ಪ್ರತಿಯೊಂದು ಗೋವಿನಲ್ಲೂ ಪುಣ್ಯಕೋಟಿಯ ಸಾನ್ನಿಧ್ಯವಿದೆ : ಸುಭದ್ರಾ ವೆಂಕಟಸುಬ್ಬ ಹೆಗಡೆ, ಬಿಜ್ಜಾಳ

ಮಾತೃತ್ವಮ್

 

” ತನ್ನ ಜೀವನದುದ್ದಕ್ಕೂ ಪರೋಪಕಾರಿಯಾಗಿ ನಮ್ಮ ಬದುಕಿಗೆ ಆಧಾರವಾಗಿರುವ ಪ್ರತಿಯೊಂದು ಗೋವೂ ಪುಣ್ಯಕೋಟಿಯ ಪ್ರತಿನಿಧಿ ಎಂದೇ ನನ್ನ ಭಾವನೆ. ಅಳಿವಿನಂಚಿನಲ್ಲಿರುವ ದೇಶೀಯ ತಳಿಯ ಹಸುಗಳ ಉಳಿವಿನ ಅವಶ್ಯಕತೆಯನ್ನು ಸಮಾಜಕ್ಕೆ ಮನದಟ್ಟು ಮಾಡಿಸಲು ನಮ್ಮ ಗುರುಗಳು ಕೈಗೊಂಡ ಯೋಜನೆಗಳಲ್ಲಿ ಭಾಗಿಯಾಗುವ ಅವಕಾಶ ದೊರಕಿದ್ದು ನನ್ನ ಸುಕೃತ . ಗೋಮಾತೆಯ ಒಡನಾಟದಲ್ಲಿರುವವರಿಗೆ ಮಾತ್ರ ಗೋಸೇವೆಯಿಂದ ದೊರಕುವ ನೆಮ್ಮದಿಯನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯ” ಎಂದವರು ಸಿದ್ಧಾಪುರ ಮಂಡಲ ಇಟಗಿ ವಲಯದ ಬಿಜ್ಜಾಳ ವೆಂಕಟಸುಬ್ಬ ಹೆಗಡೆಯವರ ಪತ್ನಿ ಸುಭದ್ರಾ.

 

ಶಿರಸಿ ತಾಲೂಕು ಹುಲೇಕಲ್ ಸೀತಾರಾಮ ಭಟ್, ಭವಾನಿ ದಂಪತಿಗಳ ಪುತ್ರಿಯಾದ ಸುಭದ್ರಾ ಮಾತೃತ್ವಮ್ ಯೋಜನೆಯ ಮೂಲಕ ಒಂದು ವರ್ಷದ ಗುರಿ ತಲುಪಿ ಲಕ್ಷಭಾಗಿನಿಯಾದ ಮಾಸದ ಮಾತೆಯಾಗಿದ್ದಾರೆ.

 

ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ತಮ್ಮ ಮನೆಯಲ್ಲಿಯೂ ಹಸುಗಳನ್ನು ಸಾಕುತ್ತಿದ್ದಾರೆ. ತಮ್ಮ ಗೋಸೇವೆಗೆ ಶ್ರೀಗುರುಗಳ ಆಶೀರ್ವಚನದ ಪ್ರೇರಣೆ ಹಾಗೂ ವೀಣಾ ಭಟ್ ಅವರ ಪ್ರೋತ್ಸಾಹ ಕಾರಣ ಎನ್ನುವ ಸುಭದ್ರಾ ಹೆಗಡೆಯವರು ತಮ್ಮ ಮಕ್ಕಳ ಸಹಕಾರದಿಂದ ಮಾತೃತ್ವಮ್ ಯೋಜನೆಯ ಗುರಿ ತಲುಪಿದವರು.

 

” ಶ್ರೀಗುರುಗಳ ಕೃಪೆಯಿಂದ ಬದುಕಿನಲ್ಲಿ ಎಲ್ಲವೂ ಒಳಿತಾಗಿದೆ. ಶ್ರೀಗುರುಸೇವೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಶ್ರೀಗುರುಗಳ ನಿರ್ದೇಶಾನುಸಾರವಾಗಿರುವ ಕುಂಕುಮಾರ್ಚನೆ, ಸ್ತೋತ್ರ ಪಠಣಗಳನ್ನು ನಡೆಸುತ್ತಿದ್ದೇನೆ ” ಎನ್ನುವ ಸುಭದ್ರಾ ಅವರ ಎಲ್ಲಾ ಕಾರ್ಯಗಳಿಗೂ ಮನೆಯವರ ಸಂಪೂರ್ಣ ಬೆಂಬಲವಿದೆ.

 

ಪ್ರಸನ್ನಾ ವಿ ಚೆಕ್ಕೆಮನೆ

Author Details


Srimukha

Leave a Reply

Your email address will not be published. Required fields are marked *