ಭರತನಾಟ್ಯದಲ್ಲಿ ಯಶಸ್ಸಿನ ಮೆಟ್ಟಿಲೇರುತ್ತಿರುವ ಯಶಸ್ ಭಟ್

ಅಂಕುರ

ಭರತನಾಟ್ಯವು ಕರ್ನಾಟಕದ ಜನಪ್ರಿಯ ಶಾಸ್ತ್ರೀಯ ನೃತ್ಯ. ಅಂತಹ ನೃತ್ಯಕಲೆಯಲ್ಲಿ ಗಮನಸೆಳೆಯುತ್ತಿರುವ ಯೆಶಸ್ ಭಟ್ಟ ವೈ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಿರ್ಮಲ್ ಭಟ್ ಮತ್ತು ರೇಷ್ಮಾ ನಿರ್ಮಲ್ ಭಟ್ ಅವರ ಸುಪುತ್ರ.
ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿದೆ. ಇವರ ತಾಯಿ ವಿದುಷಿ ಶ್ರೀಮತಿ ನಿರ್ಮಲ್ ಭಟ್ ರವರೇ ಯೆಶಸ್ ಭಟ್ ವೈ ರವರ ಭರತನಾಟ್ಯದ ಗುರು. ಮಂಗಳೂರು ಮ್ಯೂಸಿಕ್ ಮತ್ತು ಕಲ್ಚರಲ್ ಅಸೋಸಿಯೇಷನ್ (ರಿ) 2011ರಲ್ಲಿ ನಡೆಸಿದ “ಕಲಾಸಂಗಮ” ನಾಟ್ಯಂಜಲಿ ಭರತನಾಟ್ಯದಲ್ಲಿ A 1 ಗ್ರೇಡ್ ಪಡೆದ ಇವರು ತಮ್ಮ ಎಳೆಯ ವಯಸ್ಸಿನಿಂದಲೇ ಕಲೆಯ ಕಡೆ ಆಸಕ್ತಿ ಇರುವುದರಿಂದ ಕೇಂದ್ರೀಯ ವಿದ್ಯಾಲಯ-ಪ್ರಾರ್ಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಅಭ್ಯಾಸಸುತ್ತಿರುವಾಗ ಅನೇಕ ಏಕವ್ಯಕ್ತಿ ಮತ್ತು ಸಮೂಹ ನೃತ್ಯ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಮಂಗಳೂರಿನ ಬ್ರಹ್ಮಶ್ರೀ ಬಲ್ಲವ ವೇದಿಕೆ (ರಿ) ಆಯೋಜಿಸಿದ “ಮೆರಗು”ಭರತನಾಟ್ಯ ಸಮೂಹ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ದ್ದಾರೆ. ಇತ್ತೀಚಿಗೆ ನಡೆದಂತಹ ಶ್ರೀನಿವಾಸ್ ಯುನಿವರ್ಸಿಟಿಯ ಎವಿಯೇಷನ್ ಸ್ಟಡೀಸ್ ನವರು ಏರ್ಪಡಿಸಿದ ರಾಷ್ಟ್ರಮಟ್ಟದ “ನೃತ್ಯೋತ್ಸವ-2021”
ಶಾಸ್ತ್ರೀಯ ಭರತನಾಟ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಹೆಗ್ಗಳಿಕೆ ಇವರದ್ದು.
“ದೂರದರ್ಶನದಲ್ಲಿ ಯೆಶಸ್ ರವರ ನೃತ್ಯ ಪ್ರದರ್ಶನ”

ಡಿ.ಡಿ ಚಂದನವಾಹಿನಿ ಬೆಂಗಳೂರು ಇದರಲ್ಲಿ ಪ್ರಸಾರವಾದ ಮಂದಾರ ಕೇಶವ ಭಟ್ಟರ”ಮಂದಾರ ರಾಮಾಯಣ ತುಳು ಕಾವ್ಯ ನೃತ್ಯ ರೂಪಕದಲ್ಲಿ
ವಿದುಷಿ ಶ್ರೀಮತಿ ರೇಷ್ಮಾ ನಿರ್ಮಲ್ ಭಟ್ ರವರ ನೃತ್ಯ ನಿರ್ದೇಶನದಲ್ಲಿ
ತಮ್ಮ ನೃತ್ಯ ಲಹರಿ ನಾಟ್ಯಾಲಯದ ತಂಡದೊಂದಿಗೆ
ಅಭಿನಯಿಸಿದ್ದಾರೆ ಹಾಗೂ ಮಂಗಳೂರಿನ ನಮ್ಮ ಕುಡ್ಲ ಟಿವಿ ಚಾನೆಲ್ ಆಯೋಜಿಸಿದ “ದಸರಾ ವೈಭವ ” ಕಾರ್ಯಕ್ರಮದಲ್ಲಿಯೂ
ನೃತ್ಯ ಲಹರಿ ತಂಡದೊಂದಿಗೆ ಕಾರ್ಯಕ್ರಮ ನೀಡಿರುತ್ತಾರೆ.
ಕೇಂದ್ರೀಯ ವಿದ್ಯಾಲಯ ಸಂಘಟನೆ ಕ್ಲಸ್ಟರ್ ಲೇವೆಲ್ ಮೈಸೂರಿನಲ್ಲಿ ಸೋಶಿಯಲ್ ಸೈನ್ಸ್ ಎಕ್ಸಿಬಿಷನ್ ಮತ್ತು ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ .
ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಬ್ಬಕ ಉತ್ಸವಗಳಲ್ಲಿ, ಕನ್ನಡ ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿ ಜನಮಾನಸವನ್ನು ಗೆದ್ದಿರುತ್ತಾರೆ.
ಇವರ ಕಲಾಸಕ್ತಿಯನ್ನು ಗುರುತಿಸಿ ಕರ್ನಾಟಕದ ಜಾನಪದ ಪರಿಷತ್ತು ಬೆಂಗಳೂರು ಕೇರಳ ಗಡಿನಾಡ ಘಟಕ ಆಯೋಜಿಸಿದ್ದ “ಓಣಂ ದಸರಾ”ಉತ್ಸವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯಲ್ಲಿ ನಡೆದ ಗುರು ನಮನೊಡು ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.
ಭರತನಾಟ್ಯ ಅಷ್ಟೇ ಅಲ್ಲದೆ ಚಿತ್ರಕಲೆ , ಭಜನೆ,ಮೃದಂಗದಲ್ಲೂ ಆಸಕ್ತಿಯನ್ನು ಹೊಂದಿರುವ ಯೆಶಸ್ ಸಂಗೀತಾಭ್ಯಾಸವನ್ನು ವಿದ್ವಾನ್ ವೆಂಕಟಕೃಷ್ಣ ಭಟ್ ಹಾಗೂ ಮೃದಂಗ ಅಭ್ಯಾಸವನ್ನು ವಿದ್ವಾನ್ ಮನೋಹರ, ಹಾಗೂ ಚಿತ್ರಕಲೆಯನ್ನು ಪ್ರಸಾದ್ ಆರ್ಟ್ ಗ್ಯಾಲರಿ ಮಂಗಳೂರು ಇವರಲ್ಲಿ ಅಭ್ಯಸಿಸುತ್ತಿದ್ದಾರೆ.
ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ15ಕ್ಕೂ ಹೆಚ್ಚು ಭಜನಾ ಸಂಕೀರ್ತನೆಯನ್ನು ದೇವಸ್ಥಾನ ಮತ್ತು ಭಜನಾ ಮಂದಿರಗಳಲ್ಲಿ ನೀಡಿದ್ದಾರೆ.
ಪ್ರಸ್ತುತ ಪರಿಜ್ಞಾನ ಪ್ರಿ ಯುನಿವರ್ಸಿಟಿ ಕಾಲೇಜು ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ಮಾಡುತ್ತಿರುವ ಇವರು ಇನ್ನಷ್ಟು ಸಾಧನೆಯ ಮೆಟ್ಟಿಲೇರುವಂತಾಗಲಿ ಎಂಬ ಶುಭ ಹಾರೈಕೆ ನಮ್ಮದು.

Author Details


Srimukha

Leave a Reply

Your email address will not be published. Required fields are marked *