ರಾಜ್ಯಮಟ್ಟದಲ್ಲಿ ಮಿಂಚಿದ ಪ್ರತಿಭೆ – ಪುಟಾಣಿ ಸಂವೃತಾ

ಅಂಕುರ

ನಮ್ಮ ಸನಾತನ ಧರ್ಮದಲ್ಲಿ ಅಗಾಧವಾದ, ಮಾನವರಾಶಿಯ ಬದುಕಿಗೆ ಅತ್ಯಂತ ಅಗತ್ಯವಾದ ಅಪಾರವಾದ ವಿಚಾರಗಳಿವೆ ಎಂಬುದನ್ನು ಅರಿತವರು ಬಹಳ ಕಡಿಮೆ ಮಂದಿ. ಅದನ್ನು ನಮ್ಮ ಬೊಗಸೆಯಲ್ಲಿ ಹಿಡಿಯುವಷ್ಟಾದರೂ ಮೊಗೆಯಬೇಕೆಂಬ ಮನಸ್ಸಿರುವವರು, ಮುಂದಿನ ಪೀಳಿಗೆಗೆ ವರ್ಗಾಯಿಸುವ ಪ್ರಯತ್ನ ಮಾಡಬೇಕೆಂಬ ಹಂಬಲ ಇರುವವರು ಇನ್ನೂ ಕಡಿಮೆ. ಅಂತಹ ಒಂದು ಉತ್ತಮ ಮನೋಭಾವ ಇರುವ ದಂಪತಿಗಳಿಂದಲಾಗಿ ಭಗವದ್ಗೀತೆಯೆಂಬ ಅಮೃತಧಾರೆಯನ್ನು ತನ್ನ ನಾಲಗೆಯ ತುದಿಯಲ್ಲಿ ಕುಣಿಸುವ ಪ್ರತಿಭೆಯಾಗಿ ಪುಟಾಣಿ ಸಂವೃತಾ ಮೂಡಿಬಂದಿದ್ದಾಳೆ.

ಶ್ರೀಕೃಷ್ಣ ಭಗವಾನನು ಅರ್ಜುನನೆಂಬ ಓರ್ವ ಕ್ಷತ್ರಿಯನಿಗೆ ಉಪದೇಶಿಸಿದನು ಎಂಬುದಾಗಿ ಮೇಲ್ನೋಟಕ್ಕೆ ಕಂಡರೂ ಈ ಭೂಮಿಯ ಮೇಲೆ ಹುಟ್ಟಿಬಂದ ಪ್ರತಿಯೊಬ್ಬರಿಗೂ ಕ್ರಿಯಾಶೀಲರಾಗಿ ಬದುಕುವುದಕ್ಕೆ ಅಗತ್ಯವಾದುದನ್ನೆಲ್ಲ ತನ್ನ ಗೀತಾಮೃತದಲ್ಲಿ ತುಂಬಿ ಹರಿಸಿದ್ದಾನೆ ಎನ್ನುವ ಸತ್ಯವನ್ನು ಅರಿತವರಿಗೆ ಅದು ಅತ್ಯಂತ ಪ್ರಯೋಜನಕಾರಿಯಾಗುತ್ತದೆ. ಅಂತಹ ಪ್ರಜ್ಞೆ ಮೂಡಿಸುವ ಕಾರ್ಯದಲ್ಲಿ ಚಿನ್ಮಯಾ ಮಿಶನ್ ನಿರಂತರ ಕೆಲಸಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಆದ್ದರಿಂದಲೇ ಬೇರೆಬೇರೆ ವಯೋಮಾನದವರಿಗಾಗಿ ಭಗವದ್ಗೀತಾ ಕಂಠಪಾಠದಂತಹ ಸ್ಪರ್ದೆಗಳನ್ನು ನಡೆಸುತ್ತದೆ.

ಹವ್ಯಕ ಮುಳ್ಳೇರಿಯ ಮಂಡಲಾಂತರ್ಗತ ಕಾಸರಗೋಡು ವಲಯದ ತಂಡ್ರಂಪಾರೆ ಘಟಕದ ಪೇರಿಯ ನಿವಾಸಿಗಳಾದ ಶ್ರೀ ಗಣೇಶ್ ಭಟ್ ಮತ್ತು ಸ್ವಾತಿ ದಂಪತಿಗಳಿಗೆ ತಮ್ಮ ಮಗುವಿನ ಮೂಲಕ ಗೀತಾಮೃತಧಾರೆ ಮುಂದಿನ ಪೀಳಿಗೆಗೆ ಹರಿದು ಹೋಗಬೇಕೆಂಬ ಬಯಕೆಯುಂಟಾದುದರಿಂದ ಕುಮಾರಿ ಸಂವೃತಾಳಿಗೆ ಅಂತಹ ಒಂದು ತರಬೇತಿಯನ್ನು ನೀಡುವ ವ್ಯವಸ್ಥೆ ಮಾಡಿದ್ದಾರೆ. ಅಪ್ರತಿಮ ಪ್ರತಿಭೆಯಾದ ಕುಮಾರಿ ಸಂವೃತಾ ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾಳೆ. ಕೇವಲ ಐದು ವರ್ಷ ಪ್ರಾಯದವಳಾದ ಕುಮಾರಿ ಸಂವೃತಾ ಬಿಡದ ಪ್ರಯತ್ನದಿಂದಲಾಗಿ ನಿರರ್ಗಳವಾಗಿ, ಕ್ರಮಬದ್ಧವಾಗಿ ಹಾಡುವುದನ್ನು ಕರಗತಮಾಡಿಕೊಂಡಳು. ಅದು ಬೆಳೆದು ಭಗವದ್ಗೀತಾ ಕಂಠಪಾಠದ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಥಮ ಸ್ಥಾನವನ್ನು ರೂ. ಹತ್ತು ಸಾವಿರ ನಗದು ಬಹುಮಾನದೊಂದಿಗೆ ಪಡೆಯುವಲ್ಲಿಯ ವರೆಗೆ ತಲುಪಿತು. ಇದು ನಮಗೆಲ್ಲ ಮಾದರಿಯೂ ಹೌದು, ಅಭಿಮಾನದ ವಿಚಾರವೂ ಹೌದು.

ಭಗವದ್ಗೀಗೆ ಕಂಠಪಾಠವಲ್ಲದೆ ಈಕೆ ಭಾವಗೀತೆ ಗಾಯನದಲ್ಲೂ ಎತ್ತಿದ ಕೈಯಾಗಿ ಮೂಡಿಬರುತ್ತಿದ್ದಾಳೆ. ಭೂಮಿಕಾ ಪ್ರತಿಷ್ಠಾನ ಉಡುಪಮೂಲೆ ಅವರು ನಡೆಸಿದ ಭಾವಗಾಯನ ಸ್ಪರ್ಧೆಯಲ್ಲಿ ಎ ವಿಭಾಗದ ಪ್ರಥಮ ಸ್ಥಾನಕ್ಕೆ ಅರ್ಹತೆ ಪಡೆದಿದ್ದು ಸದ್ಯದಲ್ಲೇ ಪ್ರಶಸ್ತಿಯನ್ನು ಪಡೆಯಲಿದ್ದಾಳೆ. ಎಳೆಯ ವಯಸ್ಸಿನಿಂದಲೇ ಕರ್ಣಾಟಕ ಸಂಗೀತದಲ್ಲಿ ಆಸಕ್ತಳಾದ ಕುಮಾರಿ ಸಂವೃತಾ ತನ್ನ ಮೂರನೇ ವಯಸ್ಸಿನಿಂದಲೇ ವಿದುಷಿ ಶ್ರೀಮತಿ ಉಷಾಈಶ್ವರ ಭಟ್ ಅವರಲ್ಲಿ ಶಾಸ್ತ್ರೀಯ ಸಂಗೀತದ ಪ್ರಾಥಮಿಕ ಪಾಠಗಳನ್ನು ಕಲಿತುಕೊಂಡಿರುವ ಈಕೆ ಸದ್ಯ ಚಾಲಕ್ಕುಡಿಯ ವಿದುಷಿ ಚಿನ್ಮಯೀ ಮನೀಶ್ ಅವರಲ್ಲಿ ಸಂಗೀತಾಭ್ಯಾಸವನ್ನು ಮುಂದುವರಿಸುತ್ತಾ ಇದ್ದಾಳೆ. ಅದರ ಜೊತೆಗೆ ಡಾ. ಸ್ನೇಹಾ ಪ್ರಕಾಶ್ ಪೆರ್ಮುಖ ಅವರಲ್ಲಿ ಸುಗಮಸಂಗೀತವನ್ನು ಕಲಿಯುತ್ತಿದ್ದಾಳೆ.

ಸುದೀರ್ಘವಾದ ಸಂಗೀತ ಪಥದಲ್ಲಿ ಬಹಳಷ್ಟು ಸಾಧನೆಗಳಿಗೆ ಸಾಧ್ಯತೆಯನ್ನು ಬೆಳೆಯ ಸಿರಿ ಮೊಳಕೆಯಲ್ಲಿ ತೋರುತ್ತಿರುವ ಕುಮಾರಿ ಸಂವೃತಾಳ ಪ್ರತಿಭೆಯನ್ನು ಮನ್ನಿಸಿ ಈಗಾಗಲೇ ಸಿರಿಗನ್ನಡ ವೇದಿಕೆ ಮತ್ತು ಹವ್ಯಕ ಮುಳ್ಳೇರಿಯ ಮಂಡಲ ಸನ್ಮಾನಿಸಿವೆ. ಸಂಗೀತವನ್ನು ಜೀವನದ ನಾಡಿಯಾಗಿ ಸ್ವೀಕರಿಸಿದ ಈಕೆ ಶೈಕ್ಷಣಿಕವಾಗಿ ಸದಾ ಮುಂದೆ. ಚಿತ್ರಕಲೆ, ಕಸೂತಿ, ಸ್ಕೇಟಿಂಗ್ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಆಸಕ್ತಿಯನ್ನೂ ನೈಪುಣ್ಯವನ್ನೂ ಹೊಂದಿರುವ ಕುಮಾರಿ ಸಂವೃತಾಳಿಗೆ ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲಿ ಉಜ್ವಲ ಭವಿಷ್ಯ ಪ್ರಾಪ್ತವಾಗಲಿ ಎಂದು ಹಾರೈಸೋಣ.

– ಪ್ರಣತಿ ಕಡಪ್ಪು

10ನೇ ತರಗತಿ ವಿದ್ಯಾರ್ಥಿ

ಎಣ್ಮಕಜೆ ಹರೇರಾಮ

ರಾಜ್ಯಮಟ್ಟದಲ್ಲಿ ಮಿಂಚಿದ ಪ್ರತಿಭೆ – ಪುಟಾಣಿ ಸಂವೃತಾ

ನಮ್ಮ ಸನಾತನ ಧರ್ಮದಲ್ಲಿ ಅಗಾಧವಾದ, ಮಾನವರಾಶಿಯ ಬದುಕಿಗೆ ಅತ್ಯಂತ ಅಗತ್ಯವಾದ ಅಪಾರವಾದ ವಿಚಾರಗಳಿವೆ ಎಂಬುದನ್ನು ಅರಿತವರು ಬಹಳ ಕಡಿಮೆ ಮಂದಿ. ಅದನ್ನು ನಮ್ಮ ಬೊಗಸೆಯಲ್ಲಿ ಹಿಡಿಯುವಷ್ಟಾದರೂ ಮೊಗೆಯಬೇಕೆಂಬ ಮನಸ್ಸಿರುವವರು, ಮುಂದಿನ ಪೀಳಿಗೆಗೆ ವರ್ಗಾಯಿಸುವ ಪ್ರಯತ್ನ ಮಾಡಬೇಕೆಂಬ ಹಂಬಲ ಇರುವವರು ಇನ್ನೂ ಕಡಿಮೆ. ಅಂತಹ ಒಂದು ಉತ್ತಮ ಮನೋಭಾವ ಇರುವ ದಂಪತಿಗಳಿಂದಲಾಗಿ ಭಗವದ್ಗೀತೆಯೆಂಬ ಅಮೃತಧಾರೆಯನ್ನು ತನ್ನ ನಾಲಗೆಯ ತುದಿಯಲ್ಲಿ ಕುಣಿಸುವ ಪ್ರತಿಭೆಯಾಗಿ ಪುಟಾಣಿ ಸಂವೃತಾ ಮೂಡಿಬಂದಿದ್ದಾಳೆ.

ಶ್ರೀಕೃಷ್ಣ ಭಗವಾನನು ಅರ್ಜುನನೆಂಬ ಓರ್ವ ಕ್ಷತ್ರಿಯನಿಗೆ ಉಪದೇಶಿಸಿದನು ಎಂಬುದಾಗಿ ಮೇಲ್ನೋಟಕ್ಕೆ ಕಂಡರೂ ಈ ಭೂಮಿಯ ಮೇಲೆ ಹುಟ್ಟಿಬಂದ ಪ್ರತಿಯೊಬ್ಬರಿಗೂ ಕ್ರಿಯಾಶೀಲರಾಗಿ ಬದುಕುವುದಕ್ಕೆ ಅಗತ್ಯವಾದುದನ್ನೆಲ್ಲ ತನ್ನ ಗೀತಾಮೃತದಲ್ಲಿ ತುಂಬಿ ಹರಿಸಿದ್ದಾನೆ ಎನ್ನುವ ಸತ್ಯವನ್ನು ಅರಿತವರಿಗೆ ಅದು ಅತ್ಯಂತ ಪ್ರಯೋಜನಕಾರಿಯಾಗುತ್ತದೆ. ಅಂತಹ ಪ್ರಜ್ಞೆ ಮೂಡಿಸುವ ಕಾರ್ಯದಲ್ಲಿ ಚಿನ್ಮಯಾ ಮಿಶನ್ ನಿರಂತರ ಕೆಲಸಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಆದ್ದರಿಂದಲೇ ಬೇರೆಬೇರೆ ವಯೋಮಾನದವರಿಗಾಗಿ ಭಗವದ್ಗೀತಾ ಕಂಠಪಾಠದಂತಹ ಸ್ಪರ್ದೆಗಳನ್ನು ನಡೆಸುತ್ತದೆ.

ಹವ್ಯಕ ಮುಳ್ಳೇರಿಯ ಮಂಡಲಾಂತರ್ಗತ ಕಾಸರಗೋಡು ವಲಯದ ತಂಡ್ರಂಪಾರೆ ಘಟಕದ ಪೇರಿಯ ನಿವಾಸಿಗಳಾದ ಶ್ರೀ ಗಣೇಶ್ ಭಟ್ ಮತ್ತು ಸ್ವಾತಿ ದಂಪತಿಗಳಿಗೆ ತಮ್ಮ ಮಗುವಿನ ಮೂಲಕ ಗೀತಾಮೃತಧಾರೆ ಮುಂದಿನ ಪೀಳಿಗೆಗೆ ಹರಿದು ಹೋಗಬೇಕೆಂಬ ಬಯಕೆಯುಂಟಾದುದರಿಂದ ಕುಮಾರಿ ಸಂವೃತಾಳಿಗೆ ಅಂತಹ ಒಂದು ತರಬೇತಿಯನ್ನು ನೀಡುವ ವ್ಯವಸ್ಥೆ ಮಾಡಿದ್ದಾರೆ. ಅಪ್ರತಿಮ ಪ್ರತಿಭೆಯಾದ ಕುಮಾರಿ ಸಂವೃತಾ ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾಳೆ. ಕೇವಲ ವರ್ಷ ವರ್ಷ ಪ್ರಾಯದವಳಾದ ಕುಮಾರಿ ಸಂವೃತಾ ಬಿಡದ ಪ್ರಯತ್ನದಿಂದಲಾಗಿ ನಿರರ್ಗಳವಾಗಿ, ಕ್ರಮಬದ್ಧವಾಗಿ ಹಾಡುವುದನ್ನು ಕರಗತಮಾಡಿಕೊಂಡಳು. ಅದು ಬೆಳೆದು ಭಗವದ್ಗೀತಾ ಕಂಠಪಾಠದ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಥಮ ಸ್ಥಾನವನ್ನು ರೂ. ಹತ್ತು ಸಾವಿರ ನಗದು ಬಹುಮಾನದೊಂದಿಗೆ ಪಡೆಯುವಲ್ಲಿಯ ವರೆಗೆ ತಲುಪಿತು. ಇದು ನಮಗೆಲ್ಲ ಮಾದರಿಯೂ ಹೌದು, ಅಭಿಮಾನದ ವಿಚಾರವೂ ಹೌದು.

ಭಗವದ್ಗೀಗೆ ಕಂಠಪಾಠವಲ್ಲದೆ ಈಕೆ ಭಾವಗೀತೆ ಗಾಯನದಲ್ಲೂ ಎತ್ತಿದ ಕೈಯಾಗಿ ಮೂಡಿಬರುತ್ತಿದ್ದಾಳೆ. ಭೂಮಿಕಾ ಪ್ರತಿಷ್ಠಾನ ಉಡುಪಮೂಲೆ ಅವರು ನಡೆಸಿದ ಭಾವಗಾಯನ ಸ್ಪರ್ಧೆಯಲ್ಲಿ ಎ ವಿಭಾಗದ ಪ್ರಥಮ ಸ್ಥಾನದ ಪ್ರಶಸ್ತಿಯನ್ನು ಪಡೆದಿದ್ದಾಳೆ. ಎಳೆಯ ವಯಸ್ಸಿನಿಂದಲೇ ಕರ್ಣಾಟಕ ಸಂಗೀತದಲ್ಲಿ ಆಸಕ್ತಳಾದ ಕುಮಾರಿ ಸಂವೃತಾ ತನ್ನ ಮೂರನೇ ವಯಸ್ಸಿನಿಂದಲೇ ವಿದುಷಿ ಶ್ರೀಮತಿ ಉಷಾಈಶ್ವರ ಭಟ್ ಅವರಲ್ಲಿ ಶಾಸ್ತ್ರೀಯ ಸಂಗೀತದ ಪ್ರಾಥಮಿಕ ಪಾಠಗಳನ್ನು ಕಲಿತುಕೊಂಡಿರುವ ಈಕೆ ಸದ್ಯ ಚಾಲಕ್ಕುಡಿಯ ವಿದುಷಿ ಚಿನ್ಮಯೀ ಮನೀಶ್ ಅವರಲ್ಲಿ ಸಂಗೀತಾಭ್ಯಾಸವನ್ನು ಮುಂದುವರಿಸುತ್ತಾ ಇದ್ದಾಳೆ. ಅದರ ಜೊತೆಗೆ ಡಾ. ಸ್ನೇಹಾ ಪ್ರಕಾಶ್ ಪೆರ್ಮುಖ ಅವರಲ್ಲಿ ಸುಗಮಸಂಗೀತವನ್ನು ಕಲಿಯುತ್ತಿದ್ದಾಳೆ.

ಸುದೀರ್ಘವಾದ ಸಂಗೀತ ಪಥದಲ್ಲಿ ಬಹಳಷ್ಟು ಸಾಧನೆಗಳಿಗೆ ಸಾಧ್ಯತೆಯನ್ನು ಬೆಳೆಯ ಸಿರಿ ಮೊಳಕೆಯಲ್ಲಿ ತೋರುತ್ತಿರುವ ಕುಮಾರಿ ಸಂವೃತಾಳ ಪ್ರತಿಭೆಯನ್ನು ಮನ್ನಿಸಿ ಈಗಾಗಲೇ ಸಿರಿಗನ್ನಡ ವೇದಿಕೆ ಮತ್ತು ಹವ್ಯಕ ಮುಳ್ಳೇರಿಯ ಮಂಡಲ ಸನ್ಮಾನಿಸಿವೆ. ಸಂಗೀತವನ್ನು ಜೀವನದ ನಾಡಿಯಾಗಿ ಸ್ವೀಕರಿಸಿದ ಈಕೆ ಶೈಕ್ಷಣಿಕವಾಗಿ ಸದಾ ಮುಂದೆ. ಚಿತ್ರಕಲೆ, ಕಸೂತಿ, ಸ್ಕೇಟಿಂಗ್ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಆಸಕ್ತಿಯನ್ನೂ ನೈಪುಣ್ಯವನ್ನೂ ಹೊಂದಿರುವ ಕುಮಾರಿ ಸಂವೃತಾಳಿಗೆ ಶೈಕ್ಷಣಿಕ ಮತ್ತು ಇತರ ಕ್ಷೇತ್ರಗಳಲ್ಲಿ ಉಜ್ವಲ ಭವಿಷ್ಯ ಪ್ರಾಪ್ತವಾಗಲಿ ಎಂದು ಹಾರೈಸೋಣ.

– ಪ್ರಣತಿ ಕಡಪ್ಪು

10ನೇ ತರಗತಿ ವಿದ್ಯಾರ್ಥಿ

ಎಣ್ಮಕಜೆ ವಲಯ

ವಲಯ

Leave a Reply

Your email address will not be published. Required fields are marked *