ರೋಲರ್ ಸ್ಕೇಟಿಂಗ್ ಹಾಕಿಯಲ್ಲಿ ಹತ್ತನೇ ವಯಸ್ಸಿನಲ್ಲೇ ಚಿನ್ನದ ಪದಕ ಗೆದ್ದ-ನಮನ್

ಅಂಕುರ

 

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೆಸರಾಂತ ಯಕ್ಷಗಾನ ಮನೆತನದಲ್ಲಿ ಜನಿಸಿದ ನಮನ್ ಯಕ್ಷಗಾನ ಕಲಾವಿದ ಹಾಗೂ ಕಾರ್ಯಕ್ರಮ ನಿರೂಪಕರಾದ ಶಾಂತರಾಮ ಕೊಂಡದಕುಳಿ ಮತ್ತು ಸಂಧ್ಯಾರವರ ಸುಪುತ್ರ.


ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ನಮನ್ ಯಲ್ಲಾಪುರದ ಪ್ರಸಿದ್ಧ ಸಂಕಲ್ಪ ಉತ್ಸವದಲ್ಲಿ ತನ್ನ ೫ನೇ ವಯಸ್ಸಿನಲ್ಲಿ ಅಜ್ಜಿಯ ಪಾತ್ರ ಮಾಡಿ ಅಲ್ಲಿ ನೆರೆದಿರುವಂತಹ ಅತಿಥಿ ಮತ್ತು ಪ್ರೇಕ್ಷಕರಿಂದ ಪ್ರಶಂಸೆಯನ್ನು ಪಡೆದಿದ್ದಾರೆ.
ತಾಲೂಕು ಮಟ್ಟದ ರಾಮಾಯಣ ಮತ್ತು ಮಹಾಭಾರತ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತನಾಗಿ ಜಿಲ್ಲಾ ಮಟ್ಟದ ಕಥೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾನೆ.
ತಾಲೂಕು ಮಟ್ಟದಲ್ಲಿ ನಡೆದ ವಿವಿಧ ಭಾಷಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.

*ಕ್ರೀಡಾ ಕ್ಷೇತ್ರದಲ್ಲಿ ನಮನ್ ಅವರ ಸಾಧನೆ*”
ಸ್ಕೇಟಿಂಗ್ ಹಾಕಿ ಬಹಳ ಪರಿಶ್ರಮ ಬೇಕಾಗಿರುವ ಕ್ರೀಡೆ. ಅಂತಹ ಅಪರೂಪದ ಕ್ರೀಡೆ
ಸ್ಕೇಟಿಂಗ್ ಹಾಕಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡು ರಾಜ್ಯ ಮಟ್ಟದಲ್ಲಿ ಉತ್ತಮವಾಗಿ ಆಟವನ್ನಾಡಿ ಚಿನ್ನದ ಪದಕವನ್ನು ಪಡೆದು ಮಾರ್ಚ್ ೩೧ ರಿಂದ ಏಪ್ರಿಲ್ ೧೧ರವರೆಗೆ ಚಂಡಿಗಢದಲ್ಲಿ ನಡೆದ ರಾಷ್ಟ್ರಮಟ್ಟದ ಚಾಂಪಿಯನ್ ಶಿಪ್ ಟೂರ್ನಮೆಂಟ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾನೆ. ಮತ್ತು ಅಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿರುತ್ತಾನೆ.

ಪ್ರಸ್ತುತ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಐದನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂಬ ಶುಭಹಾರೈಕೆ ನಮ್ಮದು.

 

Author Details


Srimukha

Leave a Reply

Your email address will not be published. Required fields are marked *