ಗುರುಕೃಪಾ ಕಟಾಕ್ಷದಿಂದಲೇ ದೊರಕಿದ ಶ್ರೀಗುರು ಸೇವಾಭಾಗ್ಯ: ಸುವರ್ಣ ಮಾಲಿನಿ ,ಹೊಸಮನೆ

ಮಾತೃತ್ವಮ್

 

ಮಂಗಳೂರು ಮಂಡಲ ಮಧ್ಯವಲಯದ ಮೇರಿಹಿಲ್ ಗುರು ನಗರದ ಗುರುನಿಲಯ ನಿವಾಸಿಗಳಾಗಿರುವ ಭಾಸ್ಕರ ಹೊಸಮನೆ ಅವರ ಪತ್ನಿಯಾಗಿರುವ ಸುವರ್ಣ ಮಾಲಿನಿ ಅವರು ಸುಳ್ಯ ಸಮೀಪದ ಬದಂತಡ್ಕದ ನರಸಿಂಹ ಭಟ್ ಹಾಗೂ ಸುಮತಿ ದಂಪತಿಗಳ ಪುತ್ರಿ.

ಮಂಗಳೂರಿನ ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ವಾಣಿಜ್ಯ ಶಾಸ್ತ್ರದ ಸಹ ಪ್ರಾಧ್ಯಾಪಕಿ ಹಾಗೂ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುವ ಇವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಸ್ವತಃ ತಾವೇ ಪೂರ್ಣ ಪ್ರಮಾಣದಲ್ಲಿ ನೀಡುವ ಮೂಲಕ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

ತಮ್ಮ ನೂತನ ಗೃಹವನ್ನು ಕಟ್ಟುವ ಸಂದರ್ಭದಲ್ಲಿ ಶ್ರೀಮಠದ ಸಹಕಾರ ಯಾಚಿಸಬೇಕಾಗಿ ಬಂದ ಇವರು ಮುಂದೆ ಕೆಲವೇ ವರ್ಷಗಳಲ್ಲಿ ಆ ಹಣವನ್ನು ಮರಳಿಸಿದ್ದರು.
“ಇದು ಹತ್ತು ಪಟ್ಟಾಗಿ,ನೂರು ಪಟ್ಟಾಗಿ ಶ್ರೀಮಠದ ಸೇವೆಗಳಿಗೆ ಕೈ ಜೋಡಿಸುವಂತಾಗಲಿ” ಎಂದು ಆ ದಿನ ಶ್ರೀಸಂಸ್ಥಾನದವರು ಆಶೀರ್ವಾದ ಮಾಡಿದ್ದರು. ಮುಂದೆ ಶ್ರೀಮಠದ ವಿವಿಧ ಯೋಜನೆಗಳಿಗೆ ಕೈ ಜೋಡಿಸುವ ಅವಕಾಶವ ಒದಗಿ ಬಂದಿದ್ದು ಸಂಪೂರ್ಣ ಶ್ರೀಗುರುಗಳ ಈ ಅನುಗ್ರಹದಿಂದ ಎಂದು ಭಾವಿಸುವ ಇವರು ಅಂದಿನಿಂದ ಇಂದಿನ ತನಕವೂ ಶ್ರೀಮಠದ ವಿವಿಧ ಯೋಜನೆಗಳಿಗೆ ಸಹಕಾರ ನೀಡುತ್ತಾ ಶ್ರೀಮಠದ ಸೇವೆಯಲ್ಲಿ ಭಾಗಿಗಳಾಗುತ್ತಿದ್ದಾರೆ.

“ಶ್ರೀಗುರುಗಳ ಕೃಪಾಕಟಾಕ್ಷದ ಆಶೀರ್ವಾದವೇ ನಮ್ಮ ಹೊಸ ಮನೆಯ ಒಳಿತಿಗೆ ಕಾರಣ,ಶ್ರೀ ಸಂಸ್ಥಾನದವರ ಆಶೀರ್ವಚನದ ನುಡಿಗಳೇ ಪೂರ್ಣ ಪ್ರಮಾಣದ ದಾನಿಯಾಗಿ ಮಾಸದ ಮಾತೆಯಾಗಲು ಸ್ಪೂರ್ತಿ” ಎನ್ನುವ ಸುವರ್ಣಮಾಲಿನಿ ಅವರು ಶ್ರೀಮಠದ ಗೋ ಉತ್ಪನ್ನಗಳ ಪ್ರಚಾರಕ್ಕಾಗಿ ಮಂಗಳೂರಿನ ಮೂರು ವಲಯಗಳ ನೂರಕ್ಕೂ ಅಧಿಕ ಹವ್ಯಕ ಮನೆಯವರಿಗೆ ಗೋ ಉತ್ಪನ್ನಗಳನ್ನು ಪರಿಚಯಿಸಿ, ಉಪಯೋಗಿಸುವ ವಿಧಾನಗಳ ಮಾಹಿತಿಯನ್ನು ಕಲೆಹಾಕಿ ಇದರ ಬಗ್ಗೆ ಸಮೀಕ್ಷೆ ನಡೆಸಿ ಆಂಗ್ಲಭಾಷೆಯಲ್ಲಿ ಒಂದು ಲೇಖನವನ್ನು ಬರೆದಿದ್ದಾರೆ. ಇದು ತಮಿಳುನಾಡಿನ ಪತ್ರಿಕೆಯೊಂದರಲ್ಲಿ ಪ್ರಕಟವಾಗುವ ಮೂಲಕ ಗೋ ಉತ್ಪನ್ನಗಳ ಬಗ್ಗೆ ಉಪಯುಕ್ತ ಮಾಹಿತಿ ಜನಮಾನಸಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ.

ತಮ್ಮ ಸಹೋದ್ಯೋಗಿಗಳಿಗೂ ಗೋ ಉತ್ಪನ್ನಗಳನ್ನು ಪರಿಚಯಿಸಿದ ಹಿರಿಮೆ ಇವರದ್ದು.
“ಇತರ ಸಮಾಜದವರು ಸಹಾ ಆಸಕ್ತಿಂದ ಗೋ ಉತ್ಪನ್ನಗಳನ್ನು ಖರೀದಿಸಿ ಉಪಯೋಗಿಸುತ್ತಾರೆ, ಸಮಾಜದಲ್ಲಿ ದೇಶೀಯ ಹಸುಗಳ ಮಹತ್ವದ ಬಗ್ಗೆ ಅರಿತವರೆಲ್ಲ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ” ಎನ್ನುವ ಸುವರ್ಣಮಾಲಿನಿಯವರಿಗೆ ಶ್ರೀಮಠದ ಎಲ್ಲಾ ಯೋಜನೆಗಳಿಗೂ ಸಾಧ್ಯವಾದಷ್ಟು ಕೈ ಜೋಡಿಸುವ ಹಂಬಲವಿದೆ.

ಪತಿ ಹಾಗೂ ಏಕೈಕ ಪುತ್ರಿ ಅಭೀಷ್ಟಾಳ ಸಂಪೂರ್ಣ ಸಹಕಾರದಿಂದ ಗೋಸೇವೆ, ಶ್ರೀಮಠದ ಸೇವೆಗಳಲ್ಲಿ ತನ್ನ ಉದ್ಯೋಗದ ಒತ್ತಡದ ನಡುವೆಯೂ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿದೆ’ ಎನ್ನುವ ಸುವರ್ಣಮಾಲಿನಿ ಅವರಿಗೆ ತಮ್ಮ ಈ ಸೇವೆಯನ್ನು ನಿರಂತರವಾಗಿ ಮುಂದುವರಿಸುವ ಇಚ್ಛೆಯಿದೆ‌‌.

Author Details


Srimukha

Leave a Reply

Your email address will not be published. Required fields are marked *