ಅಸಾಧಾರಣ ಸಾಧನೆಗೈಯ್ಯುತ್ತಿರುವ ಚಿತ್ರಕಲಾವಿದೆ ಆತ್ಮಿಕ

ಅಂಕುರ

 

ಒಂದೊಂದು ವರ್ಷದಲ್ಲಿ ಒಂದೊಂದು ಸಾಧನೆಯ ಮೆಟ್ಟಲೇರುತ್ತಿರುವ ಕಾಸರಗೋಡು ಜಿಲ್ಲೆಯ ಸಿದ್ದನಕೆರೆಯ ಸಕಲೇಶಪುರ ದಲ್ಲಿ ವಿಜ್ಞಾನಿ ಯಾಗಿರುವ ಡಾ ಶ್ರೀಕೃಷ್ಣ ಮತ್ತು ಪ್ರಸನ್ನ ಕುಮಾರಿರವರ ಸುಪುತ್ರಿ ಆತ್ಮಿಕ ಚಿತ್ರಕಲಾವಿದೆಯಾಗಿ ನಮ್ಮ ಮುಂದೆ ಇದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ತನ್ನ ಆರನೇ ವಯಸ್ಸಿನ್ನಲ್ಲೇ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.. ಹಾಸನದಲ್ಲಿ ನಡೆದಂತಹ ರಾಜ್ಯಮಟ್ಟದ ಶಾಂತಲಾ ಫೈನ್ ಆರ್ಟ್ಸ್ ಚಿತ್ರಕಲ ಸ್ಪರ್ಧೆಯಲ್ಲಿ ತೃತೀಯ ಸ್ಥಾನ,ಹಾಗು ಸುತ್ತೂರಿನಲ್ಲಿ ನಡೆದಂತಹ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದು
ನಂತರರದ ವರ್ಷಗಳಲ್ಲಿ ಜಿಲ್ಲಾ ಮಟ್ಟದ ಚಿಂತನ ಚಿತ್ರಕಲ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದು,ಶಾಂತಲಾ ಫೈನ್ ಆರ್ಟ್ಸ್ ರಾಜ್ಯ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಹಾಗು ಚಿಂತನ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಆರನೇ ತರಗತಿಯಲ್ಲಿ ಕಲಿಯುತ್ತಿರುವಾಗ ರಾಷ್ಟ್ರಮಟ್ಟದ ರಂಗೋತ್ಸವ ಆಚರಣೆಯಲ್ಲಿಯೂ ಪಾಲಗೊಂಡಿದ್ದಾರೆ.

ರಾಜ್ಯ ಮಟ್ಟದ ಚಿತ್ರಕಲ ಸ್ಪರ್ಧೆ, ಪುತ್ತೂರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸತತವಾಗಿ 1ನೇ ತರಗತಿಯಿಂದ 10 ನೇ ತರಗತಿವರೆಗೂ ಸ್ಥಳದಲ್ಲೇ ಚಿತ್ರಬಿಡಿಸಿ ವಿವಿಧ ಬಹುಮಾನಗಳನ್ನು ಪಡೆದು ತನ್ನ ಸಮರ್ಥ್ಯವನ್ನು ನಿರೂ ಪಿಸಿದ್ದಾಳೆ.
ಹಾಗು ಲಯನ್ಸ್ ಜಿಲ್ಲಾ ಮಟ್ಟದ ಚಿತ್ರಕಲ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ 7 ನೇ ತರಗತಿಯಲ್ಲಿ ಜಿಲ್ಲಾ ಮಟ್ಟದ ಬಾಲ ಕಲಾಶ್ರೀ ಯ ಚಿತ್ರಕಲಾ ಸ್ಪರ್ಧೆ ಯಲ್ಲಿ ದ್ವಿತಿಯ ಸ್ಥಾನ ಗಳಿಸಿದ್ದಾರೆ ಆತ್ಮಿಕ.
ಶಾಂತಿವನ ಟ್ರಸ್ಟ್ ಶ್ರೀ ಧರ್ಮಸ್ಥಳ ವತಿಯಿಂದ ನಡೆದ ಗೋಮಾತೆ ಮತ್ತು
ಸಮಾಜದಾರಿತ ವಿಷಯದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸ್ಥಾನವನ್ನು ತನ್ನದಾಗಿಸಿಕೊಂಡು ಡಾ ||ವೀರೇಂದ್ರ ಹೆಗ್ಗಡೆಯವರಿಂದ ಸನ್ಮಾನಿತಾಳಗಿ ಫೈನ್ ಆರ್ಟ್ಸ್ ಪಠ್ಯಭ್ಯಾಸವನ್ನು ಮುಂದುವರೆಸಲು ವಿದ್ಯಾರ್ಥಿ ವೇತನ ಪಡೆಯುವುದರ ಮೂಲಕ ತಂದೆ -ತಾಯಿಗೆ ಕೀರ್ತಿ ತಂದ ಸಂತಸ ಆತ್ಮಿಕರದ್ದು.ನಂತರ ಪಬ್ಲಿಕ್ ಲೈಬ್ರರಿ ಸಕಲೇಶಪುರ ಚಿತ್ರ ಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಾಜೀವ ಇನ್ಸ್ಟಿಟ್ಯೂಷನ್, ಜಿಲ್ಲಾಮಟ್ಟದ ಲ್ಲಿ save girl child ಎಂಬ ವಿಷಯ ಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

*” ವಿವಿಧ ವಿಷಯಧಾರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ*”

Indian scientists ಎಂಬ ವಿಷಯಧಾರಿತ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಗಳಿಸಿ 9 ನೇ ತರಗತಿಯಲ್ಲಿ conservation of energy spot ಎಂಬ ವಿಷಯಧಾರಿತ ರಾಜ್ಯಮಟ್ಟದ ಸ್ಪರ್ಧೆ, ಬೆಂಗಳೂರು ಹಾಗು my concern India ಎಂಬ ಜಿಲ್ಲಾ ಮಟ್ಟದ ಲ್ಲಿ ಸಮಾಧಾಕರ ಬಹುಮಾನ, ಹೊಸದಿಗಂತದವರು ಮಂಗಳೂರಿನಲ್ಲಿ ನಡೆಸಿದ ರಾಜ್ಯಮಟ್ಟದ modi in the minds of children ಎಂಬ ವಿಷಯದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.ಮಕ್ಕಳ ಮನದಲ್ಲಿ ಮೋದಿ, ಭಾರತೀಯ ವಿಜ್ಞಾನಿಗಳು, ಶಕ್ತಿ ಉಳಿತಾಯ, ಜಲ ಸಂರಕ್ಷಣೆ, ಗೋಮಾತೆ ಮತ್ತು ಸಮಾಜ, ದೇಶಪ್ರೇಮ, ರಸ್ತೆ ಸುರಕ್ಷತೆ, ಪರಿಸರ ಸಂರಕ್ಷಣೆ, ಕೋವಿಡ್ ಸಂದರ್ಭದಲ್ಲಿ ಜನಜೀವನ ಹೀಗೆ ಅನೇಕ ವಿಷಯಗಳಿಗೆ ಚಿತ್ರ ಬಿಡಿಸಿ ಬಹುಮಾನ ಪಡೆದುಕೊಂಡಿದ್ದಾರೆ.
5 ನೇ ತರಗತಿಯಿಂದ 9ನೇ ತರಗತಿ ಅವಧಿಯಲ್ಲಿ ಸುಮಾರು 5 ಕ್ಕೂ ಹೆಚ್ಚು ಬಾರಿ conservation of Energy ವಿಷಯದ ಬೇರೆ ಬೇರೆ ಉಪವಿಷಯಗಳಿಗೆ ಚಿತ್ರ ಬಿಡಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ವಿವಿಧ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾಳೆ.

*”ಇತರ ಕ್ಷೇತ್ರದಲ್ಲೂ ಒಂದು ಹೆಜ್ಜೆ ಮುಂದಿರುವ ಆತ್ಮಿಕ*”

ಚಿತ್ರಕಲೆಯಲ್ಲಿ ಅಷ್ಟೇ ಅಲ್ಲದೆ ಇನ್ನ ಇತಿರ ಕ್ಷೇತ್ರದಲ್ಲೂ ಯಶಸ್ಸಿನ ಮೆಟ್ಟಿಲೇರುತ್ತಿರುವ ಆತ್ಮಿಕ .ಪೂಡರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದಂತಹ ಜಿಲ್ಲಾ ಮಟ್ಟದ ಕಥೆ ಹೇಳುವ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ, ತಾಲೂಕು ಮಟ್ಟದ ಓಪನ್ ಚೆಸ್ ಟ್ರುನ್ಮೆಂಟ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದರೆ ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ ನವರು ಏರ್ಪಡಿಸಿದಂತಹ ವಚನಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಸಮಾಧಾನಕರ ಬಹುಮಾನ ಗಳಿಸಿದ್ದಾರೆಹಾಗೇ ಇನ್ನ ಇತರ ಸಂಗೀತ ಸ್ಪರ್ಧೆಯಲ್ಲೂ ಭಾಗವಹಿಸಿ ಜಯಭೇರಿ ಭಾರಿಸದ್ದರೆ. ಓದಿನಲ್ಲೂ ಮುಂದೆ ಇರುವ ಆತ್ಮಿಕ sslc ಯಲ್ಲಿ ಸಿಬಿಎಸಿ ಯಲ್ಲಿ 96%, NSTSE ವಿಜ್ಞಾನ ಮತ್ತು ಗಣಿತ ಪರೀಕ್ಷೆಯಲ್ಲಿ ರಾಜ್ಯ ಮಟಕ್ಕೆ ಎರಡನೇ ರಾಂಕ್ ಪಡೆದು ರಾಷ್ಟ್ರ ಮಟ್ಟದಲ್ಲಿ 126 ನೇ ರಾಂಕ್ ಪಡೆದು, ನವೋದಯ ಪ್ರಕಾಶನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ, lic ಅವರು ನಡೆಸಿದಂತ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ತಾಲೂಕು ಮಟ್ಟದ ಟ್ಯಾಲೆಂಟ್ ideal play abascus ನಲ್ಲಿ ಪ್ರಥಮ ಸ್ಥಾನ ಗಳಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನರ್ಹ ಸಾಧನೆಗೈದ್ದಿದ್ದಾರೆ.
ಇವರ ಸಾಧನೆಯನ್ನು ಪರಿಗಣಿಸಿ ರಾಮಚಂದ್ರ ಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು 2017 ಮಾಣಿಮಠ, ಪುತ್ತೂರು ಹಾಗು 2015 ರಲ್ಲಿ ಗಿರಿನಗರ ಬೆಂಗಳೂರಿನಲ್ಲಿ ಎರಡು ಬಾರಿ ಪ್ರತಿ ಪುರಸ್ಕಾರ ನೀಡಿ ಆರ್ಶಿವಾದಿಸಿದ್ದಾರೆ.
ಪ್ರಸ್ತುತ ಸಿಫಲ್ ಕಾಲೇಜಿನಲ್ಲಿ
ವ್ಯಾಸಂಗ ಮಾಡುತ್ತಿರುವ ಆತ್ಮಿಕರ ಯಶಸ್ಸಿನ ಹಾದಿ ಇನ್ನಷ್ಟು ಸುಗಮವಾಗಿ ಸಾಗಲಿ ಎಂಬ ಶುಭಹಾರೈಕೆ ನಮ್ಮದು.

 

Leave a Reply

Your email address will not be published. Required fields are marked *