ಕುಂಚದಲ್ಲಿ ಅರಳುತ್ತಿದೆ ಪುಟ್ಟ ಹುಡುಗಿಯ ಗೋಪ್ರೇಮ!

ಅಂಕುರ

 

ಚಿತ್ರಕಲೆಯಲ್ಲಿ ತನ್ನದೇ ಆದ ಛಾಪು ಮೂಡಿಸುವತ್ತ ಹೆಜ್ಜೆ ಇಡುತ್ತಿರುವ ಪ್ರತಿಭೆ ಶ್ರೀಲಕ್ಷ್ಮೀ. ಈಕೆ
ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಚಂದ್ರಗಿರಿಯ ಗೋಪಾಲಕೃಷ್ಣ ಭಟ್ ಮತ್ತು ಸೌಮ್ಯಪ್ರಭಾ ರವರ ಸುಪುತ್ರಿ
ಕಲಾ ಪ್ರಕಾರಗಳಲ್ಲಿ ಚಿತ್ರಕಲೆಯು ಇತರ ಪ್ರದರ್ಶನ ಕಲೆಗಳಿಗಿಂತ ತುಸು ಭಿನ್ನವಾದುದು. ಕಲೆಯೆಂಬುದು ಸುಲಭವಾಗಿ ಎಲ್ಲರಿಗೂ ಒದಗುವಂತದಲ್ಲ. ಅಂತಹ ಚಿತ್ರಕಲೆಯಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿರುವಂತಹ ಇದೀಗ ಹತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲ ಪ್ರತಿಭೆ ಶ್ರೀಲಕ್ಷ್ಮೀ.


_ಲಾಕ್ಡೌನ್ ಸಮಯದ ಸದುಪಯೋಗ_

ಚಿತ್ರಕಲೆಯಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿರುವ ಶ್ರೀಲಕ್ಷ್ಮೀ ಪ್ರತಿ ದಿನಕ್ಕೊಂದು ಚಿತ್ರದಂತೆ ೪೨೫ಕ್ಕೂ ಹೆಚ್ಚು ಚಿತ್ರಗಳನ್ನು ಚಿತ್ರಿಸಿದ್ದಾರೆ. ಹಾಗೆಯೇ
ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಇವರು ಲಾಕ್ಡೌನ್ ಸಮಯದಲ್ಲಿ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ೨೫ಕ್ಕೂ ಹೆಚ್ಚು ಭಾರಿ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ಧರ್ಮಭಾರತಿಯಲ್ಲಿ ನವದುರ್ಗ ಚಿತ್ರ ಪ್ರಕಟವಾಗಿದೆ ಹಾಗೂ ನೇಸರ ಪುಸ್ತಕದಲ್ಲಿ ಚಿತ್ರಗಳು ಪ್ರಕಟವಾಗಿದೆ.

_ಪುಟಾಣಿ ಮಾಸದ ಮಾತೆ_

ಶ್ರೀರಾಮಚಂದ್ರಾಪುರಮಠದ ಮಾತೃತ್ವಂ ಸಂಘಟನೆಯಲ್ಲಿ ಸೇವಾ ಬಿಂದುವಾಗಿ ವಿದ್ಯಾಲಕ್ಷ್ಮಿಯರ ಸಾಲಿನಲ್ಲಿ ನಿಂತಿರುವ ಶ್ರೀಲಕ್ಷ್ಮೀ ಒಂದು ಗೋವಿನ ಪಾಲನೆಯ ಹೊಣೆಯನ್ನು ಹೊತ್ತಿರುವ ಪುಟಾಣಿ ಮಾಸದ ಮಾತೆಯೂ ಹೌದು.
ಗೋಶಾಲೆಯಲ್ಲಿ ಕಂಡ ದೃಶ್ಯಗಳನ್ನು, ಚಿತ್ರಗಳನ್ನು ತನ್ನ ಕುಂಚದಿಂದ ಅರಳಿಸುವ ಗೋಪ್ರೇಮಿ ಶ್ರೀಲಕ್ಷ್ಮೀ ಎಲ್ಲಾ ದೇಶೀ ಗೋತಳಿಗಳ ಚಿತ್ರಗಳನ್ನು ರಚಸಿದ್ದಾರೆ ಮತ್ತು ನೂರಕ್ಕೂ ಹೆಚ್ಚು ಚಿತ್ರಗಳನ್ನು ಶ್ರೀಸಂಸ್ಥಾನದವರಿಗೆ ಸಮರ್ಪಿಸಿದ್ದಾರೆ.
ವಿದ್ಯಾರ್ಥಿವಾಹಿನಿಯಿಂದ ಪ್ರಕಟಗೊಳ್ಳುತ್ತಿದ್ದ ರಾಮಾಯಣ ಹಕ್ಕಿ ನೋಟ – ಧಾರಾ ರಾಮಾಯಣಾಧಾರಿತ ಕಥಾ ಭಾಗಗಳಿಗೆ ಪೂರಕವಾದ ನೂರಕ್ಕೂ ಅಧಿಕ ಚಿತ್ರಗಳನ್ನು ರಚಿಸಿದ್ದಾರೆ.

ಚಿತ್ರಕಲೆಯಲ್ಲಿ ಮಾತ್ರ ತನ್ನ ಆಸಕ್ತಿಯನ್ನು ಸೀಮಿತಗೊಳಿಸದೆ ಯೋಗ ಮತ್ತು ಸಂಗೀತ ಕ್ಷೇತ್ರಗಳಲ್ಲಿಯೂ ಆಸಕ್ತಿಯನ್ನು ಹೊಂದಿರುವ ಶ್ರೀಲಕ್ಷ್ಮೀ ಎಂಟು ಮತ್ತು ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ೨ ಬಾರಿ ರಾಜ್ಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆ ಯಾದ ಹೆಗ್ಗಳಿಕೆ ಇವರದ್ದು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದಾರೆ. ಅಂತರಶಾಲಾ ಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೆಮಿಫೈನಲ್, ಫೈನಲ್ ಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಕವರ್ ಸಾಂಗ್ ಹಾಡಲು ಅವಕಾಶ ಲಭಿಸಿದೆ.
ಪ್ರಸ್ತುತ ವಿದ್ಯಾ ಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯಾ, ಕಾಸರಗೋಡಿನಲ್ಲಿ 10 ನೇ ತರಗತಿ ವ್ಯಾಸಂಗ ಮಾಡ್ತುತ್ತಿರುವ ಶ್ರೀಲಕ್ಷ್ಮಿಯಿಂದ ಇನ್ನಷ್ಟು ಅದ್ಬುತವಾದ ಚಿತ್ರಗಳು ಹೊರಹೊಮ್ಮಲಿ, ಗುರು ಗೋಮಾತೆಯರ ಅನುಗ್ರಹದಿಂದ ಉಜ್ವಲ ಭವಿಷ್ಯ ಇವರದಾಗಲಿ ಎಂಬುದೇ ನಮ್ಮ ಶುಭಹಾರೈಕೆ…

– ಭಾವನಾ ಡಿ. ವಿ
ದುಗ್ಗಿನಕೊಡ್ಲು.

Author Details


Srimukha

Leave a Reply

Your email address will not be published. Required fields are marked *