ಜ್ಞಾನವೃದ್ಧಿಗೆ ಓದುವುದು ಹೇಗೆ ಪ್ರಮುಖ ಕಾರಣವೋ ಹಾಗೆ ಬರವಣಿಗೆಯೂ ಕೂಡ ಬಹಳ ಮುಖ್ಯ. ಅಂತಹ ಬರವಣಿಗೆ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿದ್ದಾರೆ ಪಂಚಮಿ.
ಕಾಸರಗೋಡು ಜಿಲ್ಲೆ, ಮಂಜೇಶ್ವರ ತಾಲೂಕಿನ ಬಾಕಿಲಪದವಿನ ವೆಂಕಟ್ರಮಣ ಭಟ್ ಮತ್ತು ಗುಣಶ್ರೀ ದಂಪತಿಯ ಸುಪುತ್ರಿ ಪಂಚಮಿ ಯುವಬರಹಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಮಟ್ಟದ ಕವಿಗೋಷ್ಠಿಗೆ ಅಧ್ಯಕ್ಷಯಾಗಿ ಆಯ್ಕೆಯಾದ ಹೆಗ್ಗಳಿಕೆ ಇವರದ್ದು.
ಎಳೆಯ ವಯಸ್ಸಿನಲ್ಲೇ ಅಂದರೆ 10 ನೇ ತರಗತಿ ಇರುವಾಗಲೇ “ಆರಾಧನೆ ” ಎಂಬ ಇವರ ಕವನ ಸಂಕಲನ ಬಿಡುಗಡೆಗೊಂಡಿದ್ದು,
ಧರ್ಮಭಾರತೀಯಲ್ಲಿ “ಯುಗಾದಿ ಸಂಭ್ರಮ “ಎಂಬ ಕವನ ಪ್ರಕಟಗೊಂಡಿದೆ.
ಹಾಗೇ ಬುಕ್ ಬ್ರಹ್ಮ ಆಯೋಜಿಸದ ಕಥೆ ಹೇಳು ಕಂದ ಎಂಬ ಕಾರ್ಯಕ್ರಮದಲ್ಲಿ ಕಥಾವಚನವನ್ನು ನಡೆಸಿಕೊಟ್ಟಿದ್ದಾರೆ. ಹಾಗೇ ಹಲವು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.
ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಿರಿಯ ಪ್ರಾಥಮಿಕ ಶಾಲಾ ಸ್ಕಾಲರ್ಷಿಪ್ ಗೆ “ಎ “ಗ್ರೇಡ್ ಪಡೆದು ಆಯ್ಕೆಯಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿಯೂ ಆಸಕ್ತಿಯನ್ನು ಹೊಂದಿರುವ ಇವರು 6 ನೇ ತರಗತಿಯಲ್ಲಿರುವಾಗ ಕರ್ನಾಟಕ ಜೂನಿಯರ್ ಗ್ರೇಡ್ ಸಂಗೀತ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕ್ರೀಡೆ, ಪ್ರತಿಭಾ ಕಾರಂಜಿ, ಶಾಂತಿವನ ಟ್ರಸ್ಟ್ ನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಓದಿನಲ್ಲೂ ಮುಂದೆ ಇರುವ ಪಂಚಮಿ ಭಾರತ ಸಂಸ್ಕೃತಿ ಪ್ರತಿಷ್ಠಾನದ ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪಠ್ಯೇತರ ಚಟುವಟಿಕೆಗಳಲ್ಲದೆ ಕಲಿಕೆಯಲ್ಲಿಯೂ ಮುಂದಿರುವ ಇವರು ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ವೈಶಿಷ್ಟ್ಯ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದು ಈ ಸಾಧನೆಗಾಗಿ 2019 ರಲ್ಲಿ ಶ್ರೀರಾಮಶ್ರಮ ಬೆಂಗಳೂರಿನಲ್ಲಿ ಪರಮಪೂಜ್ಯ ಗುರುಗಳಾದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರಿಂದ ಪ್ರತಿಭಾ ಪುರಸ್ಕಾರವನ್ನು ಮತ್ತು ಆಶೀರ್ವಾದವನ್ನು ಪಡೆದುಕೊಂಡಿರುತ್ತಾರೆ.
ಜರ್ನಲಿಸಂ ಅಥವಾ ಎಲ್. ಎಲ್. ಬಿ ಮಾಡಬೇಕೆಂಬ ಮಹದಾಸೆಯನ್ನು ಹೊಂದಿದ್ದೇನೆ ಎಂದು ಹೇಳುತ್ತಾರೆ ಪಂಚಮಿ.
ಪ್ರಸ್ತುತ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತಿಯ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಇವರಿಂದ ಇನ್ನಷ್ಟು ಸಾಧನೆ ಹೊರಹೊಮ್ಮುವತಂಗಾಲಿ ಎಂಬ ಶುಭಹಾರೈಕೆ ನಮ್ಮದು.