” ಗೋಮಾತೆ ಮಾತೃಶಕ್ತಿಯ ಸ್ವರೂಪ ” : ವಿನಯಾ ಶ್ರೀಧರ ಹೆಗಡೆ , ಗುಡೇ ಅಂಗಡಿ

  ” ಹಸುವನ್ನು ತಾಯಿಯಂತೆ ಕಾಣುವ ಸಂಸ್ಕೃತಿ ನಮ್ಮದು. ನಾವು ಸಾಕುವ ಹಸುಗಳಿಗೂ ತಾಯಿಯದೇ ಅಂತಃಕರಣವಿದೆ. ಮನೆಯ ಸದಸ್ಯರ ಬಗ್ಗೆ ಗೋಮಾತೆಗೂ ತುಂಬಾ ಕಾಳಜಿಯಿದೆ. ಮನೆಯವರ ಅನಾರೋಗ್ಯದ ಸಂದರ್ಭದಲ್ಲಿ ಹಟ್ಟಿಯಲ್ಲಿರುವ ಹಸುಗಳೂ ಮನದಲ್ಲೇ ರೋಧಿಸುವುದು ಅವುಗಳ ಒಡನಾಟದಲ್ಲಿರುವವರಿಗೆ ಬೇಗನೆ ತಿಳಿಯಬಹುದು. ದೇಶೀಯ ತಳಿಯ ಹಸುಗಳು ಇದಕ್ಕೆ ನಿದರ್ಶನಗಳು. ಅದಕ್ಕಾಗಿಯೇ ಗೋಮಾತೆ ಎಂದರೆ ಮಾತೃಶಕ್ತಿಯ ಸ್ವರೂಪ ಎಂಬ ಭಾವನೆ ನನ್ನದು ” ಎಂದವರು ಕುಮಟಾ ಮಂಡಲ ಗುಡೇಅಂಗಡಿ ವಲಯದ ವಿನಯಾ ಶ್ರೀಧರ ಹೆಗಡೆ. ಶಿರಸಿ ಕಾನಮಕ್ಕಿಯ ಅನಂತ ಹೆಗಡೆ […]

Continue Reading

” ಗೋಸೇವೆಯಲ್ಲಿ ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಬೇಕು ” : ಹೇಮಾ ಶ್ರೀನಿವಾಸ ಮೂರ್ತಿ ಹೊನ್ನೇಸರ

    ” ನಮ್ಮ ಜೀವನದಲ್ಲಿ ಗೋಮಾತೆಯ ಸ್ಥಾನ ಹಿರಿದು. ಭಾರತೀಯ ತಳಿಯ ಹಸುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಜಗತ್ತಿನ ಭವ್ಯ ಭವಿಷ್ಯಕ್ಕಾಗಿ ದೇಶೀಯ ತಳಿಗಳನ್ನು ಉಳಿಸಿಕೊಳ್ಳಲೇಬೇಕು. ಗೋ ಸಂರಕ್ಷಣೆಯ ಪಾಠ ಮಕ್ಕಳಿಗೆ ಮನೆಯಿಂದಲೇ ದೊರಕಬೇಕು. ಈ ವಿಚಾರದಲ್ಲಿ ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಬೇಕು ” ಎಂದವರು ಬೆಂಗಳೂರು ದಕ್ಷಿಣ ಮಂಡಲ ಅನ್ನಪೂರ್ಣೇಶ್ವರಿ ವಲಯದ ಶ್ರೀನಿವಾಸ ಮೂರ್ತಿ ಹೊನ್ನೇಸರ ಅವರ ಪತ್ನಿ ಹೇಮಾ ಶ್ರೀನಿವಾಸ್.   ಸಾಗರ ತಾಲೂಕಿನ ಹುಲಿಸರ ಕೃಷ್ಣಯ್ಯ ,ಲಕ್ಷ್ಮಮ್ಮ ದಂಪತಿಗಳ ಪುತ್ರಿಯಾದ ಇವರು […]

Continue Reading

” ಇನ್ನಷ್ಟು ಗೋಸೇವೆ ಮಾಡುವ ಹಂಬಲ ” : ಅರುಣಾಕುಮಾರಿ ಕುಕ್ಕೆಮನೆ

    ” ನಮ್ಮ ಮಠದ ಮಹತ್ವದ ಯೋಜನೆಯಾದ ಮಾತೃತ್ವಮ್ ನ ಮೂಲಕ ಗೋಸೇವೆ ಮಾಡಲು ಆನಂದವೆನಿಸುತ್ತಿದೆ.‌ ಚಲಿಸುವ ದೇವಾಲಯವೇ ಆಗಿರುವ ಗೋಮಾತೆಯ ವಿವಿಧ ತಳಿಗಳ ಬಗ್ಗೆ ಜನ‌ಸಾಮಾನ್ಯರಿಗೂ ಅರಿವು ಮೂಡಿಸಿ ,ಅವರಿಂದಲೂ ಗೋಸೇವೆಯ ಮಹಾಕಾರ್ಯಕ್ಕೆ ಸಹಕಾರ ಪಡೆದು ಕೋಟಿ ಪುಣ್ಯ ಗಳಿಸುವ ಈ ಮಹತ್ಕಾರ್ಯದಲ್ಲಿ ಭಾಗಿಯಾಗುವುದು ಕೂಡ ಪುಣ್ಯ ಎಂಬ ಅನಿಸಿಕೆ ನನ್ನದು ” ಎಂದವರು ಮೂಲತಃ ದಕ್ಷಿಣ ಕನ್ನಡ ಮೂಲದ ಕುಕ್ಕೆಮನೆಯ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ , ಯಲಹಂಕ ವಲಯ ನಿವಾಸಿಗಳಾಗಿರುವ ಸುಬ್ರಹ್ಮಣ್ಯ […]

Continue Reading

ಶುಭಪಥದ ನಿರೀಕ್ಷೆಯಲ್ಲಿರುವ ಮಾಸದ ಮಾತೆ : ಲಕ್ಷ್ಮಿ ಅಮ್ಮ ಕನ್ಯಾನ

  ” ಬಾನ್ಕುಳಿಯ ಗೋಸ್ವರ್ಗಕ್ಕೆ ಹೋಗಬೇಕೆಂದು ಅನೇಕ ಬಾರಿ ಬಯಸಿದ್ದೆ. ಆ ಕನಸು ಈಡೇರಿತು. ಅಲ್ಲಿಗೆ ಹೋದಾಗ ಅಲ್ಲಿರುವ ಹಸುಗಳನ್ನು ಕಂಡು ಮನಸ್ಸಿಗೆ ತುಂಬ ಆನಂದವಾಯಿತು. ಇಷ್ಟು ಹಸುಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವುದು ಸುಲಭವಲ್ಲ ಎಂದೆನಿಸಿತು. ನನ್ನಿಂದ ಸಾಧ್ಯವಾದಷ್ಟು ಗೋಮಾತೆಯ ಸೇವೆ ಮಾಡೋಣ ಎಂದು ತೀರ್ಮಾನಿಸಿ ಮಾತೃತ್ವಮ್ ಮೂಲಕ ಮಾಸದ ಮಾತೆಯಾದೆ. ಆಗ ಮಗ ಮುಂಬೈಯಲ್ಲಿದ್ದ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿತ್ತು. ಒಂದಿಬ್ಬರು ಸಣ್ಣ ಪ್ರಮಾಣದ ಸಹಕಾರ ನೀಡಿರುವುದು ಬಿಟ್ಟರೆ ಉಳಿದಂತೆ ಒಂದು ಹಸುವಿನ ಸಂಪೂರ್ಣ ನಿರ್ವಹಣಾ ವೆಚ್ಚವನ್ನು […]

Continue Reading

” ಶ್ರೀಮಠದ ಸೇವೆಯಲ್ಲಿ ದೊರಕುವ ಆನಂದ ವರ್ಣನೆಗೆ ಸಿಗದು ” : ಅದಿತಿ ಬಿ.ಎಸ್.ಭಟ್

  ” ಹಿರಿಯ ಗುರುಗಳ ಕಾಲದಿಂದಲೂ ಶ್ರೀಮಠದ ಸಂಪರ್ಕವಿದೆ. ಇತ್ತೀಚಿನ ಎರಡು ದಶಕಗಳಿಂದ ಶ್ರೀಮಠದ ಸೇವೆಗೆ ಮತ್ತಷ್ಟು ಅವಕಾಶಗಳು ದೊರಕಿದವು. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಾಗ ದೊರಕುವ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ. ಅದನ್ನು ಅನುಭವಿಸಿದವರಷ್ಟೇ ತಿಳಿಯಬಲ್ಲರು ” ಎಂದು ನುಡಿದವರು ಪುತ್ತೂರು ಸಮೀಪ ಬಡೆಕ್ಕಿಲ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಶ್ರೀಗಿರಿನಗರ ವಲಯ ನಿವಾಸಿಗಳಾಗಿರುವ ಡಾ. ಬಿ.ಎಸ್. ಭಟ್ ಅವರ ಪತ್ನಿ ಅದಿತಿ ಭಟ್.   ಕನ್ಯಾನ ಕಮ್ಮಜೆಯ ಗಣಪತಿ ಭಟ್ ಪಾರ್ವತಿ ದಂಪತಿಗಳ ಪುತ್ರಿಯಾದ ಇವರು […]

Continue Reading

” ಗೋವಿನ ಬದುಕು ತ್ಯಾಗದ ಸಂಕೇತ ” : ವಿಜಯಲಕ್ಷ್ಮಿ ಪಿ. ಭಟ್, ಗುರಿಂಗಾನ

  ” ತನ್ನ ಜೀವನವನ್ನು ಮಾನವರ ಒಳಿತಿಗಾಗಿ ಮುಡಿಪಾಗಿರಿಸಿದ ಗೋಮಾತೆಯ ಬದುಕು ತ್ಯಾಗದ ಸಂಕೇತ. ಗೋವಿಲ್ಲದಿದ್ದರೆ ನಮ್ಮ ಜೀವನ ಅಪೂರ್ಣ. ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ಕೊಡುವ ಗೌರವ ಅನುಪಮ. ಗೋಗ್ರಾಸ ನೀಡದೆ ಯಾವುದೇ ಶುಭಕಾರ್ಯವೂ ಸಂಪನ್ನವಾಗುವುದಿಲ್ಲ ” ಈ ನುಡಿಗಳು ಉಪ್ಪಿನಂಗಡಿ ಮಂಡಲ ಉಜಿರೆ ವಲಯದ ಗುರಿಂಗಾನ ಮನೆಯ ಪರಮೇಶ್ವರ ಭಟ್ಟರ ಪತ್ನಿ ವಿಜಯಲಕ್ಷ್ಮಿ ಅವರದ್ದು. ಮೂಲತಃ ಕನ್ಯಾನದವರಾದ ಪ್ರಸ್ತುತ ಚಾರ್ಮಾಡಿ ನಿವಾಸಿಗಳಾಗಿರುವ ನಾರಾಯಣ ಭಟ್, ದ್ರೌಪದಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ಒಂದು ವರ್ಷದ ಗುರಿ […]

Continue Reading

” ನಗರನಿವಾಸಿಯಾದರೂ ಗೋಸೇವೆಯ ಸದವಕಾಶ ದೊರಕಿದ್ದು ಮಾತೃತ್ವಮ್ ಯೋಜನೆಯಿಂದ ” : ರೂಪಾ ಹೆಗಡೆ , ಬೆಂಗಳೂರು

  ” ದೇಶೀ ತಳಿಯ ಗೋವುಗಳ ರಕ್ಷಣೆಗಾಗಿ ನಮ್ಮ ಶ್ರೀಗಳು ಹಾಕಿರುವ ಕಾರ್ಯಯೋಜನೆಗಳು ನಿಜಕ್ಕೂ ಅದ್ಭುತ. ಗೋ ಜಾಗೃತಿಗಾಗಿ ಗೋಯಾತ್ರೆ, ವಿಶ್ವ ಗೋ ಸಮ್ಮೇಳನ , ವಿಶ್ವ ಮಂಗಲ ಗೋಗ್ರಾಮ ಯಾತ್ರೆ……ಈ ರೀತಿಯ ಅನೇಕ ಅಭಿಯಾನಗಳಿಂದ ಸಮಾಜ ಎಚ್ಚರಗೊಳ್ಳುತ್ತಿದೆ. ದೇಶೀಯ ಗೋವಿನ ಉಪಯುಕ್ತತೆಯ ಬಗ್ಗೆ, ಗವ್ಯೋತ್ಪನ್ನಗಳ ಬಳಕೆಯ ಬಗ್ಗೆ ಜನರಿಗೆ ಆಸಕ್ತಿ ಮೂಡಲಾರಂಭಿಸಿದೆ. ಗೋವುಗಳ ಮೇಲೆ ಪ್ರೀತಿಯಿದ್ದರೂ ಅನಿವಾರ್ಯ ಕಾರಣಗಳಿಂದಾಗಿ ಗೋಸಾಕಣೆ ಅಸಾಧ್ಯವಾದ ಅನೇಕ ಮಂದಿಗೆ ಗೋಸೇವೆಗೆ ಅವಕಾಶ ಒದಗಿದ್ದು ಶ್ರೀಗುರುಗಳ ಮಹತ್ವಪೂರ್ಣ ಯೋಜನೆಯಾದ ಮಾತೃತ್ವಮ್ ಮೂಲಕ […]

Continue Reading

” ಶ್ರೀಗುರು ಕರುಣಾಮೃತದ ಸವಿ ಅಪಾರ ” : ಶುಭಲಕ್ಷ್ಮಿ ಮುಂಡಾಜೆ

  ” ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಗೋಮಾತೆಯ ಸೇವೆ ಆರಂಭಿಸುವಾಗ ಗುರಿ ತಲುಪಲು ಸಾಧ್ಯವೇ ‘ ಎಂಬ ಅಳುಕು ಮನದಲ್ಲಿತ್ತು. ಶ್ರೀಗುರುಗಳಿಂದ ಮಂತ್ರಾಕ್ಷತೆ ಪಡೆದ ಮೇಲೆ ಬಹು ಬೇಗನೆ ಗುರಿ ಮುಟ್ಟಿದೆ. ಶ್ರೀಗುರು ಕರುಣೆಯ ಬಗ್ಗೆ ಇದಕ್ಕಿಂತ ಹೆಚ್ಚು ಹೇಳಲು ಇನ್ನೇನಿದೆ ?” ಎಂದವರು ಮುಂಡಾಜೆ ಮೂಲದ ಪ್ರಸ್ತುತ ಉಪ್ಪಿನಂಗಡಿ ಮಂಡಲ ,ಮಾಣಿ ವಲಯದ ಕೆದಿಲ ನಿವಾಸಿಗಳಾಗಿರುವ ನರಸಿಂಹರಾಜ್ ಅವರ ಪತ್ನಿ ಶುಭಲಕ್ಷ್ಮಿ. ಸಾಮೆತ್ತಡ್ಕ ಸತ್ಯನಾರಾಯಣ ಭಟ್, ಸರ್ವಮಂಗಳಾ ದಂಪತಿಗಳ ಪುತ್ರಿಯಾದ ಇವರು ಎರಡು […]

Continue Reading

” ಗೋಸೇವೆಯಲ್ಲಿ ಭಾಗಿಯಾಗುವುದು ಬಾಳಿನ ಭಾಗ್ಯ ” : ಸುಜಲಾ ಭಟ್ ಬೆಂಗಳೂರು

  ” ಮುಕ್ಕೋಟಿ ದೇವರುಗಳ ಆವಾಸಸ್ಥಾನವಾದ ಗೋಮಾತೆ ನಮಗೆ ಪರಮಪೂಜ್ಯಳು. ನೂತನ ಗೃಹಪ್ರವೇಶದ ಸಂದರ್ಭದಲ್ಲಿ ಗೋಮಾತೆಯನ್ನೂ ಮನೆಯೊಳಗೆ ಕರೆತಂದು ಪೂಜಿಸುವ ಸಂಸ್ಕೃತಿ ನಮ್ಮದು. ಇಂದು ಪೇಟೆ ಜೀವನದ ಧಾವಂತದ ನಡುವೆ ಮನೆಗಳಲ್ಲಿ ಗೋವನ್ನು ಸಾಕುವುದು ಕಷ್ಟಕರ. ಆದರೆ ಶ್ರೀಗುರುಗಳ ಮಾತೃತ್ವಮ್ ಯೋಜನೆಯ ಮೂಲಕ ಗೋಮಾತೆಯ ಸೇವೆ ಮಾಡುವ ಅವಕಾಶ ಒದಗಿ ಬಂದಿರುವುದು ಬಾಳಿನ ಭಾಗ್ಯ ಎಂದು ಭಾವಿಸುತ್ತೇನೆ ” ಎಂದವರು ಮೂಲತಃ ಕಾಸರಗೋಡಿನ ದೊಡ್ಡಮಾಣಿಯವರಾದ , ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಅನ್ನಪೂರ್ಣೇಶ್ವರಿ ವಲಯ ನಿವಾಸಿಗಳಾಗಿರುವ ಮಹಾಲಿಂಗ […]

Continue Reading

” ಗೋವು ಎಂಬುದೇ ಮಧುರ ಭಾವ ” : ಸುನಂದಾ ಮಂಗಳೂರು

  ” ನಮ್ಮ ಸಂಸ್ಕೃತಿಯಲ್ಲಿ ಮಾತೆಯ ಸ್ಥಾನದಲ್ಲಿ ಗುರುತಿಸಲ್ಪಡುವುದು ಗೋವು ಮಾತ್ರ. ನಮ್ಮ ಗುರುಗಳ ಗೋ ಪರ ಆಂದೋಲನಗಳು ನಮ್ಮ ಗೋಸೇವೆಗೆ ಸ್ಪೂರ್ತಿ ನೀಡಿದೆ. ಗೋವಿನ ಧಾರ್ಮಿಕ ಮಹತ್ವ, ಗೋಜನ್ಯ ಉತ್ಪನ್ನಗಳ ಔಷಧೀಯ ಗುಣಗಳನ್ನು ಸಮಾಜದ ಮೂಲೆ ಮೂಲೆಗೂ ತಲುಪಿಸುವ ಹೊಣೆ ನಮ್ಮಂತಹ ಮಾತೆಯರ ಮೇಲಿದೆ.‌ ಶ್ರೀಗುರುಗಳ ಅನುಗ್ರಹದಿಂದ ಈ ನಿಟ್ಟಿನಲ್ಲಿ ಕಿಂಚಿತ್ ಸೇವೆ ಮಾಡಲು ಸಾಧ್ಯವಾಗುತ್ತಿದೆ ಎಂಬುದೇ ಸಂತಸದ ವಿಚಾರ ” ಎಂದು ನುಡಿದವರು ಮೂಲತಃ ಪೈಲೂರಿನವರಾದ ಪ್ರಸ್ತುತ ಮಂಗಳೂರು ಮಂಡಲ ಮಧ್ಯ ವಲಯ ನಿವಾಸಿಗಳಾಗಿರುವ […]

Continue Reading

” ಬಾಗಿನ ಸ್ವೀಕಾರ ಎಂದರೆ ಬಾಳಿನ ಸೌಭಾಗ್ಯ ” : ಶೋಭಾ ಆರ್. ಭಟ್ಟ ಮಣ್ಣಿಗೆ

  ” ಕೆಲವು ವರ್ಷಗಳ ಹಿಂದೆ ಶ್ರೀ ಸಂಸ್ಥಾನದವರು ನಮ್ಮೂರಿನ ಆಸುಪಾಸಿಗೆ ಬಂದರೆ ಸಾಧ್ಯವಾದಾಗಲೆಲ್ಲ ನಮ್ಮ ಮನೆಯ ಮಲೆನಾಡು ಗಿಡ್ಡ ತಳಿಯ ಹಸುವಿನ ಹಾಲನ್ನು ಕೊಂಡೊಯ್ದು , ಶ್ರೀ ಕರಾರ್ಚಿತ ದೇವರುಗಳ ಪೂಜೆಯನ್ನು ಮನಸ್ಸು ಹೃದಯ ತುಂಬುವಷ್ಟು ಶ್ರದ್ಧೆಯಿಂದ ನೋಡಿ ಬರುತ್ತಿದ್ದೆ. ನಂತರ ಶ್ರೀಮಠದ ಒಂದೊಂದೇ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಶ್ರೀಗುರುಕೃಪೆಯಿಂದ ಒದಗಿಬಂತು. ಶರಾವತಿ ಎಡದಂಡೆಯಲ್ಲಿ ಮುಷ್ಟಿ ಭಿಕ್ಷಾ ಸಹಾಯಕಿಯಾದೆ. ಮುಂದೆ ವಲಯ ಮಾತೃಪ್ರಧಾನೆಯಾದೆ. ಇದೀಗ ಮಂಡಲ ಬಿಂದು ಸಿಂಧು ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇದೆಲ್ಲವೂ […]

Continue Reading

ಗೋಸಂರಕ್ಷಣೆ ಮನುಕುಲದ ಅಸ್ತಿತ್ವಕ್ಕೆ ಅತೀ ಅಗತ್ಯ : ಮಂಗಳಾ ಶ್ರೀಧರ ಜೋಶಿ

    ” ಗೋವು ಭಾರತೀಯರ ಜೀವನಾಡಿ. ಗೋವಿಲ್ಲದೆ ನಾವಿಲ್ಲ. ಗೋ ಸಂರಕ್ಷಣೆ ನಮ್ಮ ಬದುಕಿಗೆ, ಅಸ್ತಿತ್ವಕ್ಕೆ ಅತೀ ಅಗತ್ಯ ಎಂಬುದನ್ನು ತಿಳಿಸುವುದಕ್ಕಾಗಿಯೇ ನಮ್ಮ ಗುರುಗಳು ದೇಶೀಯ ಹಸುಗಳ ಸಂರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ. ಶ್ರೀಗುರುಗಳ ಅನುಗ್ರಹದಿಂದ ಅದರಲ್ಲೊಂದು ಸೇವಾಬಿಂದುವಾಗಿ ನಮ್ಮ ಕೈಲಾದಷ್ಟು ಸೇವೆ ಸಲ್ಲಿಸುವ ಸದವಕಾಶ ಒದಗಿ ಬಂದಿದ್ದು ಪೂರ್ವ ಜನ್ಮದ ಸುಕೃತದಿಂದ ” ಎಂದವರು ಹೊನ್ನಾವರ ಕಾಸರಕೋಡು ಮೂಲದ ಪ್ರಸ್ತುತ ಮಂಗಳೂರು ದಕ್ಷಿಣ ಮಂಡಲ ನಿವಾಸಿಗಳಾಗಿರುವ ಶ್ರೀಧರ ಜೋಶಿ ಅವರ ಪತ್ನಿ ಮಂಗಳಾ.   […]

Continue Reading

” ಗೋಸೇವಾ ಮನೋಭಾವವಿದ್ದರೆ ಗುರಿ ತಲುಪುವ ಹಾದಿ ಶ್ರೀಗುರುಗಳು ತೋರುತ್ತಾರೆ ” : ಸ್ವಪ್ನಲಕ್ಷ್ಮಿ .ಕೆ

  ” ಶ್ರೀಮಠದ ಸೇವೆಯಲ್ಲಿ ತುಂಬಾ ಆಸಕ್ತಿಯಿದ್ದರೂ ನನ್ನ ದೈನಂದಿನ ಜೀವನದ ಜವಾಬ್ದಾರಿಗಳ ನಡುವೆ ಮಾಸದ ಮಾತೆಯಾಗಿ ಗುರಿ ಸೇರಲು ಸಾಧ್ಯವೇ ಎಂಬ ಆತಂಕದಿಂದ ಆರಂಭದಲ್ಲಿ ಮಾಸದ ಮಾತೆಯಾಗಲು ತುಸು ಅಳುಕಿದೆ. ಮುಂದೆ ಶ್ರೀಗುರುಗಳೇ ” ಮಾಸದ ಮಾತೆಯಾಗು ” ಎಂದು ಹರಸಿದಾಗ ನನ್ನ ತುಮುಲವನ್ನು ಭಿನ್ನವಿಸಿದೆ.‌ ” ನಿನಗೆ ಶೀಘ್ರವಾಗಿ ಗುರಿ ಮುಟ್ಟಲು ಸಾಧ್ಯವಿದೆ ” ಎಂಬ ಶ್ರೀಗುರುಗಳ ಅನುಗ್ರಹ ಬಹಳ ಬೇಗನೆ ಫಲಿಸಿತು. ಅಪ್ಪ, ಅಮ್ಮ, ತಂಗಿ ಹಾಗೂ ಮನೆಯವರ ಸಹಕಾರದಿಂದ ಬಹಳ ಬೇಗನೆ […]

Continue Reading

” ದೇಶೀಯ ತಳಿಯ ಹಸುಗಳು ದೈವಸ್ವರೂಪಿಗಳು ” : ಶಾರದಾ ರಾಮಚಂದ್ರ ಭಟ್, ಆನೆಕಾರ್

  ” ನಮ್ಮ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶಿಷ್ಟ ಸ್ಥಾನವಿದೆ. ಗೋಗ್ರಾಸ, ಗೋದಾನಗಳು ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಒಳಗೊಂಡವುಗಳು. ಹಟ್ಟಿ ತುಂಬ ಹಸುಗಳಿದ್ದ ಕಾಲವೊಂದಿತ್ತು. ಗೋ ಆಧಾರಿತ ಕೃಷಿಯಿಂದ ಜೀವನ ಸಾಗಿಸುತ್ತಿದ್ದವರಿಗೂ ಕಾಲ ಬದಲಾದಂತೆ ಜೀವನ ಕ್ರಮವನ್ನು ಬದಲಾಯಿಸಬೇಕಾದ ಅನಿವಾರ್ಯತೆ ಉಂಟಾಯಿತು. ‌ನಮ್ಮ ಹಟ್ಟಿಯ ಹಸುಗಳನ್ನು ಇನ್ನೊಬ್ಬರಿಗೆ ಕೊಡುವಾಗ ಉಂಟಾಗುವ ಸಂಕಟ ಅಸಹನೀಯ. ಆದರೆ ಈಗ ಹಿಂದಿನಂತೆ ಹಟ್ಟಿ ತುಂಬ ಹಸುಗಳನ್ನು ಸಾಕುವುದು ಸುಲಭವಲ್ಲ ” ಎಂದು ಗೋವುಗಳ ಬಗ್ಗೆ ಮನತುಂಬಿ ನುಡಿದವರು ಉಪ್ಪಿನಂಗಡಿ ಮಂಡಲ ಚೊಕ್ಕಾಡಿ ವಲಯದ […]

Continue Reading

” ಗೋಮಾತೆಗಾಗಿ ಸಮಾಜ ಒಗ್ಗೂಡಲು ಕಾರಣ ಶ್ರೀಗುರುಗಳು ” : ಪೂರ್ಣಿಮಾ ಈಶ್ವರ ಭಟ್, ಮಂಗಳೂರು

  ” ಸಮಾಜದ ಒಳಿತಿಗಾಗಿ ಶ್ರೀಗುರುಗಳು ಕೈಗೊಂಡಿರುವ ಅನೇಕ ಯೋಜನೆಗಳಲ್ಲಿ ಅತ್ಯಂತ ಸರಳ,ಸುಲಭವಾಗಿರುವ ಯೋಜನೆ ಮಾತೃತ್ವಮ್. ಶ್ರೀಗುರುಗಳ ಅನುಗ್ರಹವಿದ್ದರೆ ಇದರಲ್ಲಿ ಗುರಿ ತಲುಪುವುದು ಕಷ್ಟಕರವಲ್ಲ. ಇಂದು ಗೋಮಾತೆಯ ಸೇವೆಗಾಗಿ ಸಮಾಜ ಒಂದಾಗುತ್ತಿದೆ ಎನ್ನಲು ಹರ್ಷವಾಗುತ್ತಿದೆ ” ಎಂದವರು ಮಂಗಳೂರು ಮಂಡಲ ಮಧ್ಯ ವಲಯದ ಕಿಳಿಂಗಾರು ಈಶ್ವರ ಭಟ್ ಅವರ ಪತ್ನಿ ಪೂರ್ಣಿಮಾ .   ಗೃಹಿಣಿಯಾಗಿರುವ ಇವರು ಗಂಗರಮಜಲು ಈಶ್ವರ ಭಟ್ , ಶಾರದಾ ದಂಪತಿಗಳ ಪುತ್ರಿ.‌   ” ಲಕ್ಷ್ಮೀ ಪ್ರಕಾಶ್ ಹಾಗೂ ಸುಮಾ ರಮೇಶ್ […]

Continue Reading

ಗೋಸೇವೆಯೇ ನಮ್ಮ ಜೀವನ : ಆಶಾಕಿರಣ ಆರ್. ಹೆಮ್ಮಣ್ಣ

  Hem’s ಸಂಸ್ಥೆಯ ಮೂಲಕ ಸಮಾಜಕ್ಕೆ ಪರಿಚಿತರಾಗಿರುವ ಆಶಾಕಿರಣ ಆರ್ ಹೆಮ್ಮಣ್ಣ ಅವರು ಎಳವೆಯಿಂದಲೇ ಶ್ರೀಮಠದ ಸಂಪರ್ಕಕ್ಕೆ ಬಂದವರು. ಶ್ರೀರಾಮಚಂದ್ರಾಪುರ ಮಂಡಲದ ಗನವಳ್ಳಿಯ ವಾಮದೇವಯ್ಯ ಹಾಗೂ ಲೀಲಾವತಿ ದಂಪತಿಗಳ ಪುತ್ರಿಯಾದ ಆಶಾಕಿರಣ ಪ್ರಸ್ತುತ ಮಂಗಳೂರು ಮಂಡಲ ಕುಂದಾಪುರ ವಲಯದ ನಿವಾಸಿಯಾಗಿದ್ದಾರೆ. ‘ ಸುರಭಿ ಸಾರ’ ದ ತಯಾರಕ ಸಂಸ್ಥೆಯಾದ ಹೆಮ್ಸ್ ಉದ್ಯಮವನ್ನು ನಡೆಸುತ್ತಿರುವ ರಾಘವೇಂದ್ರ ಹೆಮ್ಮಣ್ಣ ಅವರ ಪತ್ನಿಯಾದ ಇವರು ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆ. ” ಬಾಲ್ಯದಲ್ಲೇ ಶ್ರೀಮಠಕ್ಕೆ ಬರುತ್ತಿದ್ದೆ.‌ಮದುವೆಯ ನಂತರ ಮತ್ತಷ್ಟು […]

Continue Reading

ಗೋಸೇವೆಗೆ ಪ್ರೇರಣೆ ಮಹಾನಂದಿ : ಶೈಲಾ ರಾಮಚಂದ್ರ ಭಟ್ ,ಪದ್ಯಾಣ

  ” ಬಾಲ್ಯದಲ್ಲೇ ಗೋವುಗಳ ಮೇಲೆ ತುಂಬಾ ಪ್ರೀತಿ ನನಗೆ. ೯೯ ರಿಂದ ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಇದು ಮತ್ತಷ್ಟು ಹೆಚ್ಚಾಯಿತು. ಹೊಸನಗರದ ಗೋಶಾಲೆಗಾಗಿ ವೈವಿಧ್ಯಮಯ ತಳಿಗಳ ಅನ್ವೇಷಣೆಗಾಗಿ ಅನೇಕ ಊರುಗಳಿಗೆ ತೆರಳಿದ‌ ಅನುಭವವಿದೆ. ಸಂತೆಗಳಲ್ಲಿ ಹಸುಗಳನ್ನು ಮಾರಾಟಕ್ಕಾಗಿ ಕಟ್ಟಿ ಹಾಕುವುದನ್ನು ಕಂಡಾಗ ಮನಸ್ಸು ಕರಗಿ ಕಣ್ಣೀರು ಸುರಿಸಿದ್ದೂ ಇದೆ. ನನ್ನ ಇಷ್ಟದ ಗೋವು ಮಹಾನಂದಿ. ಅವನನ್ನು ನಾನು ‘ ದೊಡ್ಡಣ್ಣ’ ಎಂದೇ ಕರೆಯುತ್ತಿದ್ದೆ. ಅವನೇ ನನ್ನ ಗೋಸೇವೆಗೆ ಪ್ರೇರಣೆ ” ಎಂದವರು ಮಂಗಳೂರು ಮಂಡಲ […]

Continue Reading

” ಶ್ರೀಮಠದ ಸೇವೆಯೆಂದರೆ ಮಕ್ಕಳಿಗೂ ಪ್ರೀತಿ ” : ಪವಿತ್ರಾ ವಿ. ಹೆಬ್ಬಾರ್.

  ” ಬಾಲ್ಯದಿಂದಲೇ ಶ್ರೀಮಠದ ಸಂಪರ್ಕವಿತ್ತು. ಶ್ರೀ ಗುರುಗಳು ಪೀಠಾರೋಹಣದ ನಂತರ ಮೊದಲ ಬಾರಿಗೆ ನಮ್ಮೂರಿಗೆ ಬಂದಾಗ ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ಶ್ರೀಗುರುಗಳ ಆಗಮನದ ಸಂದರ್ಭದಲ್ಲಿ ಕಲಶ ಹಿಡಿಯಲು ಹೋಗಿದ್ದೆ. ಆ ನೆನಪು ಈಗಲೂ ಮನದಲ್ಲಿ ಹಸಿರಾಗಿದೆ. ಈಗ ನನ್ನ ಮಕ್ಕಳಿಗೂ ಶ್ರೀಮಠ, ಶ್ರೀಗುರುಗಳು ಎಂದರೆ ತುಂಬಾ ಶ್ರದ್ಧೆ, ಭಕ್ತಿ ” ಈ ಮಾತುಗಳು ಕುಮಟಾ ಮಂಡಲ,ಕುಮಟಾ ವಲಯದ ವಿಶ್ವೇಶ್ವರ ಬಿ. ಹೆಬ್ಬಾರ್ ಅವರ ಪತ್ನಿ ಪವಿತ್ರಾ ವಿ. ಹೆಬ್ಬಾರ್ ಅವರದ್ದು. ಹೊನ್ನಾವರ ಗೇರುಸೊಪ್ಪಾದ ಸುಬ್ರಾಯ […]

Continue Reading

” ಮನದ ಭಾವನೆಗಳನ್ನು ಅರಿತು ಅನುಗ್ರಹಿಸುವವರು ಶ್ರೀಗುರುಗಳು ” : ಲಲಿತಾ ವಿ. ಹೆಗಡೆ

  ” ಬದುಕಿನ ಪ್ರತೀ ಹೆಜ್ಜೆಯಲ್ಲಿಯೂ ಶ್ರೀಗುರು ಕಾರುಣ್ಯದ ಅನುಭವವನ್ನು ಪಡೆದವರು ನಾವು. ಜೀವನದ ಏರುಪೇರುಗಳಲ್ಲಿ ಕಂಗೆಟ್ಟು ಕುಸಿದು ಹೋಗುವಾಗಲೂ ಭರವಸೆಯ ದೀವಿಗೆಯಾಗಿ ಬಾಳಿಗೆ ಬೆಳಕು ತೋರಿದವರು ನಮ್ಮ ಗುರುಗಳು. ಜೀವನದ ಕೊನೆ ತನಕವೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರಕಬೇಕೆಂಬುದೇ ನನ್ನ‌ ನಿತ್ಯ ಪ್ರಾರ್ಥನೆ ” ಎಂಬ ಭಾವಪೂರ್ಣ ನುಡಿಗಳು ಕುಮಟಾ ಮಂಡಲ , ಗುಡೇಅಂಗಡಿ ವಲಯದ ವಿಶ್ವನಾಥ ಹೆಗಡೆಯವರ ಪತ್ನಿ ಲಲಿತಾ ವಿ.ಹೆಗಡೆ ಅವರದ್ದು.   ಕಲ್ಲಬ್ಬೆಯ ಸತ್ಯನಾರಾಯಣ ಹೆಗಡೆ,ಕಮಲ ದಂಪತಿಗಳ ಪುತ್ರಿಯಾದ ಇವರು […]

Continue Reading

” ನಿರಂತರ ಶ್ರೀಗುರು ಸ್ಮರಣೆಯಿಂದ ಕಷ್ಟಗಳು ದೂರ ” : ಛಾಯಾಮೂರ್ತಿ ಹೊಸನಗರ

” ಬಾಲ್ಯದಿಂದಲೇ ಹಸುಗಳ ಮೇಲೆ ತುಂಬ ಮಮತೆ. ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದೆವು. ಜೊತೆಗೆ ಮೊದಲಿನಿಂದಲೂ ಶ್ರೀಮಠದ ಸೇವೆಯಲ್ಲಿ ಆಸಕ್ತಿ ಹೊಂದಿದವರು ನಾವು.ಹಾಗಾಗಿಯೇ ಶ್ರೀಗುರುಗಳ ನಿರ್ದೇಶಾನುಸಾರವಾಗಿ ದೊರಕಿದ ವಿವಿಧ ರೀತಿಯ ಗೋಸೇವೆಯಲ್ಲಿ ಕೈ ಜೋಡಿಸಿದ್ದೇವೆ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಬದುಕಿನಲ್ಲಿ ಕ್ಷೇಮಾಭಿವೃದ್ಧಿಯ ಪಥ ತೆರೆದುಕೊಂಡಿದೆ ” ಎಂದು ನುಡಿದವರು ರಾಮಚಂದ್ರಾಪುರ ಮಂಡಲ ಹೊಸನಗರ ವಲಯದ ಹೆದ್ಲಿ ನಿವಾಸಿಗಳಾಗಿರುವ ರಾಮಮೂರ್ತಿ ಅವರ ಪತ್ನಿ ಛಾಯಾ ಆರ್. ಮೂರ್ತಿ. ಹೆದ್ಲಿ ಭಾಸ್ಕರ ಭಟ್, ಸರಸ್ವತಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ […]

Continue Reading