ಮೃದಂಗ, ಸಂಗೀತ ಚಿತ್ರಕಲೆಯಲ್ಲಿ ಸಾಧನೆಗೈಯ್ಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ರಾಮಕುಂಜ ಗ್ರಾಮದ ಕೆ. ನರಸಿಂಹ ಭಟ್ ಹಾಗು ಸಂಧ್ಯಾ ಸರಸ್ವತಿಯ ಸುಪುತ್ರ ಕೆ. ಶ್ರೀ ಚರಣ.
ಏಳನೇ ವಯಸ್ಸಿನಿಂದ ಮೃದಂಗ ಮತ್ತು ಸಂಗೀತ ಕಡೆ ಚಿತ್ತವನಿರಿಸಿ ವಿದ್ವಾನ್ ಕಾಂಚನ ಎ. ಈಶ್ವರ ಭಟ್ಟ ಇವರಲ್ಲಿ ಕಲಿಯುತ್ತಿದ್ದು, 2014 ರಲ್ಲಿ ಸಂಗೀತ ಜೂನಿಯರ್ ಗ್ರೇಡ್ ನ್ನು ಹಾಗು 2017 ರಲ್ಲಿ ಮೃದಂಗ ಜೂನಿಯರ್ ಗ್ರೇಡ್ ನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಇದೀಗ ಮೃದಂಗದಲ್ಲಿ ಸೀನಿಯರ್ ಅಭ್ಯಾಸವನ್ನು ಮುಂದುವರಿಸುತ್ತಾ ಗುರುಗಳ ನಿರ್ದೇಶನದಲ್ಲಿ ಹಲವಾರು ಸಂಗೀತ ಮತ್ತು ವಾದ್ಯ ಕಛೇರಿಗಳಲ್ಲಿ ಮೃದಂಗ ಸಾಥ ನೀಡಿರುತ್ತಾರೆ. ಮಂಗಳೂರು ಆಕಾಶವಾಣಿ ನಡೆಸಿದಂತಹ
ಪಿ. ಯು. ಸಿ ವಿಭಾಗದ ಮಕ್ಕಳ ಕಾರ್ಯಕ್ರಮದಲ್ಲಿ ಮೃದಂಗ ತನಿ ಆರ್ವತನವನ್ನು ನೀಡಿದ್ದಾರೆ.
*”ಚಿತ್ರಕಲೆಯ ಕಡೆಗೆ ಒಲವು*”
ಸುಮಾರು 12 ನೇ ವಯಸ್ಸಿಗೆ ಹವ್ಯಸವಾಗಿ, ಶ್ರೀಗುರುಗಳ ಭಾವಚಿತ್ರವನ್ನು ಚಿತ್ರಿಸಿ, ಅವರ ಆಶೀರ್ವಾದ ಮಂತ್ರಾಕ್ಷತೆ ಪಡೆದು ನಂತರ fountain, potrait drawing, pencil sketch, water color painting, Acrylic painting, plastic of pains caving, clay modling, ಕಸದಿಂದ ರಸ ಇತ್ಯಾದಿಗಳನ್ನು ನನ್ನ ಸಾಧನಾಕ್ಷೇತ್ರವಾಗಿದೆ ಹಾಗು batcholer of visual arts ಪದವಿಗೆ ಮಂಗಳೂರಿನ ಹೆಸರಾಂತ ಕಾಲೇಜಿಗೆ ಸೇರಿಕೊಂಡಿದ್ದಾರೆ ಎನ್ನುತ್ತಾರೆ ಕೆ. ಶ್ರೀಚರಣ.
Shreecahrana Arts ಎಂಬ ಹೆಸರಲ್ಲಿ Instagram page ಹೊಂದಿದ್ದು ಇವರೆಲ್ಲ ಚಿತ್ರಗಳನ್ನು ಪ್ರಕಟಿಸಿದ್ದಾರೆ. Visual artist ಆಗಬೇಕೆಂಬ ಗುರಿಯನ್ನು ಹೊತ್ತ ಶ್ರೀಚರಣವರ ಕನಸು ನನಸಾಗಲಿ ಎಂಬ ಶುಭಹಾರೈಕೆ ನಮ್ಮದು.