ಸರ್ವರಂಗದಲ್ಲಿಯೂ ಸಾಮರ್ಥ್ಯ ಹೊಂದಿರುವ ಹೇಮಸ್ವಾತಿ

ಅಂಕುರ

 

ಸಂಗೀತ, ಭರತನಾಟ್ಯ, ಶಿಕ್ಷಣ,ಭಾಗವತಿಕೆ, ಯಕ್ಷಗಾನ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿರುವ ವಿಶೇಷ ಪ್ರತಿಭೆ ಹೇಮಸ್ವಾತಿ ಕುರಿಯಾಜೆ ಈ ವಾರದ ಅಂಕುರ ಸಾಧಕಿ.

ಉದಯಶಂಕರ್ ಭಟ್ ಮತ್ತು ವಸಂತ ಲಕ್ಷ್ಮೀಯವರ ಸುಪುತ್ರಿ ಹೇಮಸ್ವಾತಿ ಹಲವು ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈಯ್ಯುತ್ತಿದ್ದಾರೆ..ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ೨೦೧೫ರ ವಿಜ್ಞಾನ ಮಾದರಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಇವರು ೨೦೧೭-೧೮ರಲ್ಲಿ ಒಂಬತ್ತನೇ ತರಗತಿಯಿರುವಾಗ ರಾಜ್ಯ ಮಟ್ಟದ ಇಂಗ್ಲೀಷ್ ಕಿರುನಾಟಕದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹತ್ತನೇ ತರಗತಿ ಯಲ್ಲಿ ಜಿಲ್ಲಾ ಮಟ್ಟದ ಏಕವ್ಯಕ್ತಿ ಯಕ್ಷಗಾನದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಇವರ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ೨೦೧೮-೧೯ನೇ ಸಾಲಿನ ಪ್ರತಿಭಾರತ್ನ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.
ಸಂಗೀತ ಜೂನಿಯರ್ ಮತ್ತು ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಹಾಗೂ NCC ಕ್ಯಾಂಪ್ ನಲ್ಲಿ’Best cadet’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲೂ ಒಂದು ಹೆಜ್ಜೆ ಮುಂದೆ ಇರುವ ಹೇಮಸ್ವಾತಿ ಎಸ್. ಎಸ್. ಎಲ್ ಸಿ ಯಲ್ಲಿ 558 ಅಂಕಗಳೊಂದಿಗೆ ಉತ್ತೀರ್ಣರಾಗಿ ತಂದೆ-ತಾಯಿಗೆ ಕೀರ್ತಿ ತಂದಿದ್ದಾರೆ.


ಜಾಂಬವತಿ ಕಲ್ಯಾಣ ಹಾಗೂ ಕಂಸವಧೆಯ ಕೃಷ್ಣ, ರಾಮಾಂಜನೇಯದ ಹನುಮಂತ,ಇಂದ್ರಜಿತು ಕಾಳಗದ ಲಕ್ಷ್ಮಣ, ಶಶಿಪ್ರಭೆಯ ಮಾರ್ತಾಂಡ ತೇಜ,
ಲವ-ಕುಶರ ಕುಶ,ಯಜ್ಞ ಸಂರಕ್ಷಣೆಯ ರಾಮ ಮುಂತಾದ ಯಕ್ಷಗಾನದಲ್ಲಿ ಪ್ರದರ್ಶನವನ್ನು ನೀಡಿದ್ದಾರೆ.
ಈಗಾಗಲೇ ಆಂಗ್ಲ ಭಾಷೆಯ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತಿಕೆ ಹಾಗೂ ಯಕ್ಷಗಾನದಲ್ಲಿ ಪ್ರದರ್ಶನವನ್ನು ನೀಡಿದ್ದಾರೆ.ಈಗ ಸತತ ಮೂರು ವರ್ಷದಿಂದ ಭಾಗವತಿಕೆಯನ್ನು ನಿರಂತರವಾಗಿ ಅಭ್ಯಾಸಿಸುತ್ತಿದ್ದಾರೆ..
ಪ್ರಸ್ತುತ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಯನ್ನು ವ್ಯಾಸಾಂಗ ಮಾಡುತ್ತಿರುವ ಇವರು ಇನ್ನಷ್ಟು ಸಾಧನೆಯ ಮೆಟ್ಟಿಲೇರುವಂತಾಗಲಿ ಎಂಬ ಶುಭಕಾಮನೆ ನಮ್ಮದು….

Leave a Reply

Your email address will not be published. Required fields are marked *