ಸಿದ್ಧಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಿಧಿಕುಂಭ

ದೇವಾಲಯ

ಗಂಗಾಪುರ ಗ್ರಾಮದ ಶ್ರೀ ರಾಘವೇಂದ್ರ ಗೋಆಶ್ರಮದ ಆವರಣದಲ್ಲಿರುವ ಶ್ರೀ ಸಿದ್ಧಾಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಬುಧವಾರ ನಿಧಿಕುಂಭ ಕಾರ್ಯಕ್ರಮ ನಡೆಯಿತು.

ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳ ದಿವ್ಯ ಅನುಗ್ರಹದಲ್ಲಿ ಸೌರ ಯುಗಾದಿಯ ಪರ್ವ ಕಾಲದಲ್ಲಿ ವೇ. ಮೂ. ಸುಕುಮಾರ್ ಜೋಯಿಸ ಕರುವಜೆ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಶ್ರೀ ಸಿದ್ಧಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ರುದ್ರ ಪಠನ ಮಾಡಲಾಯಿತು. ಸಮಿತಿ ಹಾಗೂ ಭಕ್ತರಿಂದ ನಿಧಿ ಸಮರ್ಪಣೆ ನಡೆಯಿತು.

ಶ್ರೀರಾಮಚಂದ್ರಾಪುರಮಠದ ಸನ್ನಿಧಿ ಸಂಸ್ಥೆಗಳ ಶ್ರೀಸಂಯೋಜಕ ರಾಮಚಂದ್ರ ಭಟ್ ಕೆಕ್ಕಾರು, ಸಿದ್ಧಾಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಉಪಾಧ್ಯಕ್ಷ ರಾಮಕೃಷ್ಣ ರಾವ್, ಸಿಂಧು ರಾವ್, ಕಾರ್ಯದರ್ಶಿ ಶ್ರೀಕಾಂತ ಹೆಗಡೆ ಯಲಹಂಕ, ಕೋಶಾಧಿಕಾರಿ ರಾಮಕೃಷ್ಣ ಹೆಗಡೆ ಕಲ್ಲಬ್ಬೆ, ಉದ್ಯಮಿ ಗುರುರಾಜ್ ನಾಡಿಗೇರ್, ಗೋಆಶ್ರಮ ವ್ಯವಸ್ಥಾಪಕ ರಾಮಚಂದ್ರ ಅಜ್ಜಕಾನ, ಶಿಲ್ಪಿ ಅಶೋಕ್ ಕಾರ್ಕಳ, ಕೃಷ್ಣ ಹೆಗಡೆ, ಕೃಷ್ಣ ಭಟ್, ಅನಂತ ಹೆಗಡೆ, ಶ್ರೀಧರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *