ಮಲೆನಾಡಿನ ರಾಷ್ಟೀಯ ಚೆಸ್ ಆಟಗಾರ್ತಿ ಮನಸ್ವಿನಿ ಆರ್

ಅಂಕುರ

ಚೆಸ್ ನಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಸಾಗರದ ಮನಸ್ವಿನಿ ಮಲೆನಾಡಿನ ಶಿವಮೊಗ್ಗ ಜೆಲ್ಲೆಯ ಸಾಗರ ತಾಲೂಕಿನ ರಾಘವೇಂದ್ರ ಎಮ್. ಹೆಗಡೆ ಮತ್ತು ಪ್ರಮೋದ ಆರ್ ದಂಪತಿಯ ಸುಪುತ್ರಿ.
ತನ್ನ ಏಳನೇ ತರಗತಿಯಲ್ಲಿ ಚೆಸ್ ಆಟಕ್ಕೆ ಪಾದಾರ್ಪಣೆ ಮಾಡಿದ ಇವರು ಹಿಂದುರುಗಿ ನೋಡದೆ ಯಶಸ್ಸಿನ ಹಾದಿಯತ್ತ ಸಾಗುತ್ತಿದ್ದಾರೆ ಎನ್ನುವುದು ಸಂತಸದ ವಿಷಯ.


ಮೊದಲು ಚೆಸ್ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ಮನಸ್ವಿನಿ ನಂತರ ಸತತವಾಗಿ 3 ವರ್ಷ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಗೊಂಡಿದ್ದಾರೆ.
2017-18 ರಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ, ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕದೊಂದಿಗೆ ಜಯಭೇರಿ ಭಾರಿಸಿದ್ದಾರೆ.
ಇವರ ಗಮನರ್ಹ ಸಾಧನೆಯನ್ನು ಗುರುತಿಸಿ 2018 ರಲ್ಲಿ ಹೊಸನಗರದ ಶ್ರೀ ರಾಮಚಂದ್ರಪುರ ಮಠದಲ್ಲಿ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರಿಂದ ಪ್ರತಿಭಾ ಪುರಸ್ಕಾರವನ್ನು ಹಾಗೂ ಆಶೀರ್ವಾದವನ್ನು ಪಡೆದಿದ್ದಾರೆ.
2019-20 ನೇ ಸಾಲಿನಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಆಂಧ್ರ ಪ್ರದೇಶದಲ್ಲಿ ನಡೆದ ಚೆಸ್ ಪಂದ್ಯವಳಿಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದು, ಶಿವಮೊಗ್ಗ, ಸಾಗರ, ಭದ್ರಾವತಿ, ಮೈಸೂರು, ಕೋಣಂದೂರು, ದಾವಣಗೆರೆ ಹೀಗೆ ಮುಂತಾದ ಕಡೆಯಲ್ಲಿ ಸ್ಪರ್ಧಿಸಿ ತನ್ನ ಪ್ರತಿಭೇಯನ್ನು ಪ್ರದರ್ಶಿಸಿ ಹಲವು ಬಹುಮಾನವನ್ನು ಪಡೆದುಕೊಂಡ ಹೆಗ್ಗಳಿಕೆ ಇವರದ್ದು.
ಚೆಸ್ ಮತ್ತು ಓದಿನಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಬೇಕು ಹಾಗೂ ನನಗೆ ಕೆಲಸ ಸಿಕ್ಕಿದ ನಂತರ ಕೈ ಲಾದಷ್ಟು ಬಡ ವಿದ್ಯಾರ್ಥಿಗಳಿಗೆ ಓದಲು ಸಹಾಯ ಹಸ್ತ ನೀಡಬೇಕೆಂಬುದು ನನ್ನ ಗುರಿ ಎನ್ನುತ್ತಾರೆ ಮನಸ್ವಿನಿ.
ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ದ್ವಿತಿಯ ಬಿ. ಎಸ್. ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾಗರದ ಮನಸ್ವಿನಿಯಿಂದ ಇನ್ನಷ್ಟು ಸಾಧನೆಗಳು ಹೊರಹೊಮ್ಮಿ ರಾಜ್ಯಕ್ಕೆ ಕೀರ್ತಿ ತರುವಂತಗಾಲಿ ಎಂಬ ಆಶಯ ನಮ್ಮದು.

Author Details


Srimukha

Leave a Reply

Your email address will not be published. Required fields are marked *