ಬರವಣಿಗೆ ಕ್ಷೇತ್ರದಲ್ಲೊಂದು ಭರವಸೆಯ ಬೆಳಕು – ಶೋಭಿತ್

ಅಂಕುರ

ಬರವಣೆಗೆ ಮೂಲಕ ಛಾಪು ಮೂಡಿಸುತ್ತಿರುವ ಎಂ. ಎಸ್ ಶೋಭಿತ್. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮೂಡ್ಕಣಿಯ ಸತೀಶ್ ಈಶ್ವರ ಹೆಗಡೆ ಮತ್ತು ತಾಯಿ ಸುನೀತಾ ಸತೀಶ್ ಹೆಗಡೆ ದಂಪತಿಯ ಸುಪುತ್ರರಾಗಿರುವ ಇವರು ಯುವ ಬರಹಗರನಾಗಿ ಹೊರಹೊಮ್ಮಿದ್ದಾರೆ.

ಎಳೆಯ ವಯಸ್ಸಿನಿಂದಲೇ ಬರವಣಿಗೆ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಶೋಭಿತ್ 2018 ಮಾರ್ಚ್ 19 ರಂದು ವಿಜಯವಾಣಿ ದಿನಪತ್ರಿಕೆಯ ‘ಸಂಸ್ಕೃತಿ ‘ಪುರವಣೆಯಲ್ಲಿ ಪ್ರಕಟವಾದ “ಕರುಣೆಯ ಕಡಲು ಶ್ರೀಧರ ಸ್ವಾಮಿಗಳು “ಲೇಖನದ ಮೂಲಕ ಬರವಣಿಗೆಯ ಮೊದಲ ಹೆಜ್ಜೆ ಗುರುತು ಮೂಡಿಸಿದರು.
ಹೊನ್ನಾವರದ ಸೇಂಟ್ ಥಾಮಸ್ ಹೈಸ್ಕೂಲ್ ನ ಸಭಾಂಗಣದಲ್ಲಿ 2019 ಜನವರಿ 20 ರಂದು ನಡೆದ ಹಿರಿಯ ಸಾಹಿತಿ ಸುಮುಖಾನಂದ
ಜಲವಳ್ಳಿ ಇವರ ಸಾರಥ್ಯದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾದ ಹೆಗ್ಗಳಿಕೆ ಇವರದ್ದು.
ಕೆಕ್ಕಾರಿನ ಶ್ರೀರಘೂತ್ತಮ ಮಠದಲ್ಲಿ ನಡೆದ ಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳ 72 ನೇ ಆರಾಧನಾ ಮಹೋತ್ಸವದ ಸಮಾರಂಭದಲ್ಲಿ ಇವರಿಗೆ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ವಿಶೇಷ ಪುರಸ್ಕಾರ ಪ್ರಾಪ್ತವಾಗಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಬುಕ್ ಬ್ರಹ್ಮ ಏರ್ಪಡಿಸಿದ್ದ ನನ್ನ ನೆಚ್ಚಿನ ಪುಸ್ತಕ ಸ್ಪರ್ಧೆ ಗೆ ಮಧ್ಯಘಟ್ಟ ಕಾದಂಬರಿಯ ಬಗ್ಗೆ ತನ್ನ ಅನಿಸಿಕೆ ಬರೆದು ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ಹಾಗೆ ಬಾಲಪುರಸ್ಕಾರ ಎಂಬ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ರಾಜ್ಯಾದಂತ್ಯ ಹೆಸರು ಗಳಿಸಿರುವ ವಿಜಾವಾಣಿ, ಪ್ರಜಾವಾಣಿ, ಹೊಸದಿಗಂತ, ವಿಶ್ವವಾಣಿ, ವಿಕ್ರಮ,
ಜನಮಾಧ್ಯಮ, ಕರಾವಳಿ ಮುಂಜಾವು, ಕಡಲವಾಣಿ, ಹಸಿರುವಾಸಿ, ನಾಗರಿಕ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿದೆ ಎನ್ನುವುದು ಸಂತಸದ ವಿಷಯ.
ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪತ್ರಿಕೆಗಳಾದ ಕರಾವಳಿ ಮುಂಜಾವು, ಜನಮಾಧ್ಯಮ ಪತ್ರಿಕೆಗಳಲ್ಲಿ ಹವ್ಯಾಸಿ ವರದಿಗಾರನಾಗಿ ಕಾರ್ಯನಿರ್ವವಹಿಸಿದ್ದಾರೆ.
ಪತ್ರಿಕೆಗಳಷ್ಟೇ ಅಲ್ಲದೆ ದೃಶ್ಯ ಮಾಧ್ಯಮಗಳಾದ ಕೆನರಾ ಪ್ಲಸ್ ನ್ಯೂಸ್, ಕನ್ನಡ ಟಿ. ವಿ ಗಳಲ್ಲಿ, ಆನ್ಲೈನ್ ಪತ್ರಿಕೆಗಳಾದ ಸತ್ವಾಧಾರ ನ್ಯೂಸ್, ಸುದ್ದಿಕನ್ನಡ,, ಕನ್ನಡವಾಣಿ, ಸಿಂಚನ ಟಿ. ವಿಯಲ್ಲಿ ಕೆಲವು ವರದಿ ಪ್ರಕಟವಾಗಿದೆ.
ಕೊರೋನಾದಿಂದ ಜರುಗಿದ ಲಾಕ್ ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು ಹಲವು ಪತ್ರಿಕೆಗಳಿಗೆ ತಮ್ಮ ಲೇಖನವನ್ನು ನೀಡಿದ್ದಾರೆ.
ಪ್ರತಿವಾರ ವಿದ್ಯಾರ್ಥಿ ಪ್ರತಿಭೆಯನ್ನು ಪರಿಚಯಿಸುವ ಅಂಕಣ ಅಂಕುರವನ್ನು ಶ್ರೀಮುಖಕ್ಕಾಗಿ -ಇದೀಗ ಸುಮಾರು 37 ವಾರಗಳ ಕಾಲ ಬರೆದಿರುತ್ತಾರೆ.
ಪ್ರಸ್ತುತ ಹೊನ್ನಾವರದ ಎಸ್. ಡಿ. ಎಂ. ಪದವಿಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಬರಹಗಳು ಹೊರಹೊಮ್ಮಿ ಉತ್ತಮ ಬರಹಗಾರನಾಗಲಿ ಎಂಬ ಶುಭಹಾರೈಕೆ ನಮ್ಮದು.

Author Details


Srimukha

Leave a Reply

Your email address will not be published. Required fields are marked *