ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗಣೇಶ್ ಪ್ರಸಾದ್ ಎಮ್ ಮತ್ತು ವಿಜಯಲಕ್ಷ್ಮೀ ದಂಪತಿಯ ಸುಪುತ್ರಿ ಶ್ರೀರಕ್ಷಾ ಎಮ್ ಅಪ್ಪಟ್ಟ ಗೋಪ್ರೇಮಿ.
3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಪ್ರತಿಭಾ ಕಾರಾಂಜಿಯ ರಂಗೋಲಿ ಸ್ಪರ್ಧೆಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಶ್ರೀರಕ್ಷಾ 6 ನೇ ತರಗತಿಯಲ್ಲಿ BYJUS ನವರು ಏರ್ಪಡಿಸಿದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು
ತನ್ನದಾಗಿಸಿಕೊಂಡಿದ್ದಾರೆ. ಹಾಗೇ ಅದೇ ವರ್ಷ LIDO LEARNING ನವರು ಆಯೋಜಿಸಿದಂತಹ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ತೇರ್ಗಡೆ ಹೊಂದು SMILE FOUNDATION ಅವರಿಂದ certificate of social work ಎಂಬ ಪ್ರಮಾಣಪತ್ರವನ್ನು ಪಡೆದಿದ್ದಾರೆ.
5ನೇ ತರಗತಿಯಲ್ಲಿ SCIENCE OLYMPAID FOUNDATION ನವರು ಏರ್ಪಡಿಸಿದ ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ.ಹಾಗು
7ನೇ ತರಗತಿಯಲ್ಲಿ ಪುತ್ತೂರು ಗಾನಸಿರಿ ಸ್ಟಾರ್ ಸಿಂಗರ್ ಏರ್ಪಡಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಶ್ರೀರಕ್ಷಾಳಿಗೆ ಮಂಗಳೂರು ಆಕಾಶವಾಣಿಯಲ್ಲಿ ಹಾಡಲೂ ಅವಕಾಶ ಲಭಿಸಿದೆ.
ಧರ್ಮ ಭಾರತಿ ಯಲ್ಲಿ ಲಕ್ಷಭಾಗಿನ ಲೇಖನ ಪ್ರಕಟಗೊಂಡಿದೆ.
ಮಂಗಲಗೋಯಾತ್ರೆ ಮಹಾಮಂಗಲ ಹಾಗು ಅಭಯಾಕ್ಷರ ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ತಂದೆ ತಾಯಿಯರೊಡನೆ ತಾನೂ ಸೇರಿಕೊಂಡ ಶ್ರೀರಕ್ಷಾ ಪುಟಾಣಿ ಗೋಸೇವಕಿಯಾಗಿ ಎಲ್ಲರ ಪ್ರಶಂಸೆಗೆ ಪಾತ್ರಳಾದಳು.
ನಂತರದ ದಿನಗಳಲ್ಲಿ ಮಾತೃತ್ವಂನ ಮಾಸದ ಮಾತೆಯಾಗಿ ಒಂದು ಲಕ್ಷ ರುಪಾಯಿಗಳನ್ನು ಗೋಸೇವೆಗಾಗಿ ಸಂಗ್ರಹಿಸಿ ಶ್ರೀಗುರುಗಳಿಂದ ಲಕ್ಷಬಾಗಿನವನ್ನು ಸ್ವೀಕರಿಸುವ ಮೂಲಕ ಮಾದರಿಯಾಗಿದ್ದಾಳೆ.
ಪ್ರಾಣಿಗಳನ್ನು ಮನೆಯವರಂತೆ ಪ್ರೀತಿಸುವ ಶ್ರೀರಾಕ್ಷ ಅಪ್ಪಟ ಗೋಪ್ರೇಮಿ.ಈ ಸಣ್ಣ ವಯಸ್ಸಿನಲ್ಲೇ ಬೈಕ್, ಸ್ಕೂಟರ್, ಟೆಂಪೋ ವನ್ನು ಓಡಿಸುತ್ತಾರೆ.
ಮಂಗಳೂರು ನಲ್ಲಿರುವ NMPT ನಲ್ಲಿ ಇರುವ ಸುಮಾರು ಗೋಗಳಿಗೆ ಮೇವಿಗಾಗಿ ಹಸಿಹುಲ್ಲು ಒದಗಿಸುತ್ತಾರೆ.
7 ನೇ ತರಗತಿಯವರೆಗೆ ಹೀರ ಇಂಟೆರ್ನ್ಯಾಷನಲ್ ಶಾಲೆ, ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದ ಶ್ರೀರಕ್ಷಾ ಮುಂದಿನ ವಿದ್ಯಾಭ್ಯಾಸವನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲದಲ್ಲಿ ಪಡೆಯಲು ಉತ್ಸುಕಳಾಗಿ ಸಿದ್ಧಳಾಗಿದ್ದಾಳೆ. ಶ್ರೀರಕ್ಷಾಳ ಭವಿಷ್ಯ ಉಜ್ವಲವಾಗಿ ಬೆಳಗಲಿ, ಇನ್ನಷ್ಟು ಸಾಧನೆ ಹೊರಹೊಮ್ಮಲಿ ಎಂಬ ಶುಭಹಾರೈಕೆ ನಮ್ಮದು