ಬಾಲ ಪ್ರತಿಭೆ

ಅಂಕುರ

 

ಯಕ್ಷಗಾನದಲ್ಲಿ ಚಂಡೆ, ಮದ್ದಲೆಯೂ ತನ್ನದೇ ಆದ ಮಹತ್ವ ಪಡೆದಿದೆ. ಅಂತಹ ಕಲೆಯಲ್ಲಿ ಮುನ್ನಡೆಯುತ್ತಿರುವ ಹನ್ನೆರಡು ವರ್ಷದ ಶ್ರೀವತ್ಸ. ಈತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗುಡ್ಡೆದಿಂಬ ಮಂಜುನಾಥ್ ಮತ್ತು ಅರ್ಚನಾ ಅವರ ಸುಪುತ್ರ.


ಅಜ್ಜ ಸೂರ್ಯನಾರಾಯಣ ಚಂಡೆ ಹಾಗೂ ತಂದೆ ಮಂಜುನಾಥ್ ಮದ್ದಲೆ ವಾದಕರು ಹಾಗಾಗಿ ರಕ್ತಗತವಾಗಿ ಬಳುವಳಿಯಾಗಿ ಬಂದ ಕಲೆ. ಹೀಗೆ ಬಾಲ್ಯದಿಂದಲೇ ಮನೆಯಲ್ಲಿ ಕಲಾ ಸರಸ್ವತಿಯ ಆರಾಧನೆಯ ಪ್ರಭಾವದಿಂದ ಬಾಲ್ಯದಿಂದಲೇ ಚಂಡೆ, ಮದ್ದಲೆಗಳನ್ನು ನುಡಿಸುತ್ತ ಬೆಳೆದು ಬಂದಿದ್ದರಿಂದ ಚೆಂಡೆವಾದನದ ಮೇಲೆ ಹೆಚ್ಚು ಒಲವು ಎನ್ನುತ್ತಾರೆ ಪೋಷಕರು.


ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಮನೆಗೆ ಭೇಟಿ ನೀಡಿದಾಗ ಈತನಿಗೆ ಕೇವಲ ಐದು ವರ್ಷದ ಪುಟಾಣಿ ತನ್ನ ಪುಟ್ಟ ಕೈಗಳಿಂದ ಚಂಡೆವಾದನ ಮೂಲಕ ಸ್ವಾಗತ ನೀಡಿದಾಗ ಶ್ರೀಸಂಸ್ಥಾನದವರ ಕೃಪಾಶೀರ್ವಾದದಿಂದ ಸಾರ್ವಜನಿಕ ಪ್ರದರ್ಶನಗಳು ಆರಂಭಗೊಂಡಿತು‌.
ಪ್ರಸ್ತುತ ಸಾಗರದ ಪ್ರಗತಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀವತ್ಸ ಸರ್ವ ಶ್ರೀಗಳಾದ ಕೆ.ಜಿ.ರಾಮರಾವ್ , ಎನ್ ಬೈಲ್ ಪರಮೇಶ್ವರ ಹೆಗಡೆ, ಕೊಳಗಿ ಕೇಶವ ಹೆಗಡೆ, ಸರ್ವೇಶ್ವರ ಹೆಗಡೆ, ಅನಂತ ನ
ಅನಂತ ದಂತಳಿಕೆ,ಎ‌.ಟಿ. ಯಜ್ಞೇಶ್ವರ ಹೀಗೆ ಮುಂತಾದ ಪ್ರಸಿದ್ಧ ಭಾಗವತರ ಆಶೀರ್ವಾದದೊಂದಿಗೆ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದ್ದು.
2020ರಲ್ಲಿ ದಿ|| ‌ಹೊಸತೋಟ ಮಂಜುನಾಥ ಭಾಗವತರ ಸಂಸ್ಮರಣೆ ಕಾರ್ಯಕ್ರಮ ನೀಡಿದಾಗ ಭಾಗವತ ಆಶೀರ್ವಾದ ಪಡೆದಿರುತ್ತಾರೆ. ಗುರುಭಕ್ತರಾದ ವಂಶವಾಹಿನಿ ಯಕ್ಷ ಮೇಳ(ರಿ) ಗುಂಡುಮನೆ ಇವರು 2021 ರಲ್ಲಿ ಪ್ರೋತ್ಸಾಹ ಸನ್ಮಾನ ಪಡೆದಿರುತ್ತಾನೆ.
ಹೆಚ್ಚಿನ ಚಂಡೆ ವಿದ್ಯಾಭ್ಯಾಸವನ್ನು ಶ್ರೀ ಲಕ್ಷ್ಮೀನಾರಾಯಣ ಸಂಪ ಇವರಿಂದ ಕಲಿತಿದ್ದು ತಬಲದಲ್ಲೂ
ಆಸಕ್ತಿಯನ್ನು ಹೊಂದಿದ್ದರಿಂದ ಶ್ರೀಮತಿ ಚೇತನ ರಾಜೀವ್ ರಾವ್ ಇವರಲ್ಲಿ ಕಳೆದ ಐದು ವರ್ಷಗಳಿಂದ ಅಭ್ಯಾಸ ಮಾಡುತ್ತಿರುವ ಶ್ರೀವತ್ಸನಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಕೊಡುವಂತಂಗಾಲಿ ಎಂಬ ಶುಭಹಾರೈಕೆ ನಮ್ಮದು.

Author Details


Srimukha

Leave a Reply

Your email address will not be published. Required fields are marked *