” ದೇವನೇ ಗುರುವಾಗಿ ಬಂದಂತೆ ನಮ್ಮ ಗುರುದೇವರು ” : ಶಶಿಕಲಾ ಹೆಗಡೆ ಬೆಂಗಳೂರು

ಮಾತೃತ್ವಮ್

 

 

” ಬದುಕಿನಲ್ಲಿ ಎದುರಾಗುವ ಯಾವುದೇ ಸಮಸ್ಯೆ ಇರಲಿ, ಸಂಕಷ್ಟಗಳಿರಲಿ , ಶ್ರೀಗುರುಗಳನ್ನು ಮನಸಾರೆ ಪ್ರಾರ್ಥಿಸಿದರೆ ಆ ಕಷ್ಟದ ಬೆಟ್ಟಗಳು ಮಂಜಿನಂತೆ ಕರಗಿ ಹೋಗಿ ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸುತ್ತದೆ. ಇದು ನಮ್ಮ ಜೀವನದ ಅನುಭವ. ನಮ್ಮ ಗುರುಗಳೆಂದರೆ ಆ ಭಗವಂತನೇ ಗುರು ಸ್ವರೂಪಿಯಾಗಿ ಧರೆಗಿಳಿದು ಬಂದಂತೆ ಎಂಬುದು ನಮ್ಮ ಅಚಲ ನಂಬಿಕೆ ” ಈ ಶ್ರದ್ಧಾಭಕ್ತಿಯ ನುಡಿಗಳು ಹೊನ್ನಾವರ ಮಂಡಲ ಬಾಳ್ಕೋಡು ಇಡಗುಂಜಿಯ ಹೊಸಮನೆಯ ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ಕೃಷ್ಣ ಮಂಜುನಾಥ ಹೆಗಡೆಯವರ ಪತ್ನಿ ಶಶಿಕಲಾ ಹೆಗಡೆಯವರದ್ದು.

 

ಕುಮಟಾ ಮಂಡಲ ಮೂರೂರು ಗಣಪತಿ ಹೆಗಡೆ, ತ್ರಿವೇಣಿ ಹೆಗಡೆಯವರ ಪುತ್ರಿಯಾದ ಶಶಿಕಲಾ ಹೆಗಡೆ ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿದ ಮಾಸದಮಾತೆಯಾಗಿದ್ದಾರೆ.

 

” ಸುಮಾರು ಮೂವತ್ತು ವರ್ಷಗಳ ಕಾಲ ಹುಬ್ಬಳ್ಳಿಯಲ್ಲಿ ಇದ್ದೆವು. ಅಲ್ಲಿ ಬಿಂದು ಸಿಂಧು ಸಂಚಾಲಕಿಯಾಗಿ ಸೇವೆ ಸಲ್ಲಿಸಿದ್ದೇನೆ. ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಬದುಕಿನಲ್ಲಿ ಎಲ್ಲವೂ ಒಳಿತಾಗಿದೆ. ಅಪಘಾತವೊಂದರಿಂದ ಪಾರಾಗಿದ್ದು ಸಹಾ ಶ್ರೀಗುರುಗಳ ಕೃಪೆಯಿಂದಲೇ. ಜೀವನದ ಸಂಕಷ್ಟದ ಸಂದರ್ಭಗಳಲ್ಲಿ ಶ್ರೀಗುರುಗಳ ಚರಣಗಳಿಗೆ ಮೊರೆಹೋದ ನಮಗೆ ಅವರ ಆಶೀರ್ವಾದದಿಂದ ಎಲ್ಲವೂ ಸುಗಮವಾಗಿದೆ ” ಎನ್ನುವ ಶಶಿಕಲಾ ಹೆಗಡೆಯವರು ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷಭಾಗಿನಿಯಾಗಿ ಬಾಗಿನ ಸ್ವೀಕರಿಸಿದವರು.

 

” ಪ್ರಸ್ತುತ ಬೆಂಗಳೂರು ಉತ್ತರ ಮಂಡಲದ ಯಲಹಂಕ ವಲಯ ನಿವಾಸಿಗಳಾಗಿರುವ ನಮಗೆ ಶ್ರೀಗುರುಗಳ ಸೇವಾವಕಾಶ ದೊರಕಿರುವುದೇ ಪೂರ್ವ ಜನ್ಮದ ಸುಕೃತದಿಂದ. ಸಣ್ಣಪುಟ್ಟ ಅನಾರೋಗ್ಯಗಳು ಸಹಾ ಶ್ರೀಮಠದ ಸೇವೆಯಿಂದ ಪರಿಹಾರವಾಗಿದೆ. ಗೋಸೇವೆಯ ಮಹತ್ವವನ್ನು ತಿಳಿಸಿದ ತಕ್ಷಣವೇ ಅನೇಕ ಮಂದಿ ಸಹಕಾರ ನೀಡಿದ್ದಾರೆ. ನಾವೂ ಪ್ರತಿವರ್ಷವೂ ಗೋಮಾತೆಯ ಸೇವೆಗಾಗಿ ಕಾಣಿಕೆ ಸಮರ್ಪಣೆ ಮಾಡುತ್ತೇವೆ. ಸದಾ ಕಾಲವೂ ಶ್ರೀಮಠದ ಸೇವೆ, ಗೋಮಾತೆಯ ಸೇವೆಯಲ್ಲಿ ನಿರತವಾಗಿರಬೇಕೆಂಬುದೇ ಜೀವನದ ಅಭಿಲಾಷೆ ” ಎನ್ನುವ ಇವರಿಗೆ ಶ್ರೀಗುರುಗಳ ಅನುಗ್ರಹದಿಂದ ಬದುಕಿನಲ್ಲಿ ಏಳಿಗೆಯಾಗಿದೆ ಎಂಬ ಅಚಲ ನಂಬಿಕೆ.

 

ಪ್ರಸನ್ನಾ ವಿ ಚೆಕ್ಕೆಮನೆ

Author Details


ಪ್ರಸನ್ನ ವಿ ಚೆಕ್ಕೆಮನೆ

Leave a Reply

Your email address will not be published. Required fields are marked *