ಮಿಂಚಿನ ವೇಗದಲ್ಲಿ ಸಾಧನೆಗೈಯುತ್ತಿರುವ ಯುವ ಪ್ರತಿಭೆ ವಿದುಷಿ ವಾಣಿಶ್ರೀ ವಿ.

ಅಂಕುರ

 

ಭರತನಾಟ್ಯ ದೇಶದ ಸುಂದರ ನೃತ್ಯ ಪ್ರಕರಗಳಲ್ಲಿ ಒಂದು.
ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯಕಲೆ…ಭರತನಾಟ್ಯದ ವೈಭವವನ್ನು ಬಣ್ಣಿಸಲು ಅಸಾಧ್ಯ.ಅಂತಹ
ಭರತನಾಟ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆಗುರುತು ಮೂಡಿಸುತ್ತಿದ್ದಾರೆ ವಿದುಷಿ ವಾಣಿಶ್ರೀ ವಿ.
ದಕ್ಷಿಣ ಕನ್ನಡ ಜಿಲ್ಲೆಯ ಶಂಕರನಾರಾಯಣಭಟ್ ಮತ್ತು ಮಮತಾ ದಂಪತಿಗಳ ಪುತ್ರಿ ನಾಲ್ಕು ವರ್ಷದ ಆ ಎಳೆಯ ವಯಸ್ಸಿನಲ್ಲೇ ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕದ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾ ಮಣಿ ಶೇಖರ್ ಹಾಗೂ‌ ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್ ಇವರ ಶಿಷ್ಯ ವೃತ್ತಿ ಪಡೆದು ನಿರಂತರ ನೃತ್ಯಭ್ಯಾಸದ್ದಲ್ಲಿ ತೊಡಗಿಸಿಕೊಂಡು ಸಣ್ಣವಯಸ್ಸಿನಲ್ಲೇ ದೊಡ್ಡ ವೇದಿಕೆಯ ಮೆಟ್ಟಿಲೇರಿತ್ತಿರುವುದು ನಮಗೆಲ್ಲ ಸಂತಸದ ವಿಷಯ.

ಇವರು ಭರತನಾಟ್ಯದ ಜೂನಿಯರ್ ಸೀನಿಯರ್ ಹಾಗೂ ವಿದ್ವತ ಪರೀಕ್ಷೆಯಲ್ಲಿ ಕೂಡ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ.

ಎಳೆಯ ವಯಸ್ಸಿನಿಂದಲೇ ಕಲೆಯ ಕಡೆ ತಲೆ”

ಶಾಲಾ ದಿನಗಳಿಂದಲೇ ಹಲವಾರು ಛದ್ಮವೇಶ ದೇಶಭಕ್ತಿ ಗೀತೆ ಗಾಯನ, ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಮಾರು 500ಕ್ಕೂ ಹೆಚ್ಚು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಜಿಲ್ಲಾಮಟ್ಟ,ರಾಜ್ಯಮಟ್ಟ,ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

9ನೇ ತರಗತಿಯಲ್ಲಿರುವಾಗಲೇ ಭರತನಾಟ್ಯ ಕ್ಷೇತ್ರದ ವಿಶೇಷ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಈಕೆಯ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ರಾಗ ತರಂಗ ಸಂಸ್ಥೆಯು ಮಕ್ಕಳ ಸಾಂಸ್ಕೃತಿಕ ಕಲೋತ್ಸವವಾದ ಬಾಲ ಪ್ರತಿಭೋತ್ಸವದ ಉಪಾಧ್ಯಕ್ಷಯಾದ ಹೆಗ್ಗಳಿಕೆ ಇವರದ್ದು.
ಹಲವಾರು ಪ್ರತಿಷ್ಠಿತ ವೇದಿಕೆಗಳಾದ ಕರಾವಳಿ ಉತ್ಸವ, ಹಂಪಿ ಉತ್ಸವ, ಆಳ್ವಾಸ್ ನುಡಿಸಿರಿ , ವಿರಾಸತ್ ಹಾಸನಾಂಬೆ ಸನ್ನಿಧಿ, ಮೈಸೂರು ಬೆಂಗಳೂರು, ಚೆನ್ನೈ , ದೆಹಲಿ ,ಮುಂಬೈ, ತಿರುಪತಿ ತಿರುಮಲ ಸನ್ನಿಧಾನ, ಕಾಸರಗೋಡು ಹೀಗೆ ರಾಜ್ಯಾದ್ಯಂತ ಅಷ್ಟೇ ಅಲ್ಲದೆ ದೇಶಾದ್ಯಂತ ಹಲವಾರು ವೇದಿಕೆಗಳಲ್ಲಿ ತನ್ನ ಗುರುವಂದದವರೊಂದಿಗೆ ಕಾರ್ಯಕ್ರಮವನ್ನು ನೀಡುತ್ತಾ ಬಂದಿದ್ದಾರೆ.
ಕಳೆದ ಎರಡು 2019 ನೇ ಸಾಲಿನಲ್ಲಿ ದುಬೈನಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ತನ್ನ ಗುರುಗಳೊಂದಿಗೆ ನೃತ್ಯ ಪ್ರದರ್ಶನವನ್ನು ನೀಡಿರುತ್ತಾರೆ.

2020ನೇ ಸಾಲಿನಲ್ಲಿ ಕರ್ನಾಟಕ ಸರಕಾರವು ಭರತನಾಟ್ಯಕ್ಕೆ ನೀಡಲಾಗುವ ವಿದ್ಯಾರ್ಥಿವೇತನಕ್ಕೆ ಭಾಜನರಾಗಿದ್ದಾರೆ.
ಕೋರೊನಾ ತನ್ನ ಕಬಂಧ ಬಾಹುವಿನಿಂದ ವಿಶ್ವವನ್ನೇ ಆಕ್ರಮಿಸಿಕೊಂಡಾಗ ಜರುಗಿದ ಲಾಕ್ಡೌನ್ ಸಂದರ್ಭದಲ್ಲಿ ನೃತ್ಯ ನಿರಂತರ, ಸಮ್ಮಿಲನ, ನೃತ್ಯೋತ್ಸವ,ಮೊದಲಾದ ಆನ್ಲೈನ್ ಕಾರ್ಯಕ್ರಮಗಳನ್ನು ನೀಡಿ ಹಾಗೂ ತನ್ನ ವಿದ್ಯೆಯನ್ನು ತನಗೆ ಮಾತ್ರ ಸೀಮಿತವಾಗಿರಿಸಿಕೊಳ್ಳದೆ ಹಲವಾರು ಆಸಕ್ತಿ ವೃತ್ತಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣವನ್ನು ನೀಡಿದ್ದಾರೆ.
ಕಲೆ ಮತ್ತು ಕಲಾವಿದರನ್ನು ಹುರಿದುಂಬಿಸುವ ಸಲುವಾಗಿ ನೃತ್ಯಾವರ್ತನ ಎನ್ನುವ ಸ್ಪರ್ಧೆಯನ್ನು ಏರ್ಪಡಿಸಿ, ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಾಳುಗಳಿಗೂ ನೃತ್ಯ ಪ್ರದರ್ಶನದ ಅವಕಾಶವನ್ನು ಕಲ್ಪಿಸಿ ಕೊಟ್ಟಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪಥಮವಾಗಿ 2019 ಡಿಸೆಂಬರ್ ತಿಂಗಳ 30 ನೇ ತಾರೀಖಿನಂದು ಗುರು ಹಿರಿಯರ ಆಶೀರ್ವಾದದೊಂದಿಗೆ ಮಂಗಳೂರಿನ ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಂಪ್ರದಾಯಕವಾಗಿ ತನ್ನ ರಂಗಪ್ರವೇಶವನ್ನು ನಟರಾಜ ಆರಾಧನೆಯೊಂದಿಗೆ ವೈದಿಕ ಸಂಪ್ರದಾಯದಂತೆ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ದಿನಾಂಕ 02/02/2020 ರಂದು ನಗರದ ಪುರಭವನದಲ್ಲಿ ನೃತ್ಯೋಪಾಸನಾ ಎಂಬ ಏಕಾಂತ ನೃತ್ಯ ಪ್ರದರ್ಶನವನ್ನು ನಿರ್ವಹಿಸಿ ನೆರೆದವರ ಪ್ರಶಂಸೆಯನ್ನು ಗಳಿಸಿರುತ್ತಾರೆ.
ಈಕೆಯ ಅದ್ಭುತ ಸಾಧನೆಯನ್ನು ಪರಿಗಣಿಸಿ ಇತ್ತೀಚಿಗೆ 14/02/2020 ರಂದು ಮಾಣಿ ಪೆರಾಜೆ ಮಠದಲ್ಲಿ ಪರಮ ಪೂಜ್ಯ ಗುರುಗಳಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರಿಂದ ಪ್ರತಿಭಾ ಪುರಸ್ಕಾರವನ್ನು ಮತ್ತು ಆಶೀರ್ವಾದವನ್ನು ಪಡೆದುಕೊಂಡಿರುತ್ತಾರೆ.
ಭರತನಾಟ್ಯ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಳ್ಳಬೇಕೆಂಬ ಮಹದಾಸೆಯನ್ನು ಹೊಂದಿದ್ದೇನೆ ಎನ್ನುತ್ತಾರೆ ವಿದುಷಿ ವಾಣಿಶ್ರೀ ವಿ.
ಪ್ರಸ್ತುತ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಭರತನಾಟ್ಯ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಗುರು ಹಿರಿಯರ ಆಶೀರ್ವಾದದೊಂದಿಗೆ ಈಕೆಯ ಕನಸು ನನಸಾಗಲಿ ಹಾಗೂ ಇನ್ನಷ್ಟು ಸಾಧನೆ ಮತ್ತು ಯಶಸ್ಸು ದೊರೆಯುವಂತಗಾಲಿ ಎಂಬ ಶುಭ ಹಾರೈಕೆ ನಮ್ಮದು.

Author Details


Srimukha

Leave a Reply

Your email address will not be published. Required fields are marked *