ಸಂಗೀತ ಮತ್ತು ಯಕ್ಷಗಾನ – ಸಾಧನೆಯ ಹಾದಿಯಲ್ಲಿ ಯುವ ಕಲಾವಿದೆ ನೇಹಾ

ಅಂಕುರ

 

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಧಾರೇಶ್ವರದ ಸುರೇಶ ಜೆ ಭಟ್ಟ ಮತ್ತು ಮಮತಾ ಸುರೇಶ ಭಟ್ಟರವರ ಸುಪುತ್ರಿ ನೇಹಾ ಸುರೇಶ ಭಟ್ಟ ಗಾಯನ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ.
ವಿವಿಧ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವ ನೇಹಾ ಭಟ್ಟ ಒಬ್ಬ ಅಪ್ಪಟ ಪ್ರತಿಭಾವಂತೆ. ಎಳೆಯ ವಯಸ್ಸಿನಿಂದಲೇ ಅಂದರೆ 2ನೇ ತರಗತಿಯಿಂದ 7ನೇ ತರಗತಿಯವರಗೆ ನಿರಂತರವಾಗಿ ಪ್ರತಿವರ್ಷವೂ ಪ್ರತಿಭಾ ಕಾರಂಜಿಯಲ್ಲಿ ಅಭಿನಯಗೀತೆ, ಕನ್ನಡ ಕಂಠಪಾಠ, ಲಘುಸಂಗೀತ, ಜಾನಪದ ನೃತ್ಯ, ದೇಶಭಕ್ತಿ ಗೀತೆ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದು, ಅಭಿನಯ ಗೀತೆ ಸ್ಪರ್ಧೆಯಲ್ಲಿ ಸತತವಾಗಿ 3 ವರ್ಷ ಮತ್ತು ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ 2 ವರ್ಷ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಹೆಗ್ಗಳಿಕೆ ನೇಹಾವರದ್ದು.
ಬರವಣಿಗೆ ಕ್ಷೇತ್ರದಲ್ಲೂ ಆಸಕ್ತಿಯನ್ನು ಹೊಂದಿರುವ ನೇಹಾ ಕುಮಟಾದ ಹೊಳೆಗದ್ದೆಯಲ್ಲಿ ನಡೆದಂತಹ ತಾಲೂಕು ಮಟ್ಟದ ನಾಲ್ಕನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಮಕ್ಕಳ ಕವಿಗೋಷ್ಠಿಗೆ ಆಯ್ಕೆಗೊಂಡಿದ್ದಾರೆ.
ಶಾಸ್ತ್ರೀಯ ಸಂಗೀತದ ಜೂನಿಯರ್ ಪರೀಕ್ಷೆಯನ್ನು ಉತ್ತೀರ್ಣಗೊಂಡ ನೇಹಾ 9 ಮತ್ತು 10 ನೇ ತರಗತಿಯಲ್ಲಿ ಪ್ರೌಢ ಶಾಲಾ ಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಿ 9 ನೇ ತರಗತಿಯಲ್ಲಿ ಭಾವಗೀತೆಯಲ್ಲಿ ಹಾಗೂ 10 ನೇ ತರಗತಿಯಲ್ಲಿ ಜಾನಪದ ಗೀತೆ ಗೆ ರಾಜ್ಯಮಟ್ಟಕ್ಕೆ ಸ್ಪರ್ಧಿಯಾಗಿ ಆಯ್ಕೆಗೊಂಡಿದ್ದಾರೆ.


ರವಿರಾಜ ಸ್ಪೋಟ್ಸ್ ಕ್ಲಬ್ (ರಿ )ಕುಮಟಾ, ಡ್ಯಾನ್ಸ್ ಧಮಕಾ 2012 ರ 4 ನೇ -7ನೇ ವಿಭಾಗದ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ,2015-2016 ರಲ್ಲಿ ನಡೆದ ಅಮೃತಧಾರಾ ಗೋಶಾಲೆ, ಹೊಸಾಡಿನಲ್ಲಿ ನಡೆದ ಗೋ ಉತ್ಸವದ ಗೋಗೀತಾ ಗಾಯನ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ, 2017 ರಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ )ಬೆಂಗಳೂರು ಹಾಗೂ ಶ್ರೀ ರಾಮಚಂದ್ರಪುರ ಮಠದ ಸಂಘಟನೆಯ ಕುಮಟಾ ಹಾಗೂ ಹೊನ್ನಾವರ ಹವ್ಯಕ ಮಂಡಲಗಳ ಸಹಯೋಗದಲ್ಲಿ ನಡೆದ ಪ್ರತಿಬಿಂಬ ಉತ್ತರ ಭಕ್ತಿಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತಿಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ಯಕ್ಷಗಾನವನ್ನು ಶ್ರೀ ಉಮೇಶ್ ಭಟ್ಟ ಅವರಿಂದ ಕಲಿತು
ಸುಧನ್ವಾರ್ಜುನ ದಲ್ಲಿ ಪ್ರದ್ಯುಮ್ನ, ಸುಧನ್ವ ಮತ್ತು ಅರ್ಜುನ,
ಲವ_ಕುಶ ದಲ್ಲಿ ಲವ ಮತ್ತು ಕುಶ, ಕೃಷ್ಣಾರ್ಜುನ ದಲ್ಲಿ ಕೃಷ್ಣ
,ಅಭಿಮನ್ಯು ಕಾಳಗ ದಲ್ಲಿ ಕರ್ಣ,
ಭೀಷ್ಮ ವಿಜಯ ದಲ್ಲಿ ಅಂಬಾಲಿಕೆ ಹೀಗೆ ಹಲವು
ಪಾತ್ರಗಳನ್ನು ಮಾಡಿದ್ದಾರೆ.

ಇಂಗ್ಲೀಷ್ ಶಿಕ್ಷಕಿಯಾಗ ಬೇಕು ಹಾಗೆ ಜೊತೆಯಲ್ಲಿ ಸಂಗೀತದಲ್ಲಿ ವಿದ್ವತ್ ಮಾಡಬೇಕೆಂಬ ಮಹದಾಸೆಯನ್ನು ಹೊಂದಿದ್ದೇನೆ ಎನ್ನುತ್ತಾರೆ ನೇಹಾ.

ಪ್ರಸ್ತುತ ಹೊನ್ನಾವರದ ಎಸ್. ಡಿ
ಎಮ್. ಕಾಲೇಜ್ ನಲ್ಲಿ ಪ್ರಥಮ ಬಿ. ಎ ಸಂಗೀತ (ಆಪ್ಷನಲ್ ಇಂಗ್ಲೀಷ್ )ವನ್ನು ವ್ಯಾಸಂಗ ಮಾಡುತ್ತಿರುವ ನೇಹಾವರು ಇನ್ನಷ್ಟು ಸಾಧನೆಯ ಮೆಟ್ಟಿಲುರುವಂತಾಗಲಿ ಎಂಬ ಶುಭ ಹಾರೈಕೆ ನಮ್ಮದು.

Author Details


Srimukha

Leave a Reply

Your email address will not be published. Required fields are marked *