ಗಡಿನಾಡಿನ ಸಹೋದರಿಯರ ‘ರಾಮಕಥಾ’ ಗಾನಪಯಣ..

ಅಂಕುರ

 

ಧಾರ್ಮಿಕ-ಸಾಂಸ್ಕೃತಿಕ- ಸಾಮಾಜಿಕ-ಮೌಲ್ಯಗಳನ್ನೊಳಗೊಂಡ ವಿಶಿಷ್ಟವಾದ ಸಂಕಥನ ‘ರಾಮಕಥಾ’. ಶ್ರೀರಾಘವೇಶ್ವರ ಶ್ರೀಗಳು ಸಮಷ್ಟಿಗಾಗಿ ರೂಪಿಸಿದ ಹೊಸದೊಂದು ರಾಮಸೇವಾವಿಧಾನವೇ ಭಾರತ ದೇಶದಲ್ಲಿಯೇ ಅಪರೂಪ-ಅತಿವಿಶೇಷವಾದ ರಾಮಕಥಾ.

ಇಂತಹ ವಿಶಿಷ್ಟವಾದ ರಾಮಕಥೆಯಲ್ಲಿ ಸಹಗಾಯನದ ಮೂಲಕ ಗಾಯನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಹೋದರಿಯರು ಪೂಜಾ ಭಟ್ ಕೆ. ಮತ್ತು ಪ್ರಿಯಾಂಕಾ ಭಟ್ ಕೆ.

ಮೂಲತಃ ಗಡಿನಾಡು ಕಾಸರಗೋಡಿನವರಾದ ಸದ್ಯ ಬೆಂಗಳೂರಿನ ಗಿರಿನಗರದಲ್ಲಿ ವಾಸವಾಗಿರುವ ಕೆ.ಗೋವಿಂದರಾಜ್ ಮತ್ತು ಇಂದಿರಾ ಜ್ಯೋತಿ ದಂಪತಿಯ ಪುತ್ರಿಯರಾದ ಪೂಜಾ ಮತ್ತು ಪ್ರಿಯಾಂಕಾ ಇವರೇ ಈ ಪ್ರತಿಭೆಗಳು.

ಬಾಲ್ಯದಿಂದಲೇ ಮಠದ ಒಡನಾಟದಲ್ಲಿಯೇ ಬೆಳೆದ ಮಕ್ಕಳು, ಮಠದ ಕಾರ್ಯಕ್ರಮಗಳಲ್ಲಿ ಭಜನೆ ಹಾಡುವುದು, ಹಬ್ಬ-ಹರಿದಿನಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಮಕ್ಕಳು, ಚಿಕ್ಕ ವಯಸ್ಸಿನಲ್ಲಿಯೇ ಸಂಗೀತಾಭ್ಯಾಸ ಪ್ರಾರಂಭಿಸಿದರು ಎನ್ನುತ್ತಾರೆ ತಾಯಿ ಇಂದಿರಾ ಜ್ಯೋತಿ.

ಪ್ರಸ್ತುತ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿ.ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ವಿ.ಅನಂತ ಭಾಗವತ್ ಹಾಗೂ ಹಾರ್ಮೋನಿಯಂ ಅನ್ನು ಪ್ರಜ್ಞಾನ ಲೀಲಾಶುಕ ಉಪಾಧ್ಯಾಯ ಅವರ ಬಳಿ ಅಧ್ಯಯನ ಮಾಡುತ್ತಿದ್ದಾರೆ. ಅಲ್ಲದೇ ಕೆ.ಎಂ.ಕುಸುಮ ಅವರ ಬಳಿ ಸುಗಮ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ.

ಪರಮಪೂಜ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನಡೆಸಿಕೊಡುವ ರಾಮಕಥಾ, ಕೃಷ್ಣಕಥಾ, ರಾಮಪದ, ತತ್ವ ಭಾಗವತಮ್, ಧಾರಾ ರಾಮಾಯಣ ಮುಂತಾದ ಕಾರ್ಯಕ್ರಮಗಳಲ್ಲಿ ಸಂಗೀತ ಸೇವೆಯನ್ನು ಸಮರ್ಪಿಸಿದ್ದಾರೆ.

ಪೂಜಾ ಮತ್ತು ಪ್ರಿಯಾಂಕಾ ಅವರ ಸಂಗೀತ ಸಾಧನೆಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ದೊರೆತಿವೆ.
¶ ಶ್ರೀಸಂಸ್ಥಾನದವರ 2015ರ ‘ಛಾತ್ರ ಚಾತುರ್ಮಾಸ್ಯದಲ್ಲಿ ‘ಛಾತ್ರ ಪುರಸ್ಕಾರ’

¶ ಶ್ರೀಶಂಕರ ವಾಹಿನಿಯವರು 2014ರಲ್ಲಿ ನಡೆಸಿದ “ಭಜನ್ ಸಾಮ್ರಾಟ್ ಜೂನಿಯರ್ಸ್” ಗುಂಪು ಸ್ಪರ್ಧೆಯಲ್ಲಿ ವಿಜೇತರು.

¶ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅನೇಕ ಬಹುಮಾನ.

¶ ‘ಭಾರತ ವಿಕಾಸ ಪರಿಷದ್’ ನಡೆಸಿದ ರಾಷ್ಟ್ರಮಟ್ಟದ ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.

¶ ಇಸ್ಕಾನ್ ಹೆರಿಟೇಜ್ ಫೆಸ್ಟ್ (Iskcon Heritage Fest), ಪ್ರತಿಭಾ ಕಾರಂಜಿ ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.

ಶ್ರೀಸಂಸ್ಥಾನದವರ ಮುಂದೆ ಹಾಗೂ ಅವರೊಂದಿಗೆ ಹಾಡಲು ಸಿಕ್ಕ ಅವಕಾಶಗಳನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ಜೀವನದ ಧನ್ಯ, ಅಮೂಲ್ಯ ಮತ್ತು ಸಾರ್ಥಕ ಕ್ಷಣಗಳು ಅವು ಎಂಬ ನಂಬಿಕೆ ಪೂಜಾ ಮತ್ತು ಪ್ರಿಯಾಂಕಾ ಅವರದ್ದು.

ಸದ್ಯ ಪೂಜಾ ಭಟ್ ಕೆ. ಮೈಸೂರಿನ ಮಹಾರಾಣಿ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಅಂತಿಮ ವರ್ಷ ಡಿಗ್ರಿ ವ್ಯಾಸಂಗ ಮಾಡುತ್ತಿದ್ದು, ಪ್ರಿಯಾಂಕಾ ಭಟ್ ಕೆ. 10ನೇ ತರಗತಿ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಗೋಕರ್ಣದ ಅಶೋಕೆಯಲ್ಲಿ ಸ್ಥಾಪನೆಗೊಂಡ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಸೇರಿದ್ದು, ಈ ಸಹೋದರಿಯರ ಸಂಗೀತ ಪಯಣ ಹೀಗೆಯೇ ಸಾಗುತ್ತಾ ಇನ್ನಷ್ಟು ಸಾಧನೆಗೈಯ್ಯುವಂತಾಗಲಿ ಎಂದು ಹಾರೈಸೋಣ.

Author Details


Srimukha

Leave a Reply

Your email address will not be published. Required fields are marked *