” ಶ್ರೀಮಠವೆಂದರೆ ಮನಸ್ಸಿಗೆ ಆಪ್ತವೆನಿಸುವ ತಾಣ ” : ವನಿತಾ ಶ್ರೀಧರ ಹೆಗಡೆ ಮುಂಬೈ

ಮಾತೃತ್ವಮ್

 

” ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿದೆ, ತವರುಮನೆಯವರ ಜೊತೆಗೆ ಹಲವಾರು ಬಾರಿ ಗೋಕರ್ಣಕ್ಕೂ ಹೋಗಿರುವೆ, ಹಾಗಾಗಿ ಶ್ರೀಮಠ, ಶ್ರೀಗುರುಗಳು ಎಂದರೆ ಮನಸ್ಸಿಗೆ ಆಪ್ತವಾದ ಭಾವನೆ ಬಂದುಬಿಟ್ಟಿದೆ ” ಎಂಬ ಮಾತುಗಳು ಕುಮಟಾದ ಚಿತ್ರಗಿ ಮೂಲದ ಪ್ರಸ್ತುತ ಮುಂಬೈ ನಿವಾಸಿಗಳಾಗಿರುವ ವನಿತಾ ಶ್ರೀಧರ ಹೆಗಡೆ ಅವರದ್ದು.

ಕುಮಟಾ ಸಮೀಪದ ಬರಗದ್ದೆ ಸುಬ್ರಾಯ ಹೆಗಡೆ , ಜಾಹ್ನವಿ ಸುಬ್ರಾಯ ಹೆಗಡೆಯವರ ಪುತ್ರಿಯಾದ ವನಿತಾ ಶ್ರೀಧರ ಹೆಗಡೆಯವರಿಗೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪತಿ ಶ್ರೀಧರ ಹೆಗಡೆಯವರೇ ಸ್ಪೂರ್ತಿಯಂತೆ.

” ಶ್ರೀ ಸಂಸ್ಥಾನದವರ ಮುಂಬೈ ಸಂದರ್ಶನದ ವೇಳೆಯಲ್ಲಿ ನಾವು ಮೊದಲ ಬಾರಿಗೆ ಶ್ರೀಗುರುಗಳ ದರ್ಶನಭಾಗ್ಯ ಪಡೆದೆವು. ಅಂದಿನಿಂದಲೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಊರಿಗೆ ಹೋದಾಗಲೆಲ್ಲ ಶ್ರೀಮಠಕ್ಕೆ ಭೇಟಿ ನೀಡುತ್ತಿರುತ್ತೇವೆ. ಶ್ರೀಗುರುಗಳ ಆಶೀರ್ವಚನದ ಪ್ರೇರಣೆಯಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ಗೋಸೇವೆ, ಶ್ರೀಗುರುಸೇವೆಗಳಲ್ಲಿ ನಿರತವಾಗಿರಬೇಕೆಂದು ಮನಸ್ಸು ಹಂಬಲಿಸುತ್ತದೆ ” ಎನ್ನುವ ವನಿತಾ ಅವರ ಪತಿಯ ಸಹಕಾರದಿಂದ ಮಾಸದ ಮಾತೆಯಾಗಿ ಗುರಿ ತಲುಪಿದವರು.

” ಮಾತೃತ್ವಮ್ ಯೋಜನೆಯ ಬಗ್ಗೆ ತಿಳಿದಾಗ ನಮ್ಮವರೇ ನನ್ನಲ್ಲಿ ಮಾಸದ ಮಾತೆಯಾಗಲು ಹೇಳಿದರು, ಹಾಗೂ ಒಂದು ಹಸುವಿನ ಒಂದು ವರ್ಷದ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ತಾವೇ ನೀಡಿದ ಕಾರಣ ಬಹಳ ಸುಲಭವಾಗಿ ಗುರಿ ತಲುಪಿದೆ. ನಾವು ಮುಂಬೈನಲ್ಲಿದ್ದರೂ ಮನಸ್ಸು ಶ್ರೀಮಠದ ಸೇವೆಯತ್ತಲೇ ತುಡಿಯುತ್ತಿರುತ್ತದೆ ” ಎನ್ನುವ ವನಿತಾ ಅವರಿಗೆ ಇತ್ತೀಚಿನ ದಿನಗಳಲ್ಲಿ ಕೊರೋನಾ ಕಾರಣದಿಂದಾಗಿ ಶ್ರೀಮಠಕ್ಕೆ ಬರಲಾಗಲಿಲ್ಲವಲ್ಲಾ ಎಂಬ ಕೊರಗು ಕಾಡುತ್ತಿದ್ದರೂ ಮುಂದೊಂದು ದಿನ ಎಲ್ಲವೂ ಸರಿಯಾಗಿ ಶ್ರೀಮಠದ ಹಾದಿ ಸುಗಮವಾಗಬಹುದು ಎಂಬ ಭರವಸೆಯ ನಿರೀಕ್ಷೆಯಿದೆ.

Author Details


Srimukha

Leave a Reply

Your email address will not be published. Required fields are marked *