ರೀ ಸಂಸ್ಥಾನದವರ ಮಾರ್ಗದರ್ಶನದಂತೆ ಮುನ್ನಡೆಯುತ್ತಿದ್ದೇನೆ ” ಶ್ರೀಗುರುಗಳ ತತ್ವಗಳ ಮೇಲೆ ಅಪಾರ ನಂಬಿಕೆಯಿಟ್ಟಿರುವ, ಜೀವನದ ಸುಖದುಃಖಗಳಲ್ಲಿ […]

Continue Reading

” ಗೋಸೇವೆಯಲ್ಲಿ ಸಮರ್ಪಣಾ ಭಾವದ ಸಾರ್ಥಕತೆ ” : ವಸುಂಧರಾ ಶರ್ಮಾ , ಬೆಂಗಳೂರು

  ” ಗೋವುಗಳಿಂದ ಮಾನವನ ಜೀವನಕ್ಕೆ ದೊರಕುವ ಪ್ರಯೋಜನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಬದುಕಿನಲ್ಲಿ ಮಾತೆಯ ನಂತರದ ಸ್ಥಾನ ಗೋಮಾತೆಗೆ ಸಲ್ಲಬೇಕು, ವ್ಯಾವಹಾರಿಕ ದೃಷ್ಟಿಯಿಂದ ಗೋಮಾತೆಯ ಸೇವೆ ಮಾಡಬಾರದು, ಅದರಲ್ಲಿ ಸಮರ್ಪಣಾ ಭಾವ ಮೂಡಬೇಕು, ಆಗಲೇ ಬದುಕಿನಲ್ಲಿ ಸಾರ್ಥಕ ಭಾವನೆ ಮೂಡಲು ಸಾಧ್ಯ ” ಎನ್ನುವವರು ಬೆಂಗಳೂರಿನ ಕೃಷ್ಣರಾಜ ವಲಯದ ವಸುಂಧರಾ ಶರ್ಮ. ಸಿದ್ಧಾಪುರದ ಸಸಿಗುಳಿಯ ಗಣೇಶ ಹೆಗಡೆ, ಸಾವಿತ್ರಿ ಹೆಗಡೆಯವರ ಪುತ್ರಿಯಾದ ಇವರು ಮಾಲೂರು ಗೋಶಾಲೆಯ ನಿರ್ವಹಣಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅರವಿಂದ ಶರ್ಮಾ […]

Continue Reading

ಶ್ರೀಮಠದ ಸಂಪರ್ಕಕ್ಕೆ ಸೇತುವೆಯಾಗಿದ್ದು ಸೋದರ: ಜಯಲಕ್ಷ್ಮಿ ಕುಳಾಯಿ

  ” ಶ್ರೀಮಠದ ಬಗ್ಗೆ, ಶ್ರೀಗುರುಗಳ ಬಗ್ಗೆ ಎಳವೆಯಿಂದಲೇ ಪೂಜ್ಯ ಭಾವನೆಯಿತ್ತು. ಆದರೆ ಶ್ರೀಮಠಕ್ಕೆ ಹೋಗುವ ಅವಕಾಶ ದೊರಕಿದ್ದು ಅಣ್ಣ ಅಂಬಾ ಪ್ರಸಾದ ಪಾತಾಳ ಅವರ ಮೂಲಕ. ಅಲ್ಲಿ ಹೋದ ಮೇಲೆ ಮನಸ್ಸು ಸಂಪೂರ್ಣವಾಗಿ ಶ್ರೀಗುರು ಚರಣಗಳಿಗೆ ಶರಣಾಯಿತು. ಅಂದಿನಿಂದಲೇ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ” ಈ ಮಾತುಗಳು ಉಪ್ಪಿನಂಗಡಿ ಮಂಡಲದ, ಉರುವಾಲು ವಲಯದ ಮೈರ ಶ್ಯಾಮ ಭಟ್ ಅವರ ಪತ್ನಿ ಜಯಲಕ್ಷ್ಮಿ ಕುಳಾಯಿ ಅವರದ್ದು. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಪಾತಾಳ ವೆಂಕಟ್ರಮಣ ಭಟ್ ಹಾಗೂ ಪರಮೇಶ್ವರಿ […]

Continue Reading

ನೊಂದ ಬದುಕಿಗೆ ಭರವಸೆಯ ಚೇತನ ದೊರಕಿದ್ದು ಶ್ರೀ ಗುರು ಸೇವೆಯಿಂದ : ಭಾರತೀ ಕೋಟೆ

” ಬದುಕಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಿ, ನೊಂದ ಬದುಕಿಗೆ ಭರವಸೆಯ ಸಾಂತ್ವನ ನೀಡಿದವರು ಶ್ರಿಗುರುಗಳು.ಜೀವನದ ಕಷ್ಟ ಪರಂಪರೆಯ ಅಂಧಕಾರ ತೊಲಗಿ ಗುರುಕೃಪೆಯೆಂಬ ಜ್ಞಾನ ದೀವಿಗೆಯ ಬೆಳಕಿನಿಂದ ನಮ್ಮ ಬದುಕು ಹಸನಾಗಿದೆ. ಬದುಕು ಸದಾ ಶ್ರೀಗುರು ಸೇವೆ ಹಾಗೂ ಗೋಮಾತೆಯ ಸೇವೆಗಾಗಿ ಮುಡಿಪಾಗಿರಲಿ ಎಂಬುದೇ ನಮ್ಮ ನಿತ್ಯ ಪ್ರಾರ್ಥನೆ ” ಎಂದು ಶ್ರೀಗುರು ಕೃಪಾ ಕಟಾಕ್ಷದ ಬಗ್ಗೆ ಹೃದಯ ತುಂಬಿ ನುಡಿಯುವವರು ಉಪ್ಪಿನಂಗಡಿ ಮಂಡಲದ, ಪಂಜ ವಲಯದ ಚರಣ ಸನ್ನಿಧಿ ಮನೆಯ ಭಾರತೀ ಕೋಟೆ ಅವರು. ಎರಡು […]

Continue Reading